ಸುಳ್ಯ: ಬಾಳಿಲದ ವಾಲ್ಮೀಕಿ ಆಶ್ರಮಶಾಲೆಯ ನೂತನ ಕಟ್ಟಡ ಹಾಗೂ ಪರಿಶಿಷ್ಟ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವನ್ನು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ ಉದ್ಘಾಟಿಸಿದರು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸುಳ್ಯ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದೊಂದಿಗೆ ಬಾಳಿಲ ವಾಲ್ಮೀಕಿ ಆಶ್ರಮಶಾಲೆ ಹಾಗೂ ಪರಿಶಿಷ್ಟ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ
ನೂತನ ಕಟ್ಟಡದ ಉದ್ಘಾಟನೆ ಹಾಗೂ ಸುಬ್ರಹ್ಮಣ್ಯ ವಾಲ್ಮೀಕಿ ಆಶ್ರಮಶಾಲೆಯ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮ ಹಾಗೂ ಇತರ ಅಭಿವೃದ್ಧಿ ಕೆಲಸಗಳನ್ನು ಸುಳ್ಯ ಪುರಭವನದಲ್ಲಿ ಸಚಿವರು ಉದ್ಘಾಟಿಸಿದ್ದರು. ಸಚಿವರು ಬಾಳಿಲಕ್ಕೆ ಆಗಮಿಸಲಿದ್ದಾರೆ ಎಂದು ಬೆಳಿಗ್ಗೆ ಸಾರ್ವಜನಿಕರು ಮತ್ತಿತರರು ಕಾದಿದ್ದರು. ಜನತಾ ದರ್ಶನಕ್ಕೆ ತಡ ಆಗುತ್ತದೆ ಎಂದು ಸಚಿವರು ನೇರವಾಗಿ ಸುಳ್ಯಕ್ಕೆ ಆಗಮಿಸಿ ಇಲ್ಲಿ ಉದ್ಘಾಟನೆ ನೆರವೇರಿಸಿದ್ದರು. ಸಚಿವರು ಬಾಳಿಲಕ್ಕೆ ಆಗಮಿಸಬೇಕು ಎಂದು ಸಾರ್ವಜನನಿಕರಿಂದ ಬೇಡಿಕೆ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಸಂಜೆ ಬಾಳಿಲಕ್ಕೆ ತೆರಳಿ ಕಟ್ಟಡವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿ ತೆರಳಿದರು
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ, ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್, ಕಾಂಗ್ರೆಸ್ ಮುಖಂಡರಾದ ಡಾ.ಕೆ.ಇ.ರಾಧಾಕೃಷ್ಣ, ಡಾ.ಬಿ.ರಘು, ಸದಾನಂದ ಮಾವಜಿ,ಚಂದ್ರಶೇಖರ ಕಾಮತ್, ರಾಜೀವಿ ಆರ್ ರೈ, ಸರಸ್ಬತಿ ಕಾಮತ್, ವಹೀದಾ ಇಸ್ಮಾಯಿಲ್, ಗಫೂರ್ ಕಲ್ಮಡ್ಕ, ಇಸ್ಮಾಯಿಲ್ ಪಡ್ಪಿನಂಗಡಿ, ಕಳಂಜ ವಿಶ್ವನಾಥ ರೈ,ಸಿದ್ದಿಕ್ ಕೊಕ್ಕೊ, ಪ್ರವೀಣ ಮರುವಂಜ, ಮತ್ತಿತರರು ಉಪಸ್ಥಿತರಿದ್ದರು.












