ಸುಳ್ಯ: ಸುಳ್ಯ ಬಿಜೆಪಿ ಮಂಡಲ ಸಮಿತಿ ವತಿಯಿಂದ ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನ ಕರಪತ್ರ ಬಿಡುಗಡೆ ಕಾರ್ಯಕ್ರಮ ಸಿಎ ಬ್ಯಾಂಕ್ನ ದಿ.ಎಸ್ ವಿಜಯ ಕುಮಾರ್ ಸಭಾಭವನದಲ್ಲಿ ನಡೆಯಿತು.
ಶಾಸಕಿ ಭಾಗೀರಥಿ ಮುರುಳ್ಯ ಕರಪತ್ರ ಬಿಡುಗಡೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ವಹಿಸಿದ್ದರು. ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಕರಪತ್ರ ಹಂಚುವಿಕೆ ಹಾಗೂ ಮನೆ ಭೇಟಿ ಕುರಿತು ಮಾಹಿತಿ ನೀಡಿದರು. ಕರ ಪತ್ರ ಬಿಡುಗಡೆ ಸಂದರ್ಭದಲ್ಲಿ ಪ್ರಮುಖರಾದ ವೆಂಕಟ್ ದಂಬೆಕೋಡಿ, ಸುಬೋದ್ ಶೆಟ್ಟಿ ಮೇನಾಲ, ವಿನಯ ಕುಮಾರ್ ಮುಳುಗಾಡು,ಕುಸುಮಾಧರ ಎ.ಟಿ, ಸಂತೋಷ್ ಕುತ್ತಮೊಟ್ಟೆ , ವಿಕ್ರಂ ಎ.ವಿ ಅಡ್ಪಂಗಾಯ, ಜಯಪ್ರಕಾಶ್ ಕುಂಚಡ್ಕ, ಚನಿಯ ಕಲ್ತಡ್ಕ, ಶ್ರೀಕಾಂತ್ ಮಾವಿನಕಟ್ಟೆ, ಶಿವನಾಥ ರಾವ್, ಎಸ್.ಪಿ.ಲೋಕನಾಥ್, ಬುದ್ಧ ನಾಯ್ಕ್, ಶ್ರೀನಿವಾಸ ಮಾಸ್ತರ್, ಚಿದಾನಂದ, ಹರ್ಷಿತ್ ಕಾರ್ಜ, ರಂಜಿತ್ ಎನ್.ಆರ್ , ಮಾಧವ ಚಾಂತಾಳ, ಶಿವಪ್ರಸಾದ್ ಮೂಲೆತೋಟ ಮತ್ತಿತರ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.





