ಶಿರೂರು: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಗಂಗಾವಳಿ ನದಿಯಲ್ಲಿ 3ನೇ ಹಂತದ ಶೋಧ ಕಾರ್ಯ ನಡೆಯುತ್ತಿದೆ. ಕೇರಳ ಮೂಲದ ಅರ್ಜುನ್ ಓಡಿಸುತ್ತಿದ್ದ ಲಾರಿಯ ಕಟ್ಟಿಗೆ ತುಂಡು ಪತ್ತೆಯಾದ ಬೆನ್ನಲ್ಲೇ
ಆತನ ಲಾರಿಗೆ ಅಳವಡಿಸಿದ್ದ ಕ್ರ್ಯಾಶ್ ಗಾರ್ಡ್ ಪತ್ತೆ ಆಗಿದೆ. ಡ್ರೆಜ್ಜರ್ ಯಂತ್ರದ ಮೂಲಕ ಕಾರ್ಯಾಚರಣೆ ವೇಳೆ ಲಾರಿ ಗಾರ್ಡ್ ಪತ್ತೆ ಆಗಿದೆ. ಲಾರಿ ಕ್ರ್ಯಾಶ್ ಗಾರ್ಡ್ ಪತ್ತೆ ಹಿನ್ನೆಲೆಯಲ್ಲಿ ನಿವೃತ್ತ ಸೇನಾಧಿಕಾರಿ ಇಂದ್ರಬಾಲನ್ ನಿರ್ದೇಶನದಂತೆ ಕಾರ್ಯಾಚರಣೆ ಮುಂದುವರೆದಿದೆ. ಇನ್ನೂ ಆರು ದಿನಗಳ ಕಾರ್ಯಾಚಾರಣೆ ಮುಂದುವರೆಯಲಿದೆ.









