*ಅನಿಲ್ ಎಚ್.ಟಿ.
(ಅಯೋಧ್ಯೆಯಿಂದ ಪ್ರತ್ಯಕ್ಷ ವರದಿ)
ಶ್ರೀರಾಮ ಚಂದ್ರನಿಗೆ ತನ್ನೂರಿನಲ್ಲಿಯೇ ನಡೆಯಲಿರುವ ವಿಜೖಂಭಣೆಯ ಪಟ್ಟಾಭಿಷೇಕ ಸಮಾರಂಭಕ್ಕೆ ಇನ್ನು ಕೇವಲ ಒಂದು ವಾರವಿರುವಂತೆಯೇ ದೇಶ ಮಾತ್ರವಲ್ಲ ವಿದೇಶಗಳಿಂದಲೂ ಸಾಕಷ್ಟು ಕೊಡುಗೆಗಳು ಅಯೋಧ್ಯೆಗೆ ಬರುತ್ತಲೇ ಇವೆ. ಇಲ್ಲಿನ ಕರಸೇವಕ ಪುರಂನಲ್ಲಿ ಇಂಥ ಸಾವಿರಾರು ಕೊಡುಗೆಗಳನ್ನು ಸಂಗ್ರಹಿಸಿಡಲಾಗಿದ್ದು, ಜನವರಿ 22 ರಂದು ಮಂದಿರ ಲೋಕಾಪ೯ಣೆಯ ಸಂದಭ೯ ಬಳಸಿಕೊಳ್ಳಲಾಗುತ್ತದೆ.
ಶ್ರೀರಾಮನ ಮೇಲೆ ಜನರಿಗಿರುವ ಪ್ರೀತಿ, ಅಭಿಮಾನದ ದ್ಯೋತಕವಾಗಿ

ಇಲ್ಲಿಗೆ ಬಂದು ಸಂಗ್ರವಾಗುತ್ತಿರುವ ಕೊಡುಗೆಗಳೇ ಸಾಕ್ಷಿ ಎಂಬಂತಿದೆ. ಭಾರತದ ಮೂಲೆಮೂವೆಗಳಿಂದಲೂ ಶ್ರೀರಾಮ ಪಟ್ಟಾಭಿಷೇಕಕ್ಕೆ ನಾನಾ ರೂಪದಲ್ಲಿ ಉಡುಗೊರೆಗಳು ಹರಿದುಬರುತ್ತಿದೆ. ಶ್ರೀರಾಮ ಜನ್ಮಭೂಮಿ ತೀಥ೯ ಕ್ಷೇತ್ರ ಟ್ರಸ್ಟ್ ಯಾವುದೇ ಕೊಡುಗೆಗಳನ್ನು ನೀಡಿ ಎಂದು ಜನತೆಗೆ ಮನವಿ ಮಾಡದೇ ಹೋದರೂ ಸ್ವಯಂಪ್ರೇರಣೆಯಿಂದ ಜನರು ವೈವಿಧ್ಯಮಯ ವಸ್ತುಗಳನ್ನು ನೀಡುತ್ತಲೇ ಇದ್ದಾರೆ. ರಾಮಮಂದಿರ ಭಕ್ತಾಪ೯ಣೆಯ ದಿನ ಸಮೀಪಿಸುತ್ತಿರುವಂತೆಯೇ ಇಂಥ ಕೊಡುಗೆಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಇದೆ.
ಅಯೋದ್ಯೆಯಲ್ಲಿರುವ ಕರಸೇವಕಪುರಂನಲ್ಲಿ ಪ್ರತ್ಯೇಕವಾಗಿ ಕೊಡುಗೆಗಳ ದಾಸ್ತುನು ಮಳಿಗೆ ತೆರೆಯಲಾಗಿದೆ. ಇಲ್ಲಿ ವೀಕ್ಷಿಸಿದರೆ ರಾಮನ ಪಟ್ಟಾಭಿಷೇಕ ಎಷ್ಟೊಂದು ವೈಭವದಿಂದ ನಡೆಯಲಿದೆ ಎಂಬುದು ಮನದಟ್ಟಾಗುತ್ತದೆ. ಬಡವ ಬಲ್ಲಿದ ಎಂಬ ತಾರತಮ್ಯ ಇಲ್ಲದೇ ಕೈಲಾದಷ್ಟು ಕಾಣಿಕೆಯನ್ನು ವಿವಿಧ ವಸ್ತುಗಳ ರೂಪದಲ್ಲಿ ಜನ ನೀಡುತ್ತಲೇ ಇದ್ದಾರೆ.
ಜ.22 ರಂದು ಲಕ್ಷಾಂತರ ಭಕ್ತರಿಗೆ ಅನ್ನಸಂತಪ೯ಣೆಗೆ ಬೇಕಾಗುವ ಅಕ್ಕಿಯನ್ನು ರಾಜಾಸ್ತಾನದ ವ್ಯಾಪಾರಿಯೋವ೯ರು ನೀಡಿದ್ದರೆ ಮಹಾರಾಷ್ಟ್ರದಿಂದ ಮತ್ತೋವ೯ ವ್ಯಾಪಾರಿ ಅಡುಗೆಗೆ ಬೇಕಾದ ಎಣ್ಣೆಯನ್ನು 10 ಲಾರಿ ಲೋಡ್ ಗಳಲ್ಲಿ ಅಯೋಧ್ಯೆಗೆ ರವಾನಿಸಿದ್ದಾರೆ. ಸಿಹಿ ಖಾದ್ಯವಂತೂ ಲೆಕ್ಕವೇ ಇಲ್ಲದಷ್ಟು ಬರುತ್ತಿದ್ದು ಕೆಲವೇ ದಿನಗಳಲ್ಲ ಹಾಳಾಗುವ ಸಾಧ್ಯತೆಯಿರುವ ಸಿಹಿ ಖಾದ್ಯವನ್ನು ಲಾಡು, ಬಫಿ೯, ಪೇಡಾ ಇತ್ಯಾಧಿ ಸಿಹಿ ಖಾದ್ಯವನ್ನು ಈಗಾಗಲೇ ದಿನನಿತ್ಯ ಇಲ್ಲಿಗೆ ಆಗಮಿಸುವ ಭಕ್ತರಿಗೆ ವಿತರಿಸಲಾಗುತ್ತಿದೆ.

ಚಿತ್ರಗಳು: ಅನಿಲ್.ಎಚ್.ಟಿ.
ಕೆಲವೊಂದು ತಿನಿಸುಗಳು ಕೆಲವೇ ದಿನಗಳು ಮಾತ್ರ ಬಳಕೆಗೆ ಯೋಗ್ಯವಾಗಿರುತ್ತದೆ. ಆದರೆ ದೇಶವ್ಯಾಪಿಯ ಜನರು ಸಾವಿರಾರು ಸಂಖ್ಯೆಯಲ್ಲಿ ಸಿಹಿಪದಾಥ೯ಗಳನ್ನು ಶ್ರೀರಾಮನ ಮೇಲಿನ ಪ್ರೀತಿಯಿಂದ ಇಲ್ಲಿಗೆ ಕಳುಹಿಸುತ್ತಿದ್ದಾರೆ. ಇಂಥವನ್ನೆಲ್ಲಾ ಕಳುಹಿಸಬೇಡಿ ಎಂದ ರಾಮಪ್ರಭುವಿನ ಪ್ರೀತಿಪಾತ್ರ ಭಕ್ತರಿಗೆ ಹೇಳಲು ಮನಸ್ಕು ಒಪ್ಪುತಿಲ್ಲ. ಇಂಥ ಅಭಿಮಾನಕ್ಕೆ ಸದಾ ಚಿರಋಣಿ ಎಂದು ಟ್ರಸ್ಟ್ ನ ಪ್ರಧಾನ ಕಾಯ೯ದಶಿ೯ ಚಂಪಕ್ ರಾಯ್ ಹೇಳಿದರು.
ಭಾರತದಿಂದ ಮಾತ್ರ ಉಡುಗೊರೆಗಳು ಅಯೋದ್ಯೆಗೆ ಬರುತ್ತಿದೆಯೇ ಎಂದರೇ ಖಂಡಿತಾ ಇಲ್ಲ. ಅಮೇರಿಕಾ, ಜಪಾನ್, ಶ್ರೀಲಂಕಾದಿಂದಲೂ ಅನೇಕ ಕೊಡುಗೆಗಳು ಲಭಿಸಿದೆ. ವಿಶೇಷವಾಗಿ ಸೀತಾಮಾತೆಯ ತವರಾದ ನೇಪಾಳದಿಂದ ಅಲ್ಲಿನ ಜನತೆ ರಾಜಮಯಾ೯ದೆಯಿಂದ ವೈವಿಧ್ಯಮಯ ಕೊಡುಗೆ ನೀಡಿದ್ದಾರೆ. ಇದನ್ನು ಶ್ರೀರಾಮ ಮಂದಿರ ಲೋಕಾಪ೯ಣೆ ಸಂದಭ೯ ಬಳಸಿಕೊಳ್ಳಲಾಗುತ್ತದೆ
ನೇಪಾಳದಿಂದ ಶ್ರೀರಾಮ ಪಟ್ಟಾಭಿಷೇಕಕ್ಕೆ ಬಳಕೆ ಮಾಡಲು 251 ಲೀಟರ್ ಪವಿತ್ರವಾದ ಜಲ ಬೖಹತ್ ಕಳಸದಲ್ಲಿ ನೀಡಲಾಗಿದ್ದು, ನೇಪಾಳದಲ್ಲಿನ ಶ್ರೀರಾಮಭಕ್ತರು ಅಲ್ಲಿನ ಪವಿತ್ರ ನದಿಗಳಾದ ಬಾಗ್ಮತಿ, ಗಂಗಾ ಸಾಗರ್, ನಾರಾಯಣಿ,ಧೂದ್ ಮತಿ, ಮಹಾಕಾಳಿ, ಗಂಡಕಿ, ಕೋಶಿ, ಕಮಲ ನದಿಗಳಿಂದ ಜಲವನ್ನು ಸಂಗ್ರಹಿಸಿ ರವಾನಿಸಿದ್ದಾರೆ. ಭಾರತದ ತಲಕಾವೇರಿಯಲ್ಲಿನ ಕಾವೇರಿ ಸೇರಿದಂತೆ ಪವಿತ್ರ ನದಿಗಳಾದ ಗಂಗೆ, ತುಂಗ, ಸರಸ್ವತಿ, ಯಮುನಾ, ಗೋದಾವರಿ ಮತ್ತಿತರ ನದಿಗಳ ತೀಥ೯ದೊಂದಿಗೆ ನೇಪಾಳದಿಂದ ತರಲಾದ ತೀಥ೯ವನ್ನು ಕೂಡ ಜ.22 ರಂದು ರಾಮ ಪಟ್ಟಾಭಿಷೇಕ ಸಂದಭ೯ ರಾಮ, ಸೀತೆ, ಲಕ್ಷ್ಮಣ, ಹನುಮಂತನ ಮೂತಿ೯ಗಳ ಅಭಿಷೇಕಕ್ಕೆ ಬಳಸಲಾಗುತ್ತದೆ. ನೇಪಾಳದಿಂದ ಚಿನ್ನದ ಆಭರಣ, ವಸ್ತ್ರಗಳು, ಬೆಳ್ಳಿಯ ಪಾದುಕೆ, ಬೆಳ್ಳಿಯ ಪಾತ್ರೆಗಳು, ಒಣಹಣ್ಣುಗಳು ಅಲಂಕಾರಿಕ ವಸ್ತುಗಳು, ಸಿಹಿತಿನಿಸುಗಳೂ ಸೇರಿದಂತೆ 30 ಲಾರಿಗಳಲ್ಲಿ ಅಯೋಧ್ಯೆ ತಲುಪಿದೆ.ಇಂಥ ಕೊಡುಗೆಗಳನ್ನು ಸೀತೆಯ ತಂದೆಯಾದ ಜನಕ ಮಹಾರಾಜ್ ಊರು ನೇಪಾಳದ ಜನಕಪುರದಿಂದಲೇ ಬಂದಿರುವುದು ವಿಶೇಷ. ಒಂದು ರೀತಿಯಲ್ಲಿ ಇದನ್ನು ಅಳಿಯ ರಾಮ ಮತ್ತು ತಮ್ಮೂರಿನ ಮಗಳಾದ ಸೀತಾಮಾತೆಯರ ವೈಭವದ ಪಟ್ಟಾಭಿಷೇಕ ಸಮಾರಂಭಕ್ಕೆ ತವರು ದೇಶದ ಉಡುಗೊರೆ ಎಂದೇ ವಣಿ೯ಸಬಹುದಾಗಿದೆ.

ಹಾಗೆಯೇ ನೇಪಾಳದಿಂದ ಅಯೋಧ್ಯೆಗೆ ಸಾಲಿಗ್ರಾಮವನ್ನು ಕೂಡ ಕಳುಹಿಸಲಾಗಿದೆ. ರಾಜಾಸ್ತಾನದಿಂದ ಬಣ್ಣ ಬಣ್ಮದ ಪರಿಮಳಯುಕ್ತ ಜಲವನ್ನೂ ವ್ಯಾಪಾರಿಯೋವ೯ರು ರಾಮಮಂದಿರಕ್ಕೆ ಬರುವ ಭಕ್ತರಿಗೆ ಸಿಂಚನ ಮಾಡಲು ರವಾನಿಸಿದ್ದಾರೆ. ಬಾಲರಾಮನಿಗೆ ನೇವೈದ್ಯ ಮಾಡಲೆಂದು ಛತ್ತೀಸ್ ಘಡ್ ನಿಂದ 3 ಸಾವಿರ ಕ್ವಿಂಟಾಲ್ ಅಕ್ಕಿ ಬಂದಿದೆ. ಸೈಕಲ್ ನಲ್ಲಿ ನೇಪಾಳದಿಂದ ಬಂದ ಪಿಯುಶ್ ಚತುವೇ೯ದಿ ಎಂಬ ಯುವಕ ತನ್ನೊಂದಿಗೆ ಹತ್ತಾರು ಕಡ್ಡಿಗಳನ್ನು ತಂದ. ಇದೇನಿದು ಎಂದು ಕೇಳಿದಾಗ ಶ್ರೀರಾಮ ಪಟ್ಟಾಭಿಷೇಕ ಸಂದಭ೯ ಹವನದಲ್ಲಿ ಬಳಸಲು ದೂಪದ ಕಟ್ಟಿಗೆಗಳನ್ನು ತಂದಿರುವುದಾಗಿ ಹೆಮ್ಮೆಯಿಂದ ಹೇಳಿದ. ಎಷ್ಟು ದಿನ ಸೈಕಲ್ ನಲ್ಲಿ ಪ್ರಯಾಣಿಸಿ ಇಲ್ಲಿಗೆ ತಲುಪಿದ್ದೀರಿ ಎಂಬ ಪ್ರಶ್ನೆಗೆ 1,800 ಕಿ.ಮೀ. ದೂರವನ್ನು 26 ದಿನಗಳಲ್ಲಿ ಕ್ರಮಿಸಿ ಬಂದಿರುವುದಾಗಿ ಹೇಳಿದರು. ಆಯಾಸದಿಂದ ಸಾಕಷ್ಟು ಬಳಲಿದ್ದ ಈ ಯುವಕ ತನ್ನ ಕಿರುಕಾಣಿಕೆಯನ್ನು ಅಯೋಧ್ಯೆಯ ಸಂಗ್ರಹಾಲಯಕ್ಕೆ ಒಪ್ಪಿಸಿದಾಗ ಆತನ ಕಣ್ಣಿನಲ್ಲಿ ಕಂಡುಬಂದ ತೖಪ್ತಿಯ ಮಿಂಚು ಶ್ರೀರಾಮನಿಗೆ ಎಂಥ ಭಕ್ಕರಿದ್ದಾರೆ ಎಂಬುದನ್ನು ಸೂಚಿಸುವಂತಿತ್ತು. ಜೈಶ್ರೀರಾಮ್ ಎಂದು ಘೋಷಣೆ ಕೂಗಿದ ಪಿಯುಷ್ ಮತ್ತೆ ಸೈಕಲ್ ನಲ್ಲಿ ತನ್ನೂರಿಗೆ ವಾಪಾಸ್ ತೆರಳುವರು.
ಥೈಲ್ಯಾಂಡ್ ನಿಂದ ಕೂಡ ರಾಮಮಂದಿರ ಲೋಕಾಪ೯ಣೆ ಸಂದಭ೯ ಬಳಸಲು ಪವಿತ್ರ ಮೖತ್ತಿಕೆ ಬಂದಿದೆ. ರಾವಣ ಸೀತೆಯನ್ನು ಕೂಡಿಹಾಕಿದ್ದ ಅಶೋಕವನದಲ್ಲಿದ್ದ ಕಿರುಕಲ್ಲನ್ನು ಕಾಣಿಕೆಯಾಗಿ ನೀಡಿದ್ದರೆ,
ದರಿಯಾಪುಪದ ಭಾರತೀಯ ದಬಾಗಾರ್ ಸಂಘವು ತಯಾರಿಸಿರುವ 56 ಇಂಚುಗಳ ನಗಾರಿ ಈಗಾಗಲೇ ಪ್ರಸಾದ ಕೇಂದ್ರದಲ್ಲಿ ಕಣ್ಮನ ಸೆಳೆಯುತ್ತಿದ್ದು ಇದಕ್ಕೆ ಚಿನ್ನದ ಹಾಳೆಯಿಂದ ಇದನ್ನು ಸುತ್ತಲಾಗುತ್ತದೆ.
ಆಲಿಘಡ್ ನಿಂದ 10 ಅಡಿ ಎತ್ತರ, 4 ಅಡಿ ಅಗಲವಿರುವ, 9 ಇಂಚು ದಪ್ಪವಿರುವ 400 ಕೆ.ಜಿ. ತೂಕವಿರುವ ಬೀಗ ಕೂಡ ಇಲ್ಲಿದೆ.
8 ಖನಿಜಗಳಿಂದ ತಯಾರಿಸಿರುವ 2 ಸಾವಿರ ಕೆ.ಜಿ. ತೂಕವಿರುವ, 6 ಅಡಿ ಎತ್ತರ ಮತ್ತು 5 ಅಡಿ ಅಗಲದ ಗಂಟೆಯನ್ನು ಉತ್ತರ ಪ್ರದೇಶದ ಇಟಾಹ್ ನ ಉದ್ಯಮಿ ಆದಿತ್ಯ ಮಿಥ್ತಲ್ ಎಂಬ ಉದ್ಯಮಿ ಪ್ರಾಯೋಜಿಸಿದ್ದು, ಅಯೋಧ್ಯೆಗೆ ತಲುಪಿದೆ. 25 ಲಕ್ಷ ರು. ಅಂದಾಜು ವೆಚ್ಚದಲ್ಲಿ ನಿಮಿ೯ತವಾದ ಈ ಅಪೂವ೯ ಗಂಟೆಯನ್ನು ಸಂಗ್ರಹಾಲಾದಲ್ಲಿ ವೀಕ್ಷಿಸಬಹುದು. ಚಿನ್ನ, ಬೆಳ್ಳಿ, ತಾಮ್ರ, ಸತು, ಸೀಸ, ತವರ, ಕಬ್ಬಿಣ, ಪಾದರಸಗಳಿಂದ ಈ ಗಂಟೆಯು ರೂಪುಗೊಂಡಿದೆ.
ಲಕ್ನೋ ಮೂಲದ ತರಕಾರಿ ಮಾರಾಟಗಾರ ಅನಿಲ್ ಕುಮಾರ್ ಸಾಹೋ ಎಂಬಾತ ಭಾರತ, ಟೋಕಿಯೋ, ಮಾಸ್ಕೋ ದುಬೈ, ಬೀಜಿಂಗ್, ಸಿಂಗಾಪುರ್ ಸೇರಿದಂತೆ ವಿವಿಧ ದೇಶಗಳ ಸಮಯ ತೋರಿಸುವ ಗಡಿಯಾರವನ್ನು ವಿನ್ಯಾಸಗೊಳಿಸಿದ್ದಾರೆ. ಇದನ್ನು ದೇವಾಲಯದ ಪ್ರವೇಶ ದ್ವಾರದಲ್ಲಿ ಇರಿಸಲಾಗುತ್ತದೆ.

ತಾಮ್ರದ ಗಂಟೆಗಳಂತೂ ರಾಶಿ ರಾಶಿ ಬಂದು ಸೇರುತ್ತಿದೆ. ಶ್ರೀರಾಮನ ದೇವಾಲಯ ಸಂಕೀಣ೯ದಲ್ಲಿ ಇರುವ ಅನೇಕ ದೇವಾಲಯಗಳಿಗೆ ಇಂಥ ಗಂಟೆಗಳನ್ನು ಬಳಸಿಕೊಳ್ಳುವ ಚಿಂತನೆ ಟ್ರಸ್ಟ್ ಗಿದೆ. ಬೖಹತ್ ಗಾತ್ರದ ತ್ರಿಶೂಲ, ವಾಲ್ಮೀಕಿ ಮೂತಿ೯, ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮಂತನ ಮೂತಿ೯ಗಳು ಕೂಡ ಸಂಗ್ರಹಕ್ಕೆ ಕೊಡುಗೆಯಾಗಿ ಲಭಿಸಿದೆ.
ಯಾವುದನ್ನು ಎಲ್ಲಿ ಮತ್ತು ಹೇಗೆ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂಬುದನ್ನು ಟ್ರಸ್ಟ್ ಮುಂದಿನ ದಿನಗಳಲ್ಲಿ ನಿಧ೯ರಿಸಲಿದೆ. ಎಲ್ಲವನ್ನೂ ಸಿಸಿ ಕ್ಯಾಮರ ಮೂಲಕ ದಾಖಲಿಸಲಾಗಿದ್ದು, ಯಾವುದೇ ಅಮೂಲ್ಯ ಕೊಡುಗೆಗಳು ವ್ಯಥ೯ ಎನಿಸುವುದಿಲ್ಲ. ಪ್ರತೀಯೋವ೯ ಭಕ್ತನೂ ಶ್ರೀರಾಮನ ಮೇಲಿನ ಪ್ರೀತಿಯಿಂದ ನೀಡಿದ ಉಡುಗೊರೆಗಳಿಗೆ ಟ್ರಸ್ಟ್ ಭಾದ್ಯಸ್ಥವಾಗಿ ಸಂಗ್ರಹಿಸಿಡುತ್ತದೆ. ಸೂಕ್ತ ರೀತಿಯಲ್ಲಿ ಇಂಥ ಕೊಡುಗೆ ಬಳಸಿಕೊಳ್ಳುವ ಹೊಣೆ ಟ್ರಸ್ಟ್ ನದ್ದಾಗಿದೆ ಎಂದು ಟ್ರಸ್ಟ್ ಪ್ರಧಾನ ಕಾಯ೯ದಶಿ೯ ಚಂಪಕ್ ರಾಯ್ ತಿಳಿಸಿದರು.
ಲಕ್ನೋದಿಂದ ಅಯೋಧ್ಯೆಗೆ ತೆರಳುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 27 ರಲ್ಲಿ ಗಮನಿಸಿದಂತೆ ಸಾಲು ಸಾಲಾಗಿ ಸೈಕಲ್, ಲಾರಿಗಳಲ್ಲಿ ಅಯೋಧ್ಗೆಗೆ ಜನರು ಕೊಡುಗೆಗಳನ್ನು ಕೊಂಡೊಯ್ಯುತ್ತಲೇ ಇದ್ದಾರೆ. ಅಯೋಧ್ಯೆ ನಗರದಲ್ಲಿ ಗ್ರಾಮಸ್ಖರು ತಂಡೋಪತಂಡವಾಗಿ ಮೆರವಣಿಗೆಯಲ್ಲಿ ಆಗಮಿಸುತ್ತಾ, ಶ್ರೀರಾಮನಿಗೆ ಜೈಜೈಕಾರ ಮೊಳಗಿಸುತ್ತಾ ತಾವು ತಂದ ಉಡುಗೊರೆಗಳನ್ನು ಸಮಪಿ೯ಸುತ್ತಿದ್ದಾರೆ.
ಕೆಲವೊಂದು ಕಾಣಿಕೆಗಳು ಬಹಳ ಕಡಿಮೆಯದ್ದು ಎಂದು ಕಂಡುಬಂದರೂ ಶ್ರೀರಾಮನಿಗೆ ನೀಡುವ ಭಕ್ತನ ಅಪ೯ಣಾ ಮನೋಭಾವಕ್ಕೆ ಬೆಲೆ ಕಟ್ಟಲಾಗದ್ದು. ಶ್ರೀರಾಮ ಮಂದಿರ ಲೋಕಾಪ೯ಣೆಯಾದ ಬಳಿಕವೂ ಇಂಥ ಕೊಡುಗೆ ಸಂಖ್ಯೆ ಹತ್ತು ಪಟ್ಟು ಹೆಚ್ಚಾದೀತು ಎಂಬ ನಿರೀಕ್ಷೆ ಇದೆ.

ಲಕನ್ನಡಿಗನಿಂದ ಮೈದಳೆದಿದೆ ದೇಶದ ಅತ್ಯಂತ ದೊಡ್ಡ ಅಳಿಲು!..
ಶ್ರೀರಾಮನ ವನವಾಸ ಸಂದಭ೯ ಪುಟ್ಟ ಜೀವಿಯಾದ ಅಳಿಲು ಮಹತ್ವದ ಪಾತ್ರ ವಹಿಸಿದ್ದನ್ನು ಮರೆಯುವುದುಂಟೆ? ಲಂಕಾಕ್ಕೆ ತೆರಳಲು ಸಮುದ್ರದಲ್ಲಿ ಸೇತುವೆ ನಿಮಾ೯ಣ ಸಂದಭ೯ ಸಾವಿರಾರು ಸಂಖ್ಯೆಯಲ್ಲಿ ಅಳಿಲುಗಳು ಬಂದು ರಾಮಲಕ್ಷ್ಣಣರಿಗೆ ನೆರವಾಗಿದ್ದವು. ಹೀಗಾಗಿಯೇ ಶ್ರೀರಾಮನಿಗೆ ಅಳಿಲು ಎಂದರೆ ಬಹಳ ಇಷ್ಟದ ಜೀವಿ. ಅಳಿಲು ಸೇವೆ ಗುರುತಿಸಿ ರಾಮನು ಸವರಿದ್ದರಿಂದಾಗಿಯೇ ಅಳಿಲಿನ ದೇಹದ ಮೇಲೆ ರಾಮನ ಬೆರಳಚ್ಚಿವಂತೆ ಮೂರು ಬೆರಳಿನ ಚಿಹ್ನೆಗಳು ಕಾಣಿಸುತ್ತದೆ ಎಂಬ ಪ್ರತೀತಿಯಿದೆ. ಹೀಗಿರುವಾಗ ಶ್ರೀರಾಮನ ಊರಿನಲ್ಲಿ ರಾಮನ ಪ್ರೀತಿಪಾತ್ರ ಅಳಿಲನ್ನು ಮರತರೆ ಉಂಟೇ? ಹೀಗಾಗಿಯೇ ಭಾರತದ ಅತ್ಯಂತ ದೊಡ್ಡದಾದ ಅಳಿಲಿನ ಆಕೖತಿ ಈಗ ಅಯೋಧ್ಯೆಯಲ್ಲಿ ಮೈದಳೆದಿದೆ. ಇದನ್ನು ರೂಪಿಸಿದವರು ಕನ್ನಡಿಗರು ಎಂಬುದು ಹೆಮ್ಮೆಯ ವಿಚಾರ.
ಬೆಂಗಳೂರಿನ ಕೈಗಾರಿಕೋದ್ಯಮಿ ಪ್ರಕಾಶ್ 15 ಅಡಿ ಎತ್ತರದ, 5.5 ಅಗಲವಿರುವ, 2.50 ಟನ್ ತೂಕದ ಅಳಿಲು ಆಕೖತಿ ರೂಪಿಸಿದ್ದಾರೆ. ಕಾಟಲ್ ಸ್ಟೀಲ್ ನಲ್ಲಿ ರೂಪಿತವಾದ ಅಳಿಲು ವಿಗ್ರಹ ತಾಮ್ರದ ಮಿಶ್ರಣ ಇರುವುದರಿಂದ ನೂರಾರು ವಷ೯ಗಳ ಕಾಲ ಬಾಳಿಕೆ ಬರಲಿದೆ. ನಿವ೯ಹಣೆಯೂ ಸುಲಭ, ಇಂಜಿನಿಯರ್ ಧನುಶ್ರೀ ಅಳಿಲು ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದನ್ನು ಅಯೋಧ್ಯೆ ದಾಮ ರೈಲು ನಿಲ್ದಾಣದ ಪ್ರವೇಶ ದ್ವಾರದಲ್ಲಿಯೇ ಅಳವಡಿಸಲ್ಪಟ್ಟಿದೆ.

ಅನಿಲ್.ಎಚ್.ಟಿ.ಅಯೋಧ್ಯೆಯಲ್ಲಿ
(ಅನಿಲ್ ಎಚ್.ಟಿ. ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರು)









