ಹಾಂಗ್ಝೌ:ಏಷ್ಯನ್ ಗೇಮ್ಸ್ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನ ಮತ್ತು ಕಿಶೋರ್ ಜೇನಾ ಬೆಳ್ಳಿ ಪದಕ ಜಯಿಸಿದ್ದಾರೆ.ನೀರಜ್, 88.88 ಮೀಟರ್ ದೂರ ಜಾವೆಲಿನ್ ಎಸೆದು ಗಮನ ಸೆಳೆದಿದ್ದಾರೆ.ನೀರಜ್ಗೆ ತಕ್ಕ ಪೈಪೋಟಿ ಒಡ್ಡಿದ ಭಾರತೀಯವರೇ ಆದ ಜೇನಾ 87.54 ಮೀಟರ್ ದೂರ ಜಾವೆಲಿನ್ ಎಸೆದು ಬೆಳ್ಳಿ ಪದಕಕ್ಕೆ ಅರ್ಹರಾದರು.ಟೋಕಿಯೊ ಒಲಿಂಪಿಕ್ ಚಿನ್ನದ ಪದಕ ವೀರ ನೀರಜ್, 2018ರ ಏಷ್ಯನ್ ಕ್ರೀಡಾಕೂಟದಲ್ಲೂ
ಚಿನ್ನ ಜಯಿಸಿದ್ದರು. 4X400ಮೀ ರಿಲೇ ವಿಭಾಗದಲ್ಲಿ ಭಾರತದ ಪುರುಷರ ತಂಡ ಚಿನ್ನದ ಪದಕ ಜಯಿಸಿದೆ.3 ನಿಮಿಷ 01.58 ಸೆಕೆಂಡುಗಳಲ್ಲಿ ಗುರಿ ತಲುಪಿದ ಮೊಹಮ್ಮದ್ ಅನಾಸ್ ಯಾಹ್ಯಾ, ಅಮೋಜ್ ಜೇಕಬ್, ರಾಜೇಶ್ ರಮೇಶ್ ಮತ್ತು ಮುಹಮ್ಮದ್ ಅಜ್ಮಲ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
4X400ಮೀ ರಿಲೇ ವಿಭಾಗದಲ್ಲಿ ಮಹಿಳೆಯರ ತಂಡವೂ ಬೆಳ್ಳಿ ಪದಕವನ್ನು ಜಯಿಸಿದೆ. 3 ನಿಮಿಷ 27.85 ಗುರಿ ತಲುಪಿದ ವಿತ್ಯಾ ರಾಮ್ರಾಜ್, ಐಶ್ಚರ್ಯ ಕೈಲಾಶ್ ಮಿಶ್ರಾ, ಪ್ರಾಚಿ ಮತ್ತು ಸುಭಾ ವೆಂಕಟೇಶನ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಭಾರತದ ಜ್ಯೋತಿ ಸುರೇಖಾ ಹಾಗೂ ಓಜಸ್ ದೇವತಾಳೆ ಅವರು ಏಷ್ಯನ್ ಕ್ರೀಡಾಕೂಟದ ಆರ್ಚರಿ ಸ್ಪರ್ಧೆಯ ಮಿಶ್ರ ಕಾಂಪೌಂಡ್ ವಿಭಾಗದಲ್ಲಿ ಬುಧವಾರ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.ಈ ಜೋಡಿ, ದಕ್ಷಿಣ ಕೊರಿಯಾ ಸೊ ಚಾಯಿವೊನ್ ಮತ್ತು ಜೂ ಜಾಯಿಹೂನ್ ಎದುರು ವಿರುದ್ಧ 159–158 ಅಂತರದಲ್ಲಿ ಗೆಲುವು ಸಾಧಿಸಿತು.
ಇದು ಜ್ಯೋತಿ ಹಾಗೂ ಓಜಸ್ ಏಷ್ಯನ್ ಗೇಮ್ಸ್ನಲ್ಲಿ ಗಳಿಸಿದ ಮೊದಲ ಚಿನ್ನದ ಪದಕವಾಗಿದೆ.ಲವ್ಲಿನಾ ಬೋರ್ಗೊಹೈನ್ ಅವರು ಮಹಿಳೆಯರ 75 ಕೆ.ಜಿ. ವಿಭಾಗದ ಬೆಳ್ಳಿಯ ಪದಕ ಗೆದ್ದಿದ್ದಾರೆ.