ಕೊಲಂಬೊ: ಏಷ್ಯಾಕಪ್ನ ಮೊದಲ ಸುತ್ತಿನ ಪಂದ್ಯಗಳು ಪೂರ್ಣಗೊಂಡಿದೆ. ಈ ಸುತ್ತಿನಲ್ಲಿ ಅತ್ಯಧಿಕ ಪಾಯಿಂಟ್ಸ್ ಕಲೆಹಾಕಿದ ನಾಲ್ಕು ತಂಡಗಳು ಇದೀಗ ಸೂಪರ್-4 ಹಂತಕ್ಕೇರಿದೆ. ಇನ್ನು ನೇಪಾಳ ಹಾಗೂ ಅಫ್ಘಾನಿಸ್ತಾನ್ ತಂಡಗಳು ಟೂರ್ನಿಯಿಂದ ಹೊರಬಿದ್ದಿದೆ. ಸೂಪರ್-4 ಹಂತದಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳು ಸೆಣಸಲಿದೆ. ಈ ಸುತ್ತಿನಲ್ಲಿ ಪ್ರತಿ ತಂಡಗಳು ಮೂರು
ಪಂದ್ಯಗಳನ್ನಾಡಲಿದೆ.
ಸೂಪರ್-4 ಹಂತದಲ್ಲಿ ಪ್ರತಿ ತಂಡಗಳು ಉಳಿದ ಮೂರು ತಂಡಗಳ ವಿರುದ್ಧ ಒಂದೊಂದು ಪಂದ್ಯವಾಡಲಿದೆ. ಇಲ್ಲೂ ಕೂಡ ಅಂಕ ಪಟ್ಟಿ ಇರಲಿದ್ದು, ಈ ಪಾಯಿಂಟ್ಸ್ ಟೇಬಲ್ನಲ್ಲಿ ಅತ್ಯಧಿಕ ಅಂಕ ಕಲೆಹಾಕುವ ಮೊದಲೆರಡು ತಂಡಗಳು ನೇರವಾಗಿ ಫೈನಲ್ಗೆ ಪ್ರವೇಶಿಸಲಿದೆ.
ಅಂದರೆ ಇಲ್ಲಿ ಯಾವುದೇ ಸೆಮಿ ಫೈನಲ್ ಪಂದ್ಯವಿರುವುದಿಲ್ಲ. ಬದಲಾಗಿ ಸೂಪರ್-4 ಹಂತದ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳು ಫೈನಲ್ಗೆ ಅರ್ಹತೆ ಪಡೆಯಲಿದೆ.
ಸೂಪರ್-4 ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮತ್ತೆ ಮುಖಾಮುಖಿಯಾಗಲಿದೆ. ಸೆಪ್ಟೆಂಬರ್ 10 ರಂದು ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ಈ ಪಂದ್ಯ ನಡೆಯಲಿದ್ದು, ಹೈವೋಲ್ಟೇಜ್ ಪೈಪೋಟಿಯನ್ನು ನಿರೀಕ್ಷಿಸಬಹುದು. ಒಂದು ವೇಳೆ ಉಭಯ ತಂಡಗಳು ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದರೆ ಫೈನಲ್ನಲ್ಲೂ ಮತ್ತೆ ಮುಖಾಮುಖಿಯಾಗಬಹುದು.
ಸೂಪರ್-4 ಹಂತದ ವೇಳಾಪಟ್ಟಿ:
ಸೆಪ್ಟೆಂಬರ್ 9- ಶ್ರೀಲಂಕಾ Vs ಬಾಂಗ್ಲಾದೇಶ (ಕೊಲಂಬೊ)
ಸೆಪ್ಟೆಂಬರ್ 10- ಭಾರತ Vs ಪಾಕಿಸ್ತಾನ (ಕೊಲಂಬೊ)
ಸೆಪ್ಟೆಂಬರ್ 12- ಭಾರತ Vs ಶ್ರೀಲಂಕಾ (ಕೊಲಂಬೊ)
ಸೆಪ್ಟೆಂಬರ್ 14- ಪಾಕಿಸ್ತಾನ Vs ಶ್ರೀಲಂಕಾ (ಕೊಲಂಬೊ)
ಸೆಪ್ಟೆಂಬರ್ 15- ಭಾರತ Vs ಬಾಂಗ್ಲಾದೇಶ (ಕೊಲಂಬೊ)
ಸೆಪ್ಟೆಂಬರ್ 17- ಫೈನಲ್ ಪಂದ್ಯ (ಕೊಲಂಬೊ)