ಪಲೇಕೆಲೆ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ನಡೆಯುವ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಎ ಗುಂಪಿನಲ್ಲಿರುವ ಈ ತಂಡಗಳು ಇದೇ ಟೂರ್ನಿಯಲ್ಲಿ ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆ ಇದೆ.. ಉತ್ತಮ ಲಯದಲ್ಲಿರುವ ವಿರಾಟ್ ಅವರನ್ನು ಕಟ್ಟಿಹಾಕುವುದೇ ಪಾಕ್ ಬೌಲರ್ಗಳಿಗೆ
ಸವಾಲಾಗಲಿದೆ. ಶಾಹೀನ್ ಆಫ್ರಿದಿ, ನಸೀಂ ಶಹಾ ಮತ್ತು ಹ್ಯಾರಿಸ್ ರವೂಫ್ ಅವರು ತಮ್ಮ ಬೌಲಿಂಗ್ನಲ್ಲಿ ಹೊಸ ತಂತ್ರಗಾರಿಕೆ ಅನುಸರಿಸುವುದು ಅನಿವಾರ್ಯವಾಗಿದೆ. ಏಷ್ಯಾ ಕಪ್ ಗೆದ್ದರೆ ಭಾರತ ತಂಡದ ಆತ್ಮವಿಶ್ವಾಸವು ಹೆಚ್ಚಲಿದೆ. ಅದರಿಂದ ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ತಂಡದ ಸಾಮರ್ಥ್ಯ ಹೆಚ್ಚಬಹುದು. ಯುವ ಬ್ಯಾಟರ್ ಶುಭಮನ್ ಗಿಲ್, ತಿಲಕ್ ವರ್ಮಾ,ಸೂರ್ಯಕುಮಾರ್ ಯಾದವ್ ಅವರಿಗೆ ತಮ್ಮ ಛಾಪು ಮೂಡಿಸಲು ಇದು ಸಕಾಲ. ಕೆ.ಎಲ್. ರಾಹುಲ್ ಗೈರುಹಾಜರಿಯಲ್ಲಿ ಶ್ರೇಯಸ್ ಅಯ್ಯರ್ ಸ್ಥಾನ ಪಡೆಯುವ ಸಾಧ್ಯತೆ ಇದೆ. ವಿಕೆಟ್ಕೀಪಿಂಗ್ ಹೊಣೆಯು ಇಶಾನ್ ಕಿಶನ್ ಅವರಿಗೆ ಲಭಿಸಬಹುದು.
ಗಾಯದಿಂದಾಗಿ ಕ್ರಿಕೆಟ್ನಿಂದ ದೂರವುಳಿದಿದ್ದ ವೇಗಿ ಜಸ್ಪ್ರೀತ್ ಬೂಮ್ರಾ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಡಿದ್ದರು. ಫಿಟ್ ಕೂಡ ಆಗಿದ್ದಾರೆ.ಅವರೊಂದಿಗೆ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಬೌಲಿಂಗ್ ಹೊಣೆ ನಿಭಾಯಿಸಲಿದ್ದಾರೆ.
ಪಾಕ್ ತಂಡದ ನಾಯಕ ಮತ್ತು ಉತ್ತಮ ಲಯದಲ್ಲಿರುವ ಬ್ಯಾಟರ್ ಬಾಬರ್ ಆಜಂ, ಮೊಹಮ್ಮದ್ ರಿಜ್ವಾನ್, ಇಫ್ತಿಕಾರ್ ಅಹಮದ್ ಹಾಗೂ ಜಮಾನ್ ಅವರನ್ನು ನಿಯಂತ್ರಿಸುವ ಹೊಣೆ ಈ ಮೂವರು ವೇಗಿಗಳ ಮೇಲಿದೆ. ರವೀಂದ್ರ ಜಡೇಜ ಅವರೊಂದಿಗೆ ಕುಲದೀಪ್ ಯಾದವ್ ಸ್ಪಿನ್ ವಿಭಾಗವನ್ನು ನಿರ್ವಹಿಸುವ ಸಾಧ್ಯತೆ ಇದೆ.
ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ) ವಿರಾಟ್ ಕೊಹ್ಲಿ ಶ್ರೇಯಸ್ ಅಯ್ಯರ್ ಕೆ.ಎಲ್. ರಾಹುಲ್ ಶುಭಮನ್ ಗಿಲ್ ಸೂರ್ಯಕುಮಾರ್ ಯಾದವ್ ತಿಲಕ್ ವರ್ಮಾ ಇಶಾನ್ ಕಿಶನ್ ಹಾರ್ದಿಕ್ ಪಾಂಡ್ಯ (ಉಪನಾಯಕ) ರವೀಂದ್ರ ಜಡೇಜ ಅಕ್ಷರ್ ಪಟೇಲ್ ಶಾರ್ದೂಲ್ ಠಾಕೂರ್ ಜಸ್ಪ್ರೀತ್ ಬೂಮ್ರಾ ಮೊಹಮ್ಮದ್ ಶಮಿ ಮೊಹಮ್ಮದ್ ಸಿರಾಜ್ ಕುಲದೀಪ್ ಯಾದವ್ ಪ್ರಸಿದ್ಧ ಕೃಷ್ಣ ಸಂಜು ಸ್ಯಾಮ್ಸನ್ (ಮೀಸಲು ಆಟಗಾರ).
ಪಾಕಿಸ್ತಾನ: ಬಾಬರ್ ಆಜಂ (ನಾಯಕ) ಅಬ್ದುಲ್ಲಾ ಶಫೀಕ್ ಫಖಾರ್ ಜಮಾನ್ ಇಮಾಮ್ ಉಲ್ ಹಕ್ ಸಲ್ಮಾನ್ ಅಲಿ ಆಘಾ ಇಫ್ರಿಕಾರ್ ಅಹಮದ್ ಮೊಹಮ್ಮದ್ ರಿಜ್ವಾನ್ ಮೊಹಮ್ಮದ್ ಹ್ಯಾರಿಸ್ ಶಾದಾಬ್ ಖಾನ್ ಮೊಹಮ್ಮದ್ ನವಾಜ್ ಉಸಾಮ ಮೀರ್ ಫಾಹೀಂ ಅಶ್ರಫ್ ಹ್ಯಾರಿಸ್ ರವೂಫ್ ಮೊಹಮ್ಮದ್ ವಾಸೀಂ ಜೂನಿಯರ್ ನಸೀಂ ಶಹಾ ಶಾಹೀನ್ ಆಫ್ರಿದಿ ಸಾದ್ ಶಕೀಲ್ ತಯ್ಯಬ್ ತಾಹೀರ್ (ಮೀಸಲು ಆಟಗಾರ)
ಪಂದ್ಯ ಆರಂಭ: ಮಧ್ಯಾಹ್ನ 3
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಹಾಟ್ಸ್ಟಾರ್ ಆ್ಯಪ್