ಸುಳ್ಯ:ಅಟಲ್ ಜೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಂಬೆಟಡ್ಕದ ‘ನರೇಂದ್ರ ವಿಹಾರ”ದಲ್ಲಿ ನಾಮಫಲಕ ಅನಾವರಣ ಮತ್ತು ಸ್ನೇಹಮಿಲನ ಕಾರ್ಯಕ್ರಮ ಜು.8 ರಂದು ಮಧ್ಯಾಹ್ನ 12 ರಿಂದ ನಡೆಯಲಿದೆ. ಸಾರ್ವಜನಿಕ ಬಂಧುಗಳ, ಸಂಘಟನೆಗಳ ಪ್ರಮುಖರ, ಕಾರ್ಯಕರ್ತರ ಸಹಕಾರದಿಂದ
ಭವಿಷ್ಯದ ದಿನಗಳಲ್ಲಿ ಸಂಘಟನೆಗಳ ಚಟುವಟಿಕೆಗಳಿಗೆ ಪೂರಕವಾಗುವ ನಿಟ್ಟಿನಲ್ಲಿ 0.28 ಎಕ್ರೆ ನಿವೇಶನವು ಮಾಲಿಕರು ರಿಯಾಯಿತಿ ದರದಲ್ಲಿ ನೀಡಿರುವುದರ ಮೂಲಕ ಅಟಲ್ ಜೀ ಚಾರಿಟೇಬಲ್ ಟ್ರಸ್ಟ್ ರಿ ಸುಳ್ಯ ಹೆಸರಿನಲ್ಲಿ ನೋದಾಯಿಸಲ್ಪಟ್ಟಿದೆ. ನವೀಕರಣಗೊಂಡ ಕಟ್ಟಡದ ಒಂದು ಭಾಗದಲ್ಲಿ ಬಿಜೆಪಿ ಮಂಡಲ ಕಚೇರಿ ಉದ್ಘಾಟನೆಗೊಂಡಿದೆ. ಇದೀಗ ನಿವೇಶನದ ನಾಮಫಲಕ ಅನಾವರಣ, ಟ್ರಸ್ಟ್ ಉದ್ದೇಶವನ್ನು ಹಂಚಿಕೊಳ್ಳುವ ಸಲುವಾಗಿ ಸ್ನೇಹಮಿಲನ ನಡೆಯಲಿದೆ ಎಂದು ಅಟಲ್ ಜೀ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಹರೀಶ್ ಕಂಜಿಪಿಲಿ, ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ,ಕೋಶಾಧಿಕಾರಿ
ಎ ವಿ ತೀರ್ಥರಾಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.