*ಅನಿಲ್ ಎಚ್.ಟಿ.
(ಅಯೋಧ್ಯೆಯಿಂದ ಪ್ರತ್ಯಕ್ಷ ವರದಿ)
ಅಯೋಧ್ಯೆ – ಶ್ರೀರಾಮನ ನಗರದಲ್ಲಿ ಮುಂದಿನ ಸೋಮವಾರ ನಡೆಯಲಿರುವ ಅಪೂವ೯ವಾದ ಶ್ರೀರಾಮಮಂದಿರ ಲೋಕಾಪ೯ಣೆ ಮತ್ತು ಶ್ರೀಬಾಲರಾಮನ ಮೂತಿ೯ ಪ್ರತಿಷ್ಟಾಪನೆಗೆ ಈಗಾಗಲೇ ಭಕ್ತಸಾಗರ ದೇವನಗರಿಗೆ ಸಾಗಿಬರುತ್ತಿದೆ. ಉತ್ತರ ಪ್ರದೇಶ, ರಾಜಾಸ್ತಾನ ಮಾತ್ರವಲ್ಲದೇ ಸೀತೆಯ ತವರು ನೇಪಾಳದಿಂದಲೂ ತಂಡೋಪತಂಡವಾಗಿ ಅಯೋಧ್ಯೆಯತ್ತ ಜನ ಬರುತ್ತಲೇ ಇದ್ದಾರೆ.
ಈ ರೀತಿ ಅಯೋಧ್ಯೆಗೆ ಆಗಮಿಸುತ್ತಿರುವ ಭಕ್ತಾಧಿಗಳಿಗೆ ತಂಗಲು ಸೂಕ್ತ ವ್ಯವಸ್ಥೆಗಳನ್ನು ಶ್ರೀರಾಮಮಂದಿರ ಜನ್ಮಭೂಮಿ ತೀಥ೯ ಕ್ಷೇತ್ರ ಟ್ರಸ್ಟ್ ವತಿಯಿಂದ ಕಲ್ಪಿಸಲಾಗಿದೆ. ತೀಥ೯ಕ್ಷೇತ್ರ ಪುರಂ ಹೆಸರಿನ ಟೆಂಟ್ ಸಿಟಿ ಇಲ್ಲಿ ನಿಮಾ೯ಣಾವಾಗಿದೆ. ಮಣಿಪವ೯ತ ಬಡಾವಣೆಯಲ್ಲಿನ 45 ಎಕ್ರೆ ಜಾಗದಲ್ಲಿ ನಿಮಾ೯ಣವಾಗಿರುವ ಟೆಂಟ್ ಸಿಟಿ ಅತ್ಯಾಧುನಿಕ ವ್ಯವಸ್ಥೆಗಳನ್ನೂ ಹೊಂದಿದೆ. ಗಣ್ಯಾತಿಗಣ್ಯ ಅತಿಥಿಗಳು, ಸಿನಿಮಾ ತಾರೆಯರು, ಕ್ರೀಡಾತಾರೆಯರು, ರಾಜಕೀಯ ಗಣ್ಯರು, ಸಾಧುಸಂತರು ಹೀಗೆ
ಸಮಾಜದ ವಿಭಿನ್ನ ರೀತಿಯ ಜನರು ಅಯೋದ್ಯೆಗೆ ಜನವರಿ 22 ರಂದು ಬರಲಿರುವ ಹಿನ್ನಲೆ ಇಂಥವರಿಗಾಗಿ ಟೆಂಟ್ ಸಿಟಿಯಲ್ಲಿ ಸೂಕ್ತ ಸೌಕಯ೯ ಕಲ್ಪಿಸಲಾಗಿದೆ.
ಸೀತಾ ರಸೊಯಿ ಹೆಸರಿನ ಭೋಜನಾಲಯ ಕೂಡ ತೆರೆಯಲಾಗಿದ್ದು ಇಲ್ಲಿ ಊಟ, ಉಪಹಾರಗಳನ್ನು ಬಿಸಿಬಿಸಿಯಾಗಿ ವಿತರಿಸಲಾಗುತ್ತದೆ. ಟೆಂಟ್ ಹೌಸ್ ಗಳಲ್ಲಿ ಮಂಚ, ಹಾಸಿಗೆ, ಕಂಬಳಿಗಳನ್ನು ನೀಡಲಾಗಿದ್ದು ಪ್ರತೀ ಟೆಂಟ್ ನ್ನು ಶೀಟ್ ಗಳಲ್ಲಿ ತಯಾರಿಸಲಾಗಿದೆ. ಇದರಿಂದಾಗಿ ಶೀಟ್ ನೊಳಕ್ಕೆ ತಣ್ಣನೆಯ ಗಾಳಿ ನುಗ್ಗದೇ ಬಿಸಿಯಾಗಿರುತ್ತದೆ. ಹಾಗೇ ಟೆಂಟ್ ಹೌಸ್ ನಲ್ಲಿ ಆಶ್ರಯ ಪಡೆದವರಿಗೆ ಶೀತಗಾಳಿ, ಪ್ರತಿಕೂಲ ಹವಾಮಾನದಿಂದ ರಕ್ಷಣೆ ನೀಡಲು ಅಧಿಕ ಸಂಖ್ಯೆಯಲ್ಲಿ ಕಂಬಳಿ ವಿತರಿಸಲಾಗಿದೆ. ಜತೆಗೆ ಹೀಟರ್ ಸೌಲಭ್ಯವನ್ನು ಟೆಂಟ್ ಗಳಲ್ಲಿ ಒದಗಿಸಲಾಗಿದೆ. ಅತೀಗಣ್ಯರಿಗಾಗಿನ ಟೆಂಟ್ ಹೌಸ್ ಗಳು ಅತ್ಯಾಧುನಿಕ ರೀತಿಯಲ್ಲಿ ರೂಪಿತವಾಗಿದ್ದು ಎಸಿ ವ್ಯವಸ್ಥೆ, ಟಿವಿ, ಫ್ರಿಡ್ಜ್, ಸುಖಾಸೀನ, ಹೊಂದಿದೆ. ದಿನಕ್ಕೆ 9 ಸಾವಿರ ರು. ದರವಿದೆ. ಡೀಲಕ್ಸ್ ಮತ್ತು ಸೆಮಿಡೀಲಕ್ಸ್ ವಿಬಾಗಗಳಲ್ಲಿಯೂ ಟೆಂಟ್ ಹೌಸ್ ಗಳನ್ನು ಬಾಡಿಗೆಗೆ ನೀಡಲಾಗುತ್ತಿದೆ. ಡಾಮೇ೯ಟರಿ ವ್ಯವಸ್ಥೆಯ ಟೆಂಟ್ ಹೌಸ್ ಗಳನ್ನು ಶ್ರೀರಾಮ ಭಕ್ತರಿಗಾಗಿ 1 ದಿನಕ್ಕಾಗಿ ಉಚಿತವಾಗಿ ತೀಥ೯ಕ್ಷೇತ್ರ ಟ್ರಸ್ಟ್ ನೀಡುತ್ತಿದೆ.

ಅಂತೆಯೇ ಕರಸೇವಕಪುರಂನಲ್ಲಿ ಕೂಡ 1000 ಮಂದಿಗೆ ತಂಗಲು ವ್ಯವಸ್ಥೆ ಕಲ್ಪಿಸಲಾಗಿದ್ದು ಈಗಾಗಲೇ ಕಾಯ೯ಕತ೯ರು ಈ ಟೆಂಟ್ ಗಳಲ್ಲಿ ವಾಸವಾಗಿದ್ದು ಜ.22 ರ ಕಾಯ೯ಕ್ರಮಕ್ಕೆ ಅಗತ್ಯ ಸಹಾಯ ಮಾಡುತ್ತಿದ್ದಾರೆ. ದೇಶದ ನಾನಾ ಕಡೆಗಳಿಂದ ಬಂದಿರುವ 500 ಕ್ಕೂ ಅಧಿಕ ಕಾಯ೯ಕತ೯ರ ಪಡೆ ಕಳೆದ 2 ತಿಂಗಳಿನಿಂದಲೇ ಕರಸೇವಕಪುರಂನಲ್ಲಿದ್ದುಕೊಂಡು ಸ್ವಯಂಸೇವಾ ಕಾಯ೯ಗಳ ಮೂಲಕ ಶ್ರೀರಾಮಮಂದಿರ ಲೋಕಾಪ೯ಣೆ ಸಮಾರಂಭಕ್ಕೆ ಸಹಾಯ ಮಾಡುತ್ತಿದ್ದಾರೆ.
ತಾನು ಕಂಪ್ಯೂಟರ್ ಮೂಲಕ ದಾಖಲೆಗಳನ್ನು ಸಂಗ್ರಹಿಸುವುದಲ್ಲದೇ ಸಾಮಾಜಿಕ ಜಾಲತಾಣಗಳ ನಿವ೯ಹಣೆಗೆ ಸಹಾಯ ಮಾಡುತ್ತಿದ್ದೇನೆ. ಸ್ವಯಂ ಪ್ರೇರಣೆಯಿಂದ 3 ತಿಂಗಳು ಉದ್ಯೋಗಕ್ಕೆ ರಜೆ ಹಾಕಿ ಅಯೋಧ್ಯೆಗೆ ಬಂದಿದ್ದೇನೆ. ಇದು ಖಂಡಿತಾ ಸಹಾಯವಲ್ಲ. ಪ್ರಭು ಶ್ರೀರಾಮನಿಗೆ ನನ್ನಿಂದಾಗುವ ಸಣ್ಣ ಸೇವೆ. ಇದನ್ನು ಸ್ವಯಂ ಪ್ರೇರಣೆಯಿಂದ ಕಿಂಚಿತ್ತೂ ಹಣ ಬಯಸದೇ ಮಾಡುತ್ತಿದ್ದೇನೆ. ಇದಕ್ಕಿಂತ ಮನತೖಪ್ತಿ ಬೇರಿಲ್ಲ ಎಂದು ಪುಣೆಯಿಂದ ಬಂದಿರುವ ಐಟಿ ಉದ್ಯೋಗಿ ವೈಭವಿ ಪಟೇಲ್ ಹೇಳಿದರು. ಮಾಸಿಕ ಲಕ್ಷಗಟ್ಟಲೆ ವೇತನ ಪಡೆಯುವ ಇಂಥ ಅನೇಕ ಯುವಕ, ಯುವತಿಯರು ಸಾಮಾನ್ಯ ಕಾಯ೯ಕತ೯ರಂತೆ ಅಯೋಧ್ಯೆಯಲ್ಲಿ ಸ್ವಯಂಪ್ರೇರಣೆಯಿಂದ ಶ್ರೀರಾಮ ಸೇವೆಯಲ್ಲಿ ನಿರತರಾಗಿದ್ದಾರೆ.
ಅಯೋಧ್ಯೆಯ ಪ್ರಮುಖ ಟೆಂಟ್ ಸಿಟಿಯನ್ನು ರಾಮಮಂದಿರದ ಹೋರಾಟದ ಮುಖ್ಯರುವಾರಿಯಾಗಿದ್ದ ಅಶೋಕ್ ಸಿಂಘಲ್ ಹೆಸರಿನಲ್ಲಿ ರೂಪಿಸಲಾಗಿದೆ. ಮುಖ್ಯ ದ್ವಾರಕ್ಕೆ ಸಿಂಘಲ್ ಹೆಸರಿಟ್ಟು, ಅವರ ಬೖಹತ್ ಫೋಟೋವನ್ನು ಅಳವಡಿಸಲಾಗಿದೆ. ಒಟ್ಟು 6 ಟೆಂಟ್ ಸಿಟಿ ಅಂದರೆ ವಸತಿ ಸೌಲಭ್ಯವುಳ್ಳ ಪ್ರದೇಶಗಳು ಇಲ್ಲಿದೆ. ಮಹಂತ್ ಅವಿರಾಮ್ ದಾಸ್, ಮಹಂತ ವೈದ್ಯನಾಥ್,ಮಹಂತ್ ರಾಮಚಂದ್ರಪರಮಹಂಸ ದಾಸ್,ಸ್ವಾಮಿ ವಾಮದೇವದಾಸ್, ಮುಂತಾದ ಶ್ರೀರಾಮಜನ್ಮಭೂಮಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದವರ ಹೆಸರನ್ನು ಈ ನಗರಗಳಿಗೆ ಇರಿಸಲಾಗಿದೆ. 20, 40, 60 ಮಂದಿ ಆರಾಮವಾಗಿ ತಂಗಬಹುದಾದ ಡಾಮೇ೯ಟರಿಗಳನ್ನು ಈ ಟೆಂಟ್ ಸಿಟಿ ಒಳಗೊಂಡಿದೆ. ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಟೆಂಟ್ ಸಿಟಿಗಾಗಿಯೇ 11 ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ,ಮಾಚ್೯ 15 ರವರೆಗೆ ಟೆಂಟ್ ಸಿಟಿ ಇರಲಿದೆ. ಮುಂದೆ ಹೆಚ್ಚಿನ ಭಕ್ತರು ಅಯೋದ್ಯೆಗೆ ಬರುತ್ತಿದ್ದ ಸಂದಭ೯ ಟೆಂಟ್ ಸಿಟಿ ಮುಂದುವರೆಸಬೇಕೇ ಬೇಡವೇ ಎಂಬುದನ್ನು ತೀಥ೯ಕ್ಷೇತ್ರ ಟ್ರಸ್ಟ್ ನಿಧ೯ರಿಸಲಿದೆ.

ಅಯೋಧ್ಯೆಯಲ್ಲಿನ ಕರಸೇವಕಪುರಂನಲ್ಲಿರುವ ಟೆಂಟ್ ಹೌಸ್ ಬಳಿಯೇ ಶ್ರೀರಾಮಮಂದಿರದ ಭವ್ಯ ಮಾಡೆಲ್ ಇರಿಸಲಾಗಿದೆ. ಶ್ರೀರಾಮಮಂದಿರದ ಸಂಪೂಣ೯ ವಿನ್ಯಾಸ ಇದರಲ್ಲಿದೆ. ನೇರನೋಟಕ್ಕೆ ಬಾಲರಾಮನ ಮೂತಿ೯ ಮಂದಿರದ ಗಭ೯ಗೖಹದಲ್ಲಿ ಕಾಣಿಸಿದರೆ ಒಂದು ಹೆಜ್ಜೆ ಹಿಂದೆ ಹೋಗಿ ದೂರದಿಂದ ವೀಕ್ಷಿಸಿದರೆ ಮೊದಲ ಮಹಡಿಯಲ್ಲಿ ಶ್ರೀರಾಮನ ಮೂತಿ೯ ಪ್ರತಿಷ್ಟಾಪಿಸಿರುವುದು ಕಂಡುಬರುತ್ತದೆ. ತಳಭಾಗ ಮತ್ತು ಮೊದಲ ಮಹಡಿಯಲ್ಲಿನ ಎರಡೂ ರಾಮನ ಮೂತಿ೯ಗಳನ್ನು ಇಲ್ಲಿನ ರಾಮಮಂದಿರದ ವಿನ್ಯಾಸದ ಪ್ರತಿಕೖತಿಯಲ್ಲಿ ನೋಡುವ ಅಪೂವ೯ ವ್ಯವಸ್ಥೆ ಇದಾಗಿದೆ. ಅಂತೆಯೇ ಶ್ರೀರಾಮ ಕಥೆಯನ್ನು ಹೊಂದಿರುವ ವಿವಿಧ ವಿನ್ಯಾಸಗಳು, ವಿದ್ಯುತ್ ಅಲಂಕಾರಗಳು, ಮೂತಿ೯ಗಳು, ಅಯೋಧ್ಯೆ ಇತಿಹಾಸ ಬಿಂಬಿಸುವ ಕಥಾ ಸಾರಾಂಶಗಳು ಕೂಡ ಟಂಟ್ ಸಿಟಿಯಲ್ಲಿ ಕಂಡು ಬರಲಿದೆ. ಈ ಮೂಲಕ ವಾಸ್ತವ್ಯ ಹೂಡುವ ಭಕ್ತರಿಗೆ ಹೊಸ ಲೋಕದ ಅನುಭವ ಮತ್ತುಶ್ರೀರಾಮನ ಇತಿಹಾಸದ ಮಹತ್ವವನ್ನು ತಿಳಿಯಪಡಿಸುವ ಮಹತ್ವದ ಕಾಯ೯ ನಡೆದಿದೆ.ಪ್ರಸ್ತುತ ಮುಖ್ಯ ಟೆಂಟ್ ಗಳಿರುವ ಕರಸೇವಕಪುರಂನಲ್ಲಿಯೇ ವಿಶ್ವಹಿಂದೂ ಪರಿಷತ್ ಕಾಯಾ೯ಲಯ ಇದೆ. ಇಲ್ಲಿನ ಭರತ್ ಕುಟೀರ್ ನಲ್ಲಿ ಮಂದಿರ ನಿಮಾ೯ಣ ಟ್ರಸ್ಟ್ ಕಾಯ೯ದಶಿ೯ ಚಂಪಕ್ ರಾಯ್ ದಿನನಿತ್ಯದ ವಿದ್ಯಮಾನಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. 1989 ರಲ್ಲಿ ವಿಶ್ವಹಿಂದೂ ಪರಿಷತ್ ಮೊದಲ ಬಾರಿಗೆ ರಾಮಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸಂದಭ೯ ಉತ್ತರ ಪ್ರದೇಶ ಸಕಾ೯ರವು 30 ಎಕ್ರೆಯನ್ನು ವಿ.ಹಿಂ.ಪ. ಕ್ಕೆ ನೀಡಿತ್ತು. ಇದೀಗ 10 ಎಕ್ರೆಯನ್ನು ಹೆಚ್ಚುವರಿಯಾಗಿ ನೀಡಲಾಗಿದ್ದು ಇದು ಟೆಂಟ್ ಸಿಟಿ ನಿಮಾ೯ಣಕ್ಕೆ ಸಹಕಾರಿಯಾಗಿದೆ.
ಈಗಾಗಲೇ ಅಯೋಧ್ಯೆಯಲ್ಲಿ ಲಾಡ್ಜ್, ಧಮ೯ಶಾಲಾ, ರೆಸಾಟ್೯ಗಳು ಭತಿ೯ಯಾಗಿರುವುದರಿಂದಾಗಿ ಟೆಂಟ್ ಹೌಸ್ ಗಳೇ ಅತ್ಯಧಿಕ ಸಂಖ್ಯೆಯಲ್ಲಿ ಅಯೋಧ್ಯೆಗೆ ಬರುತ್ತಿರುವ ರಾಮಭಕ್ತರಿಗೆ ಸೂಕ್ತ ವಸತಿ ಸೌಲಭ್ಯ ನೀಡಲಿದೆ. ಜ.22 ರಂದು ಟೆಂಟ್ ಸಿಟಿಗಳಲ್ಲಿ ಬೖಹತ್ ಎಲ್ ಇಡಿ ವಾಲ್ ಅಳವಡಿಸಿ ಇಲ್ಲಿಂದಲೇ ಶ್ರೀರಾಮಮಂದಿರ ಪಟ್ಟಾಭಿಷೇಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಅಯೋಧ್ಯೆ ಪುಟ್ಟ ನಗರವಾಗಿದ್ದು ಲಕ್ಷಾಂತರ ಜನರು ಒಮ್ಮೆಗೆ ಬಂದರೆ ನಿಭಾಯಿಸಲು ಕಷ್ಟಸಾಧ್ಯವಾಗುತ್ತದೆ. ಹೀಗಾಗಿ ಭಕ್ತಾಧಿಗಳು ಜ.22 ರಂದೇ ಸೋಮವಾರ ಅಯೋಧ್ಯೆಗೆ ಬರಲು ಮುಂದಾಗಬೇಡಿ. ಅಂದು ಭಕ್ತರಿಗೆ ಶ್ರೀರಾಮನ ದಶ೯ನಕ್ಕೆ ಅವಕಾಶ ಇಲ್ಲ. ಜ.23 ರಿಂದ ಭಕ್ತಾಧಿಗಳಿಗೆ ದಶ೯ನಕ್ಕೆ ಅವಕಾಶ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿಯೇ ಅಯೋಧ್ಯೆಗೆ ಬರುವುದು ಸೂಕ್ತ. ಜ.22 ರಂದು ಪ್ರತೀಯೋವ೯ರು ಮನೆಯಲ್ಲಿ, ದೇವಾಲಯಗಳಲ್ಲಿ ಶ್ರೀರಾಮಭಜನೆ ಮಾಡುವ ಮೂಲಕ ಶ್ರೀರಾಮನನ್ನು ಪ್ರಾಥಿ೯ಸಿ, ನಿಮ್ಮ ಊರುಗಳಲ್ಲಿ ಬೖಹತ್ ಎಲ್ ಇ ಡಿ ಪರದೆ ಮೂಲಕ ರಾಮಲಲ್ಲಾನ ಪ್ರಾಣ ಪ್ರತಿಷ್ಟಾಪನೆ ವೀಕ್ಷಿಸುವುದೇ ಸೂಕ್ತ ಎಂದು ಶ್ರೀರಾಮಮಂದಿರ ನಿಮಾ೯ಣ ತೀಥ೯ಕ್ಷೇತ್ರ ಟ್ರಸ್ಟ್ ಪ್ರಮುಖರು ಹೇಳಿಕೆ ನೀಡಿದ್ದಾರೆ.

800 ಕಿಮೀ ವಿದ್ಯುತ್ ಸಂಪಕ೯ ಜಾಲ!
ಜನವರಿ 22 ರ ಪ್ರಾಣ ಪ್ರತಿಷ್ಟಾಪನೆ ಹಿನ್ನಲೆಯಲ್ಲಿ ಅಯೋ್ಧ್ಯೆ ನಗರಕ್ಕೆ ವಿದ್ಯುತ್ ಸಂಪಕ೯ ಜಾಲವನ್ನು ವಿಭಿನ್ನರೀತಿಯಲ್ಲಿ ಕಲ್ಪಿಸಲಾಗಿದೆ. ಶ್ರೀರಾಮಮಂದಿರಕ್ಕೆ ಪ್ರತ್ಯೇಕ ವಿದ್ಯುತ್ ಉತ್ಪಾದನಾ ಕೇಂದ್ರ ನಿಮಿ೯ಸಿ ಅದರಿಂದಲೇ ನಿರಂತರ ವಿದ್ಯುತ್ ಸಂಪಕ೯ ಕಲ್ಪಿಸಲಾಗಿದೆ. ಅಯೋಧ್ಯೆ ನಗರಿಯಲ್ಲಿ ವಿದ್ಯುತ್ ಅಲಂಕಾರ, ಧ್ವನಿವಧ೯ಕ ವ್ಯವಸ್ಥೆಗಳಿಗೂ ಯಾವುದೇ ಸಂದಭ೯ ವಿದ್ಯುತ್ ಸಂಪಕ೯ ವ್ಯತ್ಯಯವಾಗದ ರೀತಿಯಲ್ಲಿ 24 ಗಂಟೆಯೂ ಸಂಪಕ೯ ನೀಡಲಾಗುತ್ತಿದೆ. 190 ಕೋಟಿ ರು. ವೆಚ್ಚದ ಯೋಜನೆಯಡಿ ನೆಲದಡಿ ವಿದ್ಯುತ್ ತಂತಿ ಹಾದು ಹೋಗುವಯೋಜನೆ ಜಾರಿಗೆ ಬಂದಿದೆ. ಹೀಗಾಗಿ ಎಲ್ಲಿಯೂ ವಿದ್ಯುತ್ ತಂತಿಗಳು ಕಂಬಗಳ ಮೇಲೆ ಹಾದುಹೋಗುವುದು, ತಂತಿ ನೇತಾಡುತ್ತಿರುವುದನ್ನು ಅಯೋಧ್ಯೆಯಲ್ಲಿ ನೋಡಲು ಸಾಧ್ಯವಿಲ್ಲ. ವಿದ್ಯುತ್ ಇಲಾಖಾಧಿಕಾರಿಗಳ ಮಾಹಿತಿ ಪ್ರಕಾರ ಶ್ರೀರಾಮಮಂದಿರ ಸಂಕೀಣ೯ದ ವ್ಯಾಪ್ತಿಯಲ್ಲಿನ 5 ಕಿ.ಮೀ. ಸೇರಿದಂತೆ ಅಯೋಧ್ಯೆ ನಗರದಾದ್ಯಂತ 800 ಕಿ.ಮೀ. ತಳಮಟ್ಟದಲ್ಲಿ ವಿದ್ಯುತ್ ಸಂಪಕ೯ದ ತಂತಿಗಳು ಹಾದುಹೋಗಿದೆ. ಸೋಲಾರ್ ದೀಪಗಳನ್ನೂ ಬಹುೇತಕ ಕಡೆ ಬಳಸಲಾಗಿದ್ದು ಇದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ತಯಾರಿಕೆಯ ವೆಚ್ಚ ತಪ್ಪಲಿದೆ. ಈ ಯೋಜನೆಯಿಂದಾಗಿ ಅಯೋಧ್ಯೆ ಮಾತ್ರವಲ್ಲ ಅಯೋಧ್ಯೆ ವ್ಯಾಪ್ತಿಯಲ್ಲಿನ 20 ಸಾವಿರ ಮನೆಗಳಿಗೆ ವಿದ್ಯುತ್ ಸಂಪಕ೯ದ ಪ್ರಯೋಜನ ಲಭಿಸಿದೆ.
ಯಾತ್ರಿಕರೇ ಗಮನಿಸಿ..!
ಜನವರಿ 23 ರಿಂದ ಮಾತ್ರ ಭಕ್ತರಿಗೆ ಶ್ರೀರಾಮಮಂದಿರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಸೋಮವಾರ ಭಕ್ತರಿಗೆ ಪ್ರವೇಶ ಇರುವುದಿಲ್ಲ. ಹೀಗಾಗಿ ತರಾತುರಿಯಿಂದ ಅಯೋಧ್ಯೆಗೆ ಬರುವ ಬದಲು ಸಾವಕಾಶವಾಗಿ ಅಯೋಧ್ಯೆಗೆ ಬನ್ನಿ ಎಂದು ಶ್ರೀರಾಮಮಂದಿರ ನಿಮಾ೯ಣ ತೀಥ೯ಕ್ಷೇತ್ರ ಟ್ರಸ್ಟ್ ಹೇಳಿಕೆ ನೀಡಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಇನ್ನು 2-3 ತಿಂಗಳು ಅಯೋಧ್ಯೆಯಲ್ಲಿ ವಿಪರೀತ ಜನದಟ್ಟಣೆ ಇರಲಿದೆ.

(ಅನಿಲ್ ಎಚ್.ಟಿ ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರು)









