ಸುಳ್ಯ:ನವರಾತ್ರಿಯ ಪರ್ವ ದಿನಗಳಲ್ಲೊಂದಾದ ಮಹಾನವಮಿ ಪ್ರಯುಕ್ತ ಇಂದು ನಾಡಿನಾದ್ಯಂತ ಆಯುಧ ಪೂಜಾ ಸಂಭ್ರಮ. ಎಲ್ಲೆಡೆ ಆಯುಧ ಪೂಜೆ ವಾಹನ ಪೂಜೆಗಳು ನಡೆಯುತಿದೆ.
ವಿವಿಧ ದೇವಸ್ಥಾನಗಳಲ್ಲಿ, ಭಜನಾ ಮಂದಿರಗಳಲ್ಲಿ, ವಾಹನ ಗ್ಯಾರೇಜ್ಗಳಲ್ಲಿ ವಾಹನ ಪೂಜೆ ನಡೆಸಲು
ರಶ್ ಉಂಟಾಗಿದೆ. ನಗರ, ಗ್ರಾಮೀಣ ಭಾಗಗಳು ಸೇರಿ ಎಲ್ಲೆಡೆ ಪೂಜೆ ನಡೆಸಲು ವಾಹನಗಳ ಸರತಿ ಸಾಲು ಕಂಡು ಬಂದಿದೆ. ಕಚೇರಿಗಳಲ್ಲಿ, ಸಂಸ್ಥೆಗಳಲ್ಲಿ ಮನೆಗಳಲ್ಲಿ ಆಯುಧ ಪೂಜೆ ನಡೆಯಿತು. ಹೂವು, ನಿಂಬೆ ಹುಳಿ, ತೆಂಗಿನ ಕಾಯಿಗೆ ಬೇಡಿಕೆ ಕಂಡು ಬಂದಿದೆ. ವಿವಿಧ ಬಗೆಯ ವರ್ಣಮಯ ಹೂವುಗಳು ಮಾರಾಟಕ್ಕೆ ಇರಿಸಲಾಗಿದೆ. ಸುಳ್ಯದ ವಿವಿಧ ಅಂಗಡಿಗಳಲ್ಲಿ, ಬೀದಿ ಬದಿಗಳಲ್ಲಿ ಸೇವಂತಿಗೆ, ಮಲ್ಲಿಗೆ, ಚೆಂಡು ಹೂವುಗಳ ಮಾರಾಟ ಜೋರಾಗಿತ್ತು.
ವಿವಿಧ ದೇವಾಲಯಗಳಲ್ಲಿ ಆಯುಧ ಪೂಜೆ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ನಾಡಿನಾದ್ಯಂತ ಸಂಭ್ರಮ ಸಡಗರದಿಂದ ಆಯುಧ ಪೂಜೆ ನಡೆಯುತ್ತಿದ್ದು ಸುಳ್ಯ ನಗರದಲ್ಲಿ ಬೆಳಗ್ಗಿನಿಂದ ಭಾರೀ ರಶ್ ಕಂಡು ಬಂದಿದೆ.