ಕೇಪ್ಟೌನ್: ಆಸ್ಟ್ರೇಲಿಯಾ ಆರನೇ ಬಾರಿ ಟಿ20 ಮಹಿಳಾ ವಿಶ್ವಕಪ್ ಗೆದ್ದುಕೊಂಡಿದೆ. ಇದೇ ಮೊದಲ ಬಾರಿಗೆ ಫೈನಲ್ ತಲುಪಿದ್ದ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು 19 ರನ್ಗಳಿಂದ ಸೋಲಿಸಿ ಕಳೆದ ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಮತ್ತೆ ಕಪ್ ಎತ್ತಿದೆ
ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಬ್ಯಾಟಿಂಗ್
ಆಯ್ಕೆ ಮಾಡಿಕೊಂಡರು. ಆರಂಭಿಕ ಬ್ಯಾಟರ್ ಬೆಥ್ ಮೂನಿ (ಔಟಾಗದೆ 74; 53ಎ, 4X9, 6X1) ಅವರ ಅಮೋಘ ಬ್ಯಾಟಿಂಗ್ ಬಲದಿಂದ ತಂಡವು 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 156 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಆಸ್ಟ್ರೇಲಿಯಾ ಬೌಲರ್ಗಳು ತಡೆಯೊಡ್ಡಿದರು. ಟೂರ್ನಿಯುದ್ದಕ್ಕೂ ಮಿಂಚಿದ್ದ ಆರಂಭಿಕ ಬ್ಯಾಟರ್ ಲಾರಾ (61; 48ಎ, 4X5, 6X3) ತಮ್ಮ ಮೇಲಿನ ಭರವಸೆ ಉಳಿಸಿಕೊಂಡರು. ಆದರೆ ಉಳಿದ ಬ್ಯಾಟರ್ಗಳಿಂದ ಉತ್ತಮ ಬೆಂಬಲ ದೊರೆಯದೇ ದೊಡ್ಡ ಜೊತೆಯಾಟಗಳು ದಾಖಲಾಗಲಿಲ್ಲ. ಇದ ರಿಂದಾಗಿ 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 137 ರನ್ ಗಳಿಸಲಷ್ಟೇ ದಕ್ಷಿಣ ಆಫ್ರಿಕಾಕ್ಕೆ ಸಾಧ್ಯವಾಯಿತು. ಇದರಿಂದ ಆಸ್ಟ್ರೇಲಿಯಾ 19 ರನ್ ಜಯ ದಾಖಲಿಸಿತು.