ಕಾಸರಗೋಡು: ವಿಧಾನಸಭಾ ಪೂರ್ವಭಾವಿಯಿಗಿ ಕಾಸರಗೋಡು ಜಿಲ್ಲಾಧಿಕಾರಿ ಇಂಬಶೇಖರ್ ಕೆ. ಅವರನ್ನು ವರ್ಗಾಯಿಸಲಾಗಿದೆ. ನೂತನ ಜಿಲ್ಲಾಧಿಕಾರಿಯಿಗಿ ತ್ರಿಶ್ಶೂರು ಜಿಲ್ಲಾಧಿಕಾರಿಯಾಗಿದ್ದ ಅರ್ಜುನ್ ಪಾಂಡ್ಯನ್ ಅವರನ್ನು ಕಾಸರಗೋಡಿಗೆ ನೇಮಿಸಿ ಆದೇಶವಾಗಿದೆ. ಕಾಸರಗೋಡು ಜಿಲ್ಲಾಧಿಕಾರಿಯಾಗಿ
ಚುನಾವಣಾ ಕರ್ತವ್ಯನಿರ್ವಹಣೆಯಲ್ಲಿ ಅವರು ಶ್ಲಾಘನೆಗೆ ಪಾತ್ರರಾಗಿ ಚುನಾವಣಾ ಆಯೋಗದ ಪ್ರಶಸ್ತಿಗೆ ಪಾತ್ರರಾಗಿದ್ದರು.
ರಾಜ್ಯ ಟೂರಿಸಂ ನಿರ್ದೇಶಕರಾಗಿದ್ದ ಶಿಖಾ ಸುರೇಂದ್ರನ್ ಐಎಎಸ್ ಅವರನ್ನು ತ್ರಿಶೂರು ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ ಎಂದು ರಾಜ್ಯ ಸರಕಾರದ ಪ್ರಕಟಣೆ ತಿಳಿಸಿದೆ.








