*ಅನಿಲ್ ಎಚ್.ಟಿ.
(ಅಯೋಧ್ಯೆಯಿಂದ ಪ್ರತ್ಯಕ್ಷ ವರದಿ).
ಶ್ರೀರಾಮನಿಗೆ 500 ವಷ೯ಗಳ ಬಳಿಕ ಅವನ ಹುಟ್ಟೂರಿಗೆ ಮರಳಿ ಬರುವ ಸಂಭ್ರಮ..ಬಹುಕೋಟಿ ಹಿಂದೂಗಳ ಶತಮಾನಗಳ ಕನಸು ನನಸಾಗುವ ಹೊತ್ತು.. ದೇಶದ ಇತಿಹಾಸದಲ್ಲಿಯೇ ಅತ್ಯಂತ ವೈಭವದ ದೈವಿಕ ಕಾಯ೯ಕ್ರಮ… ಭಾರತದಲ್ಲಿಯೇ ಈವರೆಗೆ ನಡೆದಿರದಂಥ ಅತೀ ದೊಡ್ಡ ಧಾಮಿ೯ಕ ಉತ್ಸವಕ್ಕೆ ಉತ್ತರ ಪ್ರದೇಶದ ಅಯೋಧ್ಯೆ ನಗರ ಸಮರೋಪಾದಿಯಲ್ಲಿ ಸಜ್ಜಾಗುತ್ತಿದೆ.ಶ್ರೀರಾಮನ ಜನ್ಮಸ್ಥಾನದಲ್ಲಿ ಕೊನೆಗೂ ಜ.22 ರಂದು ಶ್ರೀರಾಮಮಂದಿರ ಲೋಕಾಪ೯ಣೆಯಾಗಲಿದೆ. ಭಕ್ತರ ಬಹುದಿನಗಳ ಬೇಡಿಕೆಯ ದೇವಮಂದಿರದ ಉದ್ಘಾಟನೆಯ ದೈವಿಕ ಕೈಂಕಯ೯ಕ್ಕೆ ಕೇವಲ 7 ದಿನಗಳು ಇರುವಂತೆಯೇ ಶ್ರೀರಾಮನ ನಗರ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ.
ಅಯೋಧ್ಯೆಯಲ್ಲಿ ಈಗ ಮೈ ಕೊರೆಯುವ ಚಳಿ. 9 ಡಿಗ್ರಿ ಸೆ. ನಷ್ಟು ತಾಪಮಾನ ಕಂಡುಬಂದಿದೆ.ಮಧ್ಯಾಹ್ನವಾದರೂ ಸೂಯ೯ನ ದಶ೯ನವಿಲ್ಲದೇ ಮಂಜು ಮುಸುಕಿದ ವಾತಾವರಣದಲ್ಲಿರುವ ಅಯೋಧ್ಯೆ ನಗರಿಯಲ್ಲಿ ಶ್ರೀರಾಮ ದೇವಾಲಯದ ಮೊದಲ ಹಂತದ ಕಾಮಗಾರಿ
ಅಂತಿಮ ಹಂತದಲ್ಲಿದೆ.
ದಶರಥನ ಅರಮನೆಯಾಗಿದ್ದ ಕನಕ ಭವನದ ಹಿಂಬದಿಯಲ್ಲಿಯೇ ಶ್ರೀರಾಮಮಂದಿರ ಭವ್ಯರೂಪದಲ್ಲಿ ತಲೆ ಎತ್ತುತ್ತಿದೆ. ಮೇಲ್ನೋಟಕ್ಕೆ ಗಮನಿಸಿದರೆ, ಇಂದಿಗೂ ದೇವಾಲಯದ ಕಾಯ೯ ನಡೆಯುತ್ತಲೇ ಇದೆ. ಈ ನಡುವೇ ಜ.22 ರಂದು ಪ್ರಧಾನಿ ಸೇರಿದಂತೆ ವಿವಿಧ ಗಣ್ಯರ ಸಮ್ಮುಖದಲ್ಲಿ ಮಂದಿರ ಲೋಕಾಪ೯ಣೆ ಮಾಡಲು ಕೆಲಸಕಾಯ೯ಗಳು ಭರದಿಂದ ಸಾಗಿರುವುದು ಕಂಡುಬರುತ್ತದೆ.
ಶ್ರೀರಾಮ ದೇವಾಲಯ ಸಂಕೀಣ೯ಕ್ಕೆ ಪೊಲೀಸ್ ಮತ್ತು ಸೇನಾಪಡೆಯ ಕಮಾಂಡೋಗಳ ಸಪ೯ಗಾವಲು ವಿಧಿಸಲಾಗಿದೆ. ಅತೀ ಸೂಕ್ಷ್ಯ ರೀತಿಯಲ್ಲಿ ತಪಾಸಣೆಗೊಳಪಟ್ಟ ಬಳಿಕವೇ ಸಂಕೀಣ೯ದಲ್ಲಿನ ಕಾಮಗಾರಿಯನ್ನು ದೂರದಿಂದ ವೀಕ್ಷಿಸಲು ಬ್ಯಾರಿಕೇಡ್ ಒಳಗೇ ವೀಕ್ಷಕರಿಗೆ ಅವಕಾಶ ನೀಡಲಾಗುತ್ತಿದೆ. ತಪಾಸಣೆ ಹೇಗಿದೆ ಎಂದರೆ, ಮೊಬೈಲ್, ಕ್ಯಾಮರ ಹೋಗಲಿ ಬಾಚಣಿಗೆ, ಪೆನ್ನು, ಪಸ್೯ನ್ನು ಕೂಡ ತಪಾಸಣೆ ಸಂದಭ೯ ಪಕ್ಕಕ್ಕಿಡಲು ಸೂಚಿಸಿ, ಇದೆಲ್ಲವನ್ನೂ ಹೊರಗಿಟ್ಟ ಬಳಿಕವೇ ಸಂಕೀಣ೯ ಕಾಮಗಾರಿ ವೀಕ್ಷಣೆಗೆ ಜನರನ್ನು ಒಳ ಬಿಡಲಾಗುತ್ತಿದೆ.. ಮೂರು ಹಂತದಲ್ಲಿನ ಬಿಗಿಯಾದ ತಪಾಸಣೆ ಬಳಿಕವೇ ಪ್ರಧಾನ ಮಂದಿರ ಮತ್ತು ಮಂದಿರ ಸಂಕೀಣ೯ದ ಕಾಮಗಾರಿ ವೀಕ್ಷಣಾ ಪ್ರದೇಶಕ್ಕೆ ತೆರಳಬಹುದು. ಇಲ್ಲಿಯೂ ಹೆಜ್ಜೆ ಹೆಜ್ಜೆಗೂ ಸುಸಜ್ಜಿತ ಬಂದೂಕುಧಾರಿ ಕಮಾಂಡೋಗಳು ಹದ್ದಿನಗಣ್ಣಲ್ಲಿ ಗಮನಿಸುತ್ತಿರುತ್ತಾರೆ. ಹಲವು ಮಾರು ದೂರದಲ್ಲಿ

ಅನಿಲ್ ಹೆಚ್.ಟಿ. ಅವರು ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ
ಕಾಮಗಾರಿ ನಡೆಯುತ್ತಿರುವ ಮಂದಿರವನ್ನು ವೀಕ್ಷಿಸಲು ಪ್ರತೀನಿತ್ಯ 15-20 ಸಾವಿರ ಸಂದಶ೯ಕರು ಅಯೋಧ್ಯೆಗೆ ಬರುತ್ತಿದ್ದಾರೆ. ಜ.22 ರ ನಂತರ ಈ ಸಂಖ್ಯೆ ದಿನಕ್ಕೆ 1 ಲಕ್ಷ ಮೀರಬಹುದು ಎಂದು ಅಂದಾಜಿಸಲಾಗಿದೆ.
ಶ್ರೀರಾಮಮಂದಿರ ಸಂಕೀಣ೯ದೊಳಗಡೆಯೇ ಕಳೆದ 30 ವಷ೯ಗಳಿಂದ ಪೂಜೆ ಸಲ್ಲಿಸುತ್ತಾ ಬರಲಾಗುತ್ತಿರುವ ಪ್ರಾಚೀನ ಕಾಲದ ಶ್ರೀರಾಮ, ಸೀತೆ, ಲಕ್ಷ್ಮಣರ ಮೂತಿ೯ಗಳಿಗೆ ಪ್ರತ್ಯೇಕ ಮಂದಿರ ನಿಮಿ೯ಸಲಾಗಿದೆ. ಮೂರು ವಷ೯ಗಳ ಹಿಂದೆ ಇದೇ ಸ್ಥಳದಲ್ಲಿ ಪ್ರಧಾನಿ ಮೋದಿಯವರು ನೂತನ ಮಂದಿರಕ್ಕೆ ಭೂಮಿಪೂಜೆ ನೆರವೇರಿಸಿದ ಸ್ಥಳದಲ್ಲಿಯೇ ಈ ಮೂತಿ೯ಗಳಿಗೆ ಪುಟ್ಟದಾದ ಮಂದಿರ ನಿಮಿ೯ಸಿ ಪೂಜೆ ಸಲ್ಲಿಸಲಾಗುತ್ತಿದೆ. ಹಲವು ವಷ೯ಗಳ ಕಾಲ ಟೆಂಟ್ನಲ್ಲಿ ಪೂಜಿಸಲ್ಪಡುತ್ತಿದ್ದ ಈ ರಾಮನಿಗೆ ಮೂರು ವಷ೯ಗಳಿಂದ ಮಂದಿರದಲ್ಲಿ ಪೂಜೆ ಸ್ವೀಕರಿಸುವ ಯೋಗ ಲಭಿಸಿದೆ. ಈ ಮಂದಿರ ವೀಕ್ಷಣೆಯ ಬಳಿಕ ಪೊಲೀಸ್ ಭದ್ರವ್ಯೂಹದೊಳಗೆ ಸಾಗಿದರೆ ಮಂದಿರ ಮತ್ತು ಸಂಕೀಣ೯ದ ಯೋಜನಾ ಕಾಮಗಾರಿಗಳ ವಿವಿಧ ಹಂತಗಳನ್ನು ವೀಕ್ಷಿಸಬಹುದು.
ಕೆಲವು ವಾರಗಳಿಂದ ಉತ್ತರ ಪ್ರದೇಶದ ಪೊಲೀಸರೇ ಶ್ರೀರಾಮಮಂದಿರದ ಬಂದೋಬಸ್ತ್ ಹೊಣೆ ವಹಿಸಿಕೊಂಡಿದ್ದಾರೆ. ಈ ಮೊದಲು ವಿವಾದಿತ ಮಂದಿರದ ಜಾಗವನ್ನು ಸಿಆರ್ ಪಿಎಫ್ ಗಮನಿಸುತ್ತಿತ್ತು. ಇದೀಗ ಉತ್ತರ ಪ್ರದೇಶದ ಪೊಲೀಸರ ಉಸ್ತುವಾರಿಯಲ್ಲಿನ ಶ್ರೀರಾಮಮಂದಿರಕ್ಕಾಗಿಯೇ ವಿಶೇಷ ಪೊಲೀಸ್ ಕಾಯ೯ಪಡೆ ರಚಿಸಲಾಗಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಈ ಕಾಯ೯ಪಡೆಗೆ ನೀಡಲಾಗಿದೆ.2 ದೇವಾಲಯದ ಪ್ರವೇಶದಲ್ಲಿಯೇ ಅತ್ಯಾಧುನಿಕ ತಪಾಸಣಾ ವ್ಯವಸ್ಥೆಯಿದ್ದು, ಸೂಕ್ಷ್ಯ ಕ್ಯಾಮರ ಕಣ್ಗಾವಲಿರಿಸಲಾಗಿದೆ. ಬಾಂಬ್ ನಿಷ್ಟ್ಕಿಯ ದಳ, ಶ್ವಾನ ಪಡೆಗಳು ಕೂಡ ಇಲ್ಲಿಯೇ ಬೀಡು ಬಿಟ್ಟಿದೆ.
ಶ್ರೀರಾಮಮಂದಿರದ ಲೋಕಾಪ೯ಣೆಗೆ ಗಣ್ಯಾತಿಗಣ್ಯರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಸಿಆರ್ಪಿಎಫ್ ಮತ್ತು ಸೇನಾ ಕಮಾಂಡೋಗಳನ್ನೂ ರಾಮಮಂದಿರ ಸಂಕೀಣ೯ದ ಭದ್ರತೆಗೆ ಕಳೆದ ವಾರದಿಂದ ನಿಯೋಜಿಸಲಾಗಿದೆ. ಸಿಆರ್ ಪಿಎಫ್ನ ಮಹಿಳಾ ಬೆಟಾಲಿಯನ್ ಕೂಡ ಸ್ಥಳದಲ್ಲಿ ಬಂದೋಬಸ್ತ್ ಹೊಣೆ ವಹಿಸಿಕೊಂಡಿದ್ದಾರೆ. ಉತ್ತರ ಪ್ರದೇಶದ 400 ಕ್ಕೂ ಅಧಿಕ ಪೊಲೀಸರು ಹೆಜ್ಜೆ ಹೆಜ್ಜೆಗೂ ಸಂಕೀಣ೯ ಜಾಗದಲ್ಲಿ ಕಾವಲಿದ್ದಾರೆ.

ಇಂಥ ಸಪ೯ಗಾವಲನ್ನು ಭೇದಿಸಿ ಸಲೀಸಾಗಿ ಮಂದಿರ ಪ್ರದೇಶಕ್ಕೆ ತೆರಳುವುದು ಖಂಡಿತಾ ಅಸಾಧ್ಯ.. ಇದೇ 22 ರಂದು ಶ್ರೀರಾಮಮಂದಿರ ಭಕ್ತಾಪ೯ಣೆಯದ ಬಳಿಕವೂ ಇದೇ ಸೂಕ್ಷ್ಯ ತಪಾಸಣೆ ಮುಂದುವರೆಯುವುದರಿಂದಾಗಿ ಭಕ್ತರಿಗೆ ಶ್ರೀರಾಮಮಂದಿರ ಮತ್ತು ಸಂಕೀಣ೯ಕ್ಕೆ ತೆರಳಿ ವಾಪಾಸಾಗಲು ಏನಿಲ್ಲವೆಂದರೂ 3 ಗಂಟೆಗಳಾದರೂ ಬೇಕೇ ಬೇಕು ಎಂಬಂಥ ಸ್ಥಿತಿಯಿದೆ. ಭಾರತದ ಬೇರೆ ದೇವಾಲಯಗಳಿಗೆ ಹೋಲಿಸಿದ್ದಲ್ಲಿ ಅಯೋಧ್ಯೆಯ ಶ್ರೀರಾಮಮಂದಿರ 2.77 ಎಕ್ರೆ ವಿಶಾಲವಾದ ಜಾಗದಲ್ಲಿರುವುದು ಮತ್ತು ಮಂದಿರ ಸಂಕೀಣ೯ವು ಕೂಡ ಅತ್ಯಂತ ವಿಶಾಲವಾದ 77 ಎಕ್ರೆ ಪ್ರದೇಶದಲ್ಲಿರುವುದರಿಂದ ಎಷ್ಟೇ ಸಂಖ್ಯೆಯಲ್ಲಿ ಭಕ್ತರು ಬಂದರೂ ನೂಕು ನುಗ್ಗಲಿನ ಪರಿಸ್ಥಿತಿ ಉದ್ಬವಿಸಲಾರದು.
ಅಯೋಧ್ಯೆಯ ಮುಖ್ಯ ರಸ್ತೆ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ 27 ನ್ನು ಸಂಪಕಿ೯ಸುವ ಇಲ್ಲಿನ ಎಲ್ಲಾ ರಸ್ತೆಗಳನ್ನು ನೂತನವಾಗಿ ಡಾಮರೀಕರಣಗೊಳಿಸುವ ಕಾಮಗಾರಿ ಭರದಿಂದ ಸಾಗಿದೆ. ರಸ್ತೆಯ ಅಲ್ಲಲ್ಲಿ ಯಂತ್ರೋಪಕರಣಗಳು ರಸ್ತೆ ಅಭಿವೖದ್ದಿ ಕಾಯ೯ದಲ್ಲಿ ನಿರತವಾಗಿದೆ.
ಮಂದಿರ ಲೋಕಾಪ೯ಣೆಗೆ ಇನ್ನೊಂದೇ ವಾರ ಇರುವಂತೆಯೇ ಅಯೋಧ್ಯೆ ನಗರವನ್ನು ವಿದ್ಯುದ್ಪೀಪಾಲಂಕಾರಗಳಿಂದ ಶೖಂಗರಿಸಲಾಗಿದೆ. ಸಾಲು ದೀಪಗಳು ರಾತ್ರಿಯಲ್ಲಿ ಪ್ರಜ್ವಲಿಸಿ ಅಯೋಧ್ಯೆಗೆ ಹೊಸ ಮೆರುಗು ನೀಡಿದೆ.
ಅಯೋಧ್ಯೆಯಲ್ಲಿನ 12 ಸಾವಿರದಷ್ಟು ಕೊಠಡಿಗಳು ಜ.20 ರಿಂದಲೇ ಭತಿ೯ಯಾಗಿದೆ. ಧಮ೯ಛತ್ರದಲ್ಲಿ 6 ಸಾವಿರದಷ್ಟು ಕೋಣೆಗಳನ್ನು ಭಕ್ತರಿಗೆ ಮೀಸಲಿಡಲಾಗಿದೆ. ಈಗಾಗಲೇ ತಂಡೋಪತಂಡವಾಗಿ ದೇಶದ ವಿವಿದೆಡೆಗಳಿಂದ ಭಕ್ತರ ಸಾಗರ ಅಯೋಧ್ಯೆ ನಗರಕ್ಕೆ ಬರುತ್ತಿದ್ದಾರೆ. ವಿಶೇಷವಾಗಿ ಸಾಧುಸಂತರು ತಮ್ಮ ಭಕ್ತರೊಂದಿಗೆ ಶ್ರೀರಾಮನೂರಿಗೆ ಬರುತ್ತಿದ್ದು ಶ್ರೀರಾಮ ಪಟ್ಟಾಭಿಷೇಕದಲ್ಲಿ ಪಾಲ್ಗೊಳ್ಳಲು ಸಾಧುಸಂತರು ಕಾತುರರಾಗಿದ್ದಾರೆ. ಜೈಶ್ರೀರಾಮ್ ಎಂಬ ಘೋಷಣೆಯೊಂದಿಗೆ ನೂರಾರು ಭಕ್ತರ ಪಡೆಯೊಂದಿಗೆ ಈ ರೀತಿ ಸಾಧುಗಳು ಶ್ರೀರಾಮನಗರವನ್ನು ಪ್ರವೇಶಿಸುತ್ತಿರುವುದರಿಂದಾಗಿ ಈಗಾಗಲೇ ಅಯೋಧ್ಯೆಯಲ್ಲಿ ಕಾವಿಧಾರಿಗಳೇ ಹೆಚ್ಚಾಗಿ ಕಂಡು ಬರುತ್ತಿದ್ದಾರೆ.
ಅಯೋಧ್ಯೆಯಲ್ಲಿ ಈಗ ಮೈಕೊರೆಯುವ ಛಳಿ, ಶೀತಗಾಳಿ ಬೀಸುತ್ತಿದೆ. ಸಂಜೆಯಾಗುತ್ತಿರುವಂತೆಯೇ ಶೀತವಾತಾವರಣ ಹೆಚ್ಚುತ್ತಿರುವುದರಿಂದಾಗಿ ನಗರದ ಅಲ್ಲಲ್ಲಿ ಜನರು ಬೆಂಕಿ ಉರಿಸಿಕೊಂಡು ಮೈ ಕಾಯಿಸಿಕೊಳ್ಳುವ ದೖಶ್ಯ ಸಾಮಾನ್ಯವಾಗಿದೆ. ರಾತ್ರಿ 9 ಗಂಟೆಯಾಗುತ್ತಿರುವಂತೆಯೇ ಅಯೋಧ್ಯೆಯಲ್ಲಿ ಜನ ಸಂಚಾರ ವಿರಳವಾಗಿ ಎಲ್ಲೆಲ್ಲೂ ಖಾಕಿಧಾರಿ ಪೊಲೀಸರೇ ಭದ್ರತೆಯ ಉಸ್ತುವಾರಿಗಳಾಗಿ ಸಂಚರಿಸುತ್ತಿದ್ದಾರೆ. ಚಳಿ ತಡೆಯಲಾಗದೇ ಪೊಲೀಸರು ಕೂಡ ತಮ್ಮ ಟೆಂಟ್ ಮುಂಬದಿ ಬೆಂಕಿ ಉರಿಸಿಕೊಂಡು ಮೈ ಬಿಸಿ ಮಾಡಿಕೊಳ್ಳುತ್ತಿದ್ದಾರೆ.

ಶ್ರೀರಾಮಮಂದಿರ ಪ್ರತಿಷ್ಟಾಪನೆ ಹಿನ್ನಲೆಯಲ್ಲಿ ಅಯೋಧ್ಯೆ ನಗರದೊಳಕ್ಕೆ ಮದ್ಯ ಮತ್ತು ಮಾಂಸ ಮಾರಾಟವನ್ನು ಸಂಪೂಣ೯ ನಿಷೇಧಿಸಲಾಗಿದೆ. ಅಯೋಧ್ಯೆ ನಗರದಿಂದ 2 ಕಿ.ಮೀ. ಹೊರಭಾಗದಲ್ಲಿ ಮಾಂಸ ಮತ್ತು ಮಧ್ಯದ ಮಾರಾಟಕ್ಕೆ ಅವಕಾಶ ನೀಡಲಾಗಿದೆಯಾದರೂ ಶ್ರೀರಾಮೋತ್ಸವ ಹಿನ್ನಲೆಯಲ್ಲಿ ಹೆಚ್ಚಿನ ಜನ ಮಧ್ಯ, ಮಾಂಸ ಖರೀದಿಗೆ ಮುಂದಾಗುತ್ತಿಲ್ಲವಂತೆ.
ಪ್ರಸ್ತುತ ಸಾವಿರಾರು ಜನ ಬರುತ್ತಿರುವುದು ಮತ್ತು ಮುಂದಿನ ವಾರದಿಂದ ಲಕ್ಷಾಂತರ ಮಂದಿ ಅಯೋಧ್ಯೆಗೆ ಬರಲಿರುವುದರಿಂದಾಗಿ ಸ್ಥಳೀಯ ಆಡಳಿತ ಹೆಚ್ಚುವರಿಯಾಗಿ 600 ಪೌರಕಾಮಿ೯ಕರನ್ನು ಸ್ವಚ್ಚತೆ ಕಾಯ೯ಕ್ಕೆ ನಿಯೋಜಿಸಿದೆ. ಹೀಗಾಗಿ ಅಯೋಧ್ಯೆಯಲ್ಲಿ ಎಲ್ಲಿಯೂ ಕಸಕಡ್ಡಿ, ಮಾಲಿನ್ಯ ಕಂಡು ಬರುತ್ತಿಲ್ಲ. ಪೌರಕಾಮಿ೯ಕರು ತಮ್ಮ ನಿಗಧಿತ ಕಾಯ೯ ವ್ಯಾಪ್ತಿಯಲ್ಲಿ ಆಗಿಂದಾಗ್ಗೆ ಸ್ವಚ್ಚತೆಗೆ ಮುಂದಾಗಿದ್ದಾರೆ. ಇದರಿಂದಾಗಿ ಶ್ರೀರಾಮ ನಗರಿ ಸ್ವಚ್ಚ ಮತ್ತು ಮಾಲಿನ್ಯ ರಹಿತ ನಗರವಾಗಿಯೂ ಕಂಗೊಳಿಸುತ್ತಿದೆ.
ಜನವರಿ 22 – ಅಯೋಧ್ಯೆ ಪಾಲಿಗೆ ಇದು ಚರಿತ್ಸೆ ಸೖಷ್ಟಿಸುವ ದಿನ. ಭಾರತೀಯರ ಪಾಲಿಗೆ ಇದೇ ದಿನ 500 ವಷ೯ಗಳ ಕನಸು ನನಸಾಗುವ ಮಹೋನ್ನತ ದಿನ. ಇಂಥ ಅವಿಸ್ನರಣೀಯ ದಿನವನ್ನು ಅಯೋಧ್ಯಾ ವಾಸಿಗಳು ಸಂಭ್ರಮದಿಂದ ಕಾಯುತ್ತಿದ್ದಾರೆ, ಈಗಾಗಲೇ ಅಯೋಧ್ಯೆಯ ಮನೆಮನೆಗಳಲ್ಲಿ ಹಬ್ಬದ ಸಡಗರ ಕಂಡು ಬರುತ್ತಿದ್ದು ಬಹುತೇಕ ಮನೆಗಳು, ಅಂಗಡಿಗಳು ಹೊಸದ್ದಾಗಿ ಸುಣ್ಣ ಬಣ್ಣ ಬಳಿದುಕೊಂಡು ಸುಂದರವಾಗಿ ಕಂಗೊಳಿಸುತ್ತಿದೆ.
ವಿಶ್ವದ ಹಿಂದೂಗಳ ಪಾಲಿಗೆ ರಾಮ ಹೇಗೆ ಆದಶ೯ಪ್ರಾಯನೋ ಹಾಗೇ ಶ್ರೀರಾಮಮಂದಿರ ಲೋಕಾಪ೯ಣೆ ಮತ್ತು ತನ್ನೂರಿಗೆ ಮರಳಿ ಬಂದು ಪಟ್ಟಾಭಿಷೇಕ ಪಡೆದುಕೊಳ್ಳಲಿರುವ ರಘುರಾಮನ ಉತ್ಸವವನ್ನೂ ಮಾದರಿಯಾಗಿ ಆದಶ೯ಮಯವಾಗಿ ಮಾಡಲು ಅಯೋಧ್ಯೆ ಜನ ಸಂಕಲ್ಪ ತೊಟ್ಟಂತಿದೆ. ಇಂಥ ಸಂಭ್ರಮ ಅಯೋಧ್ಯೆಯ ಎಲ್ಲೆಲ್ಲೂ ಕಂಡುಬಂದಿದೆ.
ಶ್ರೀರಾಮರಥದ ಆಕಷ೯ಣೆ!:
ಶ್ರೀರಾಮ ಮಂದಿರದ ಮಾಡೆಲ್ ನ್ನು ಪ್ರದಶಿ೯ಸುತ್ತಾ ಹತ್ತಾರು ವ್ಯಾನ್ ಗಳು ಅಯೋಧ್ಯೆ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಸಂಚರಿಸುತ್ತಿದೆ. ಕೇಸರಿ ದ್ವಜಗಳಿಂದ ಅಲಂಕೖತವಾದ ಶ್ರೀರಾಮರಥ ಎಂದೇ ಕರೆಯಲ್ಪಡುವ ಈ ವಾಹನದ ಹಿಂಬದಿಯಲ್ಲಿ ಅಯೋಧ್ಯೆಯ ಶ್ರೀರಾಮಮಂದಿರದ ಮಾಡೆಲ್ ನ್ನು ಗಾಜಿನ ಆವರಣದಲ್ಲಿರಿಸಲಾಗಿದೆ. ಈ ರಾಮರಥ ಗ್ರಾಮಗಳಿಗೆ ಬಂದಂತೆ ಸ್ಥಳೀಯರು ಅತ್ಯಂತ ಭಕ್ತಿಭಾವದಿಂದ ರಥವನ್ನು ಎದಿರುಗೊಂಡು ಶ್ರೀರಾಮನ ಚಿತ್ರಕ್ಕೆ ಆರತಿ ಬೆಳಗುತ್ತಿದ್ದಾರೆ. ಪುಪ್ಪಾಚ೯ನೆ ಮೂಲಕ ರಾಮರಥಕ್ಕೆ ಸ್ವಾಗತ ಕೋರುತ್ತಿದ್ದಾರೆ. ಈ ಸಂದಭ೯ ರಥದ ನಿವ೯ಹಣೆ ಹೊತ್ತವರು ಜ.22 ರಂದು ಅಯೋಧ್ಯೆಗೆ ಬಂದು ಶ್ರೀರಾಮ ಪಟ್ಟಾಭಿಷೇಕ ನೋಡಿ ಶ್ರೀರಾಮ ಪ್ರಭುವಿನ ಅನುಗ್ರಹಕ್ಕೆ ಪಾತ್ರರಾಗಿ ಎಂದು ಧ್ವನಿವಧ೯ಕದ ಮೂಲಕ ಮನವಿ ಮಾಡುತ್ತಿದ್ದಾರೆ. ಈ ರೀತಿಯಲ್ಲಿಯೂ ಶ್ರೀರಾಮ ಮಂದಿರ ಲೋಕಾಪ೯ಣೆಯ ಪ್ರಚಾರ ವಿಭಿನ್ನವಾಗಿ ನಡೆಯುತ್ತಿದೆ.
ರಥದ ಬರುವಿಕೆಗಾಗಿ ಅಯೋಧ್ಯೆ ವ್ಯಾಪ್ತಿಯ ಅನೇಕ ಗ್ರಾಮಗಳ ಜನತೆ ಗಂಟೆಗಟ್ಟಲೆ ಕಾಯುತ್ತಾ ನಿಂತಿರುವ ದೖಶ್ಯ ಇಂಥ ಗ್ರಾಮಗಳಿಗೆ ತೆರಳಿದ ಸಂದಭ೯ ಕಂಡು ಬಂತು.
(ಅನಿಲ್ ಹೆಚ್.ಟಿ. ಮಡಿಕೇರಿ ಹಿರಿಯ ಪತ್ರಕರ್ತರು,ಅಂಕಣಕಾರರು)









