ಪರ್ತ್: ಮಾರ್ಕಸ್ ಸ್ಟೋಯ್ನಿಸ್ ಗಳಿಸಿದ ಅಬ್ಬರದ ಅರ್ಧಶತಕದ (18 ಎಸೆತಗಳಲ್ಲಿ 59 ರನ್) ನೆರವಿನಿಂದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ಟಿ20 ವಿಶ್ವಕಪ್ ಟೂರ್ನಿಯ ತನ್ನ 2ನೇ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಏಳು ವಿಕೆಟ್ ಅಂತರದಲ್ಲಿ ಮಣಿಸಿತು.ಪರ್ತ್ನಲ್ಲಿ ಟಾಸ್ ಸೋತು
ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ಪಾತುಮ್ ನಿಸ್ಸಾಂಕ (40 ರನ್) ಮತ್ತು ಚರಿತ್ ಅಸಲಂಕ (38 ರನ್) ಬ್ಯಾಟಿಂಗ್ ನೆರವಿನಿಂದ , 6 ವಿಕೆಟ್ ನಷ್ಟದಲ್ಲಿ 157 ರನ್ ಗಳಿಸಿತ್ತು. ಆಸೀಸ್, 16.3 ಓವರ್ಗಳಲ್ಲಿ 3 ವಿಕೆಟ್ ನಷ್ಟದಲ್ಲಿ ಗುರಿ ಮುಟ್ಟಿತು.ಸ್ಟೊಯ್ನಿಸ್, ಕೇವಲ 18 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನೊಂದಿಗೆ 59 ರನ್ಗಳಿ ಅಜೇಯರಾಗುಳಿದರು. ತಾಳ್ಮೆಯ ಆಟವಾಡಿದ ನಾಯಕ ಆರನ್ ಫಿಂಚ್, 42 ಎಸೆತಗಳಲ್ಲಿ ಔಟಾಗದೆ 31 ರನ್ಗಳಿಸಿದರು. ಮ್ಯಾಕ್ಸ್ವೆಲ್ 12 ಎಸೆತಗಳಲ್ಲಿ 23 ರನ್ಗಳಿಸಿದರೆ, ಮಿಚೆಲ್ ಮಾರ್ಷ್ 18 ರನ್ಗಳಿಸಿದರು.