ಸಿಲೆಟ್: ಶಫಾಲಿ ವರ್ಮಾ ಆಲ್‌ರೌಂಡ್ ಆಟದ ಬಲದಿಂದ ಭಾರತ ತಂಡವು ಮಹಿಳೆಯರ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಬಾಂಗ್ಲಾ ವಿರುದ್ಧ ಜಯಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು. ಪಂದ್ಯದಲ್ಲಿ ಭಾರತ ತಂಡವು 59 ರನ್‌ಗಳಿಂದ ಜಯಿಸಿತು. ಒಟ್ಟು ಎಂಟು ಅಂಕ ಗಳಿಸಿರುವ
ತಂಡವು ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿದೆ. ಲೀಗ್ ಹಂತದಲ್ಲಿ ಇನ್ನೊಂದು ಪಂದ್ಯದಲ್ಲಿ ಭಾರತ ಆಡಬೇಕಿದೆ.ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಹರ್ಮನ್‌ಪ್ರೀತ್ ಬಳಗಕ್ಕೆ ಶಫಾಲಿ (55; 44ಎ, 4X5, 6X2) ಹಾಗೂ ಸ್ಮೃತಿ (47; 38ಎ, 4X6) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 96 ರನ್ ಸೇರಿಸಿದರು. ಜಿಮಿಮಾ ರಾಡ್ರಿಗಸ್ ಅಜೇಯ 35 ರನ್ ಗಳಿಸಿದರು. ಇದರಿಂದಾಗಿ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 159 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 100 ರನ್ ಗಳಿಸಿತು. ಭಾರತದ ದೀಪ್ತಿ ಶರ್ಮಾ ಹಾಗೂ ಶಫಾಲಿ ವರ್ಮಾ ತಲಾ ಎರಡು ವಿಕೆಟ್ ಗಳಿಸಿದರು.