ಹೂಸ್ಟನ್: ನಾಸಾದ ಮಹತ್ವಾಕಾಂಕ್ಷೆಯ ‘ಆರ್ಟೆಮಿಸ್–2’ನ ನಾಲ್ವರು ಗಗನಯಾನಿಗಳ ತಂಡವು ಪೆಸಿಫಿಕ್ ಮಹಾಸಾಗರದಲ್ಲಿ ಸುರಕ್ಷಿತವಾಗಿ ಇಳಿಯುವ ಮೂಲಕ ತಮ್ಮ 10 ದಿನಗಳ ಬಾಹ್ಯಾಕಾಶ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.ನಾಸಾದ ‘ಇಂಟೆಗ್ರಿಟಿ’ ಎಂದು ಹೆಸರಿಸಲಾದ
ಓರಿಯೊನ್ ಕ್ಯಾಪ್ಸುಲ್ (ಕೋಶವು) ಪೆಸಿಫಿಕ್ ಕಾಲಮಾನ ಶುಕ್ರವಾರ ಸಂಜೆ 5 ಗಂಟೆಗೆ ದಕ್ಷಿಣ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಪ್ಯಾರಾಚೂಟ್ ಸಹಾಯದಿಂದ ಸಮುದ್ರಕ್ಕೆ ಇಳಿಯಿತು.ಐದು ದಶಕಗಳ ಬಳಿಕ ಚಂದ್ರನ ಕಕ್ಷೆಗೆ ನಾಸಾ, ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಗಗನಯಾನಿಗಳನ್ನು ಕಳುಹಿಸಿತ್ತು. ಈ ಪರಿಭ್ರಮಣವು ‘ಅಪೋಲೊ ಯುಗ’ದ ನಂತರ ಚಂದ್ರನಲ್ಲಿ ನಾಸಾದ ಮೊದಲ ಪಯಣವಾಗಿದೆ.
ಮುಂದಿನ 2 ವರ್ಷಗಳಲ್ಲಿ ದಕ್ಷಿಣ ಧ್ರುವದಲ್ಲಿ ಮಾನವ ಹೆಜ್ಜೆ ಇಡುವ ಪ್ರಯತ್ನಕ್ಕೆ ಇದು ಮುನ್ನುಡಿ ಬರೆದಿದೆ.ನಾಲ್ವರು ಗಗನಯಾನಿಗಳಿದ್ದ ಅಮೆರಿಕದ ಓರಿಯೊನ್ ಕ್ಯಾಪ್ಸುಲ್ ಚಂದ್ರನ ಸುತ್ತ ಪರಿಭ್ರಮಣ ಮಾಡಿದ ವೇಳೆ ಭೂಮಿಗೆ ಗೋಚರಿಸದ, ಚಂದ್ರನ ಇನ್ನೊಂದು ಬದಿಯ ಈ ಹಿಂದೆ ಕಂಡಿರದ ಹಲವು ಚಿತ್ರಗಳನ್ನು ಸೆರೆಹಿಡಿದು ನಾಸಾಗೆ ಕಳುಹಿಸಿತ್ತು.












