ಕನಕಮಜಲು:ಕನಕಮಜಲು ಗ್ರಾಮದ ಶ್ರೀ ಆತ್ಮಾರಾಮ ಭಜನಾ ಮಂದಿರ ಇದರ ವಾರ್ಷಿಕ ಮಹಾ ಸಭೆಯ ಆತ್ಮರಾಮ ಸಭಾಭವನದಲ್ಲಿ ಅಧ್ಯಕ್ಷ ವಸಂತ ಮಳಿ ಅಧ್ಯಕ್ಷ ತೆಯಲ್ಲಿ ನಡೆಯಿತು.ವಾರ್ಷಿಕ ಲೆಕ್ಕ ಪತ್ರವನ್ನು ಕಾರ್ಯದರ್ಶಿ ಈಶ್ವರ ಕೊರಂಬಡ್ಕ ಸಭೆಗೆ ಮಂಡಿಸಿದರು. ಬಳಿಕ ಮುಂದಿನ ಮೂರು ವರ್ಷದ ಅವಧಿಗೆ 13 ಜನರ ನೂತನ
ಆಡಳಿತ ಮಂಡಳಿ ಸದಸ್ಯರನ್ನು ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ಈಶ್ವರ ಕೊರಂಬಡ್ಕ, ಕಾರ್ಯದರ್ಶಿಯಾಗಿ ಜಯಪ್ರಸಾದ್ ಕಾರಿಂಜ ಸದಸ್ಯರಾಗಿ ಜಗನ್ನಾಥ ಕಾಪಿಲ , ವಸಂತ ಮಳಿ, ಮನೋಜ್ ಕಲ್ಲುರಾಯ, ಹೇಮಚಂದ್ರ ಕುತ್ಯಾಳ, ಅಶೋಕ್ ಕೊರಂಬಡ್ಕ, ವಿಜಯ ಕುಮಾರ್ ನರಿಯೂರು,ರವಿಚಂದ್ರ ಕನ್ನಡ್ಕ ಮೂಲೆ, ಗಂಗಾಧರ್ ಮಾಣಿಕೊಡಿ,ಸುನಿಲ್ ಅಕ್ಕಿಮಲೆ, ಶ್ರೀಧರ ಅಡ್ಕಾರು, ಸಂತೋಷ್ ಕುಮಾರ್ ನೆಡೀಲು, ಹರ್ಷಿತ್ ಉಗ್ಗಮೂಲೆ ಆಯ್ಕೆಯಾದರು.

ಈಶ್ವರ ಕೊರಂಬಡ್ಕ,ಜಯಪ್ರಸಾದ್ ಕಾರಿಂಜ
ಈ ಸಂದರ್ಭ ವೇದಿಕೆಯಲ್ಲಿ ಗೌರವಧ್ಯಕ್ಷ ಹರೀಶ್ ಮೂರ್ಜೆ, ಮಂದಿರದ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ವರಂಬಳಿತ್ತಾಯ ಹಾಗೂ ಊರಿನ ಹಿರಿಯರು, ಭಕ್ತಾದಿಗಳು ಉಪಸ್ಥಿತ ರಿದ್ದರು.
ಕಾರ್ಯಕ್ರಮದಲ್ಲಿ ಸಮೀಕ್ಷ ಕುತ್ಯಾಳ ಪ್ರಾರ್ಥಿಸಿದರು, ವಸಂತ ಮಳಿ ಸ್ವಾಗತಿಸಿ, ಜಯಪ್ರಸಾದ್ ಕಾರಿಂಜ ನಿರೂಪಿಸಿದರು.












