ಅಯೋಧ್ಯೆ:ಪುಣ್ಯಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮಮಂದಿರದಲ್ಲಿ ಶ್ರೀರಾಮ ಪ್ರಾಣಪ್ರತಿಷ್ಠೆ ಕಾರ್ಯ ನಡೆಯಿತು. ಗಣ್ಯರು, ಭಕ್ತರು ಕಣ್ತುಂಬಿಕೊಂಡು ಧನ್ಯರಾಗಿದ್ದಾರೆ. ಪ್ರಾಣಪ್ರತಿಷ್ಠೆ ವಿಧಿವಿಧಾನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾದರು. ಪ್ರಾಣ ಪ್ರತಿಷ್ಠೆ ಸಂದರ್ಭದಲ್ಲಿ 7 ಸಾವಿರಕ್ಕೂ ಹೆಚ್ಚು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅಯೋಧ್ಯೆಯಲ್ಲಿ ನಿರ್ಮಾಣವಾದ
ಶ್ರೀರಾಮಮಂದಿರದ ಬಾಲರಾಮನ ಶಿಲಾಕೖತಿಗೆ ಪ್ರಾಣ ಪ್ರತಿಷ್ಟೆ ಮಾಡಿ ದೈವತ್ವದ ಶಕ್ತಿ ತುಂಬಲಾಯಿತು. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿಮಾ೯ಣದ 500 ವಷ೯ಗಳ ಕನಸು ಕೊನೆಗೂ ನನಸಾಗಿದೆ.
ಮತ್ತೆ ಅಯೋಧ್ಯೆಗೆ ವೈಭವ ಮರಳಿ ಬಂದಿದೆ. 12.30 ಗಂಟೆಗೆ ಸರಿಯಾಗಿ ಯಜಮಾನನ ಸ್ಥಾನದಲ್ಲಿ ನಿಂತು ಪ್ರಧಾನಿ ನರೇಂದ್ರ ಮೋದಿ ಪ್ರಾಣ ಪ್ರತಿಷ್ಟಾಪನೆ ಕೈಗೊಂಡರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ರಾಜ್ಯಪಾಲರಾದ ಆನಂದಿಬೆನ್, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತಿತರರು ಹಾಜರಿದ್ದರು. ಶಂಖನಾದ, ಮಂಗಳ ವಾದ್ಯಗಳ ಮೊಳಗುವಿಕೆ ಮಧ್ಯೆಯೇ ಪ್ರಾಣ ಪ್ರತಿಷ್ಟೆ ನಡೆಯಿತು. 5 ವಷ೯ದ ಬಾಲರಾಮನಿಗೆ ದೈವತ್ವದ ಜೀವ ತುಂಬಿದ ಸಾಂಪ್ರದಾಯಿಕ ವಿಧಿವಿಧಾನಗಳು ನಡೆದವು. ಭಾರತೀಯ ವಾಯುಸೇನೆಯ ಎರಡು ಹೆಲಿಕಾಪ್ಟರ್ ಗಳ ಮೂಲಕ ಶ್ರೀರಾಮಮಂದಿರದ ಮೇಲೆ ಪುಪ್ಪಾಚ೯ನೆ ನಡೆಸಲಾಯಿತು. ಭಾರತದೇಶದಾದ್ಯಂತದಿಂದ ಆಗಮಿಸಿದ ಗಣ್ಯಾತಿಗಣ್ಯರು ಶ್ರೀರಾಮಮಂದಿರದ ಹೊರ ಆವರಣದಿಂದ ಪ್ರಾಣ ಪ್ರತಿಷ್ಟಾಪನೆ ವೀಕ್ಷಿಸಿದರು. ಭಾರತದ ಅನೇಕ ಸಾಧುಸಂತರು, ರಾಜಕಾರಣಿಗಳು, ಚಿತ್ರಕಲಾವಿದರು, ಕ್ರೀಡಾತಾರೆಯರು, ಉದ್ಯಮಿಗಳು ಕೂಡ ಭಾಗಿಯಾಗಿದ್ದರು. ಅಯೋಧ್ಯೆ ನಗರಿಯಲ್ಲಿ ಮುಗಿಲು ಮುಟ್ಟಿದ ಜೈಶ್ರೀರಾಮ್ ಘೋಷಣೆ 500 ವಷ೯ಗಳ ನಂತರ ಅಯೋಧ್ಯೆಯಲ್ಲಿ ವಿಜೖಂಭಿಸಿದ ವೈಭವವನ್ನು ದೇಶದಾದ್ಯಂತ ಜನರು ವೀಕ್ಷಿಸಿದರು. ದೇಶದಾದ್ಯಂತ ಸಂಭ್ರಮ ಮನೆ ಮಾಡಿದೆ.












