ಎಲಿಮಲೆ: ಎಲಿಮಲೆಯ ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ನ ರೂಬಿ ಜ್ಯುಬಿಲಿ ಸಂಭ್ರಮದ ಅಂಗವಾಗಿ ನಡೆದ ‘ಆಧ್ಯಾತ್ಮಿಕ ಮಜ್ಲಿಸ್’ ಆಧ್ಯಾತ್ಮಿಕಕ ಅರಿವಿನ ಹೊಸ ಲೋಕವನ್ನು ತೆರೆದಿಟ್ಟಿತು. ಕೇರಳದ ಸಫ್ವಾನ್ ಸಖಾಫಿ ಪತ್ತಪಿರಿಯಂ ಇವರಿಂದ ‘ಅರಿವಿನ್ ನಿಲಾವ್’ ಆಧ್ಯಾತ್ಮಿಕ ಮಜ್ಲಿಸ್ ಕಾರ್ಯಕ್ರಮ ನಡೆಯಿತು.ಸಮಾರಂಭವನ್ನು ಎಲಿಮಲೆಯ ಮಸೀದಿಯ ಮಾಜಿ ಮುದರ್ರಿಸ್ ತೌಸೀಫ್ ಸಅದಿ ಉದ್ಘಾಟಿಸಿದರು. ಎಲಿಮಲೆ ಬದ್ರಿಯಾ ಜುಮಾ ಮಸೀದಿಯ
ಖತೀಬರಾದ ಅಹಮ್ಮದ್ ರಿಫಾಯಿ ತಂಙಳ್ ದುವಾ ನೆರವೇರಿಸಿದರು. ಮಹ್ಮೂದ್ ಸಖಾಫಿ ಸ್ವಾಗತಿಸಿದರು.ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಲತೀಫ್ ಹರ್ಲಡ್ಕ ಅಧ್ಯಕ್ಷತೆ ವಹಿಸಿದ್ದರು.

ಮಂಗಳೂರಿನ ಸಾಮಾಜಿಕ ಮುಖಂಡರಾದ ಹೈದರ್ ಪರ್ತಿಪಾಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವ, ಕಣಚ್ಚೂರು ವಿದ್ಯಾ ಸಂಸ್ಥೆಗಳ ಚೆಯರ್ಮೆನ್ ಮೋನು ಹಾಜಿ ಕಣಚ್ಚೂರು, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ, ಫೈಝಲ್ ಹಿಮಮಿ ಸಖಾಫಿ, ಎಲಿಮಲೆ ಬದ್ರಿಯಾ ಜಮಾ ಅತ್ ಕಮಿಟಿ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ, ಪ್ರಮುಖರಾದ

ಮಹಮೂದ್ ಮುಸ್ಲಿಯಾರ್ ಎಲಿಮಲೆ, ಅಬೂಬಕ್ಕರ್ ಹಿಮಮಿ ಸಖಾಫಿ, ಖಲೀಲ್ ಹಿಮಮಿ ಸಖಾಫಿ, ಅಬ್ದುನ್ನಾಸಿರ್ ಸಖಾಫಿ, ತಾಜ್ ಮಹಮ್ಮದ್ ಸಂಪಾಜೆ, ಮೂಸಾ ಕುಂಞಿ ಪೈಂಬೆಚ್ಚಾಲ್, ಅಬೂಬಕ್ಕರ್ ಅಡ್ಕಾರ್, ಆಲಿ ಹಾಜಿ ಕಲ್ಲುಗುಂಡಿ, ಪತ್ರಕರ್ತ ಶರೀಫ್ ಜಟ್ಟಿಪಳ್ಳ, ಅಬೂಬಕ್ಕರ್ ಪಾಣಾಜೆ, ಫೈಝಲ್ ಸಖಾಫಿ, ರಶೀದ್ ಕೆರೆಮೂಲೆ, ಹಮೀದ್ ಬೀಜಕೊಚ್ಚಿ, ಅಬೂಬಕ್ಕರ್ ಕೆ.ಎ, ಸಿದ್ದಿಕ್ ಕಟ್ಟೆಕ್ಕಾರ್,ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ನ ಪ್ರಧಾನ ಕಾರ್ಯದರ್ಶಿ ಸೂಫಿ ಎಲಿಮಲೆ, ಕಾರ್ಯದರ್ಶಿಗಳಾದ ಸಿದ್ದೀಕ್ ಎಲಿಮಲೆ, ಅಶ್ರಫ್ ಜಿ.ಎ.ಕೆ ಮತ್ತಿತರರು ಉಪಸ್ಥಿತರಿದ್ದರು.









