ಬಂದಡ್ಕ:ಗಡಿಪ್ರದೇಶಗಳಲ್ಲಿ ಅರೆಭಾಷೆ ಬೆಳವಣಿಗೆ ಹಾಗು ಅರೆಭಾಷೆ ಮಾತನಾಡುವವರ ಭಾಂದವ್ಯ ವೃದ್ದಿಗಾಗಿ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಅರೆಭಾಷೆ ಮಾತನಾಡುವವರ ಅರೆಭಾಷೆ ಗಡಿನಾಡ ಉತ್ಸವ ಗಡಿ ಭಾಗದಲ್ಲಿ 6 ಕಡೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದರು. ಮೊದಲ ಕಾರ್ಯಕ್ರಮ ಕೇರಳದ ಬಂದಡ್ಕದ ಶ್ರೀ ಸುಬ್ರಹ್ಮಣ್ಯ ದೇವಳದ ಮಯೂರ ಸಭಾಭನದಲ್ಲಿ ಅ.27ರಂದು ನಡೆಯಲಿದೆ. ಈ ಕುರಿತು ನಡೆದ
ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮ ಗೌಡ ಸಂಘ ಬಂದಡ್ಕ ಇದರ ಸಹಯೋಗದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಇದಕ್ಕಾಗಿ ಸ್ಥಳೀಯ ಸಮಿತಿ ರಚಿಸಲಾಗಿದೆ. ಕಾರ್ಯಕ್ರಮದ ಉಸ್ತುವಾರಿಯನ್ನು ಅಕಾಡೆಮಿ ಸದಸ್ಯರಾದ ಚಂದ್ರಶೇಖರ ಪೇರಾಲು ಹಾಗು ಲತಾ ಕುದ್ಪಾಜೆಯವರಿಗೆ ವಹಿಸಲಾಯಿತು.
ಸಭೆಯಲ್ಲಿ ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್. ಗಂಗಾಧರ,ಪ್ರಧಾನ ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆ, ನಿರ್ದೇಶಕರಾದ ದೊಡ್ಡಣ್ಣ ಬರೆಮೇಲು. ಮಹಿಳಾ ಘಟಕ ಅಧ್ಯಕ್ಷೆ ವಿನುತಾ ಪಾತಿಕಲ್ಲು ಅರೆಭಾಷೆ ಅಕಾಡೆಮಿ ಸದಸ್ಯರಾದ ಚಂದ್ರಶೇಖರ ಪೇರಾಲು, ಡಾ. ಎನ್.ಎ.ಜ್ನಾನೇಶ್, ಲತಾ ಕುದ್ಪಾಜೆ, ಗ್ರಾಮಗೌಡ ಸಮಿತಿ ಅದ್ಯಕ್ಷ ವಿಶ್ವ ಕುಮಾರ್ ಕಟ್ಟಕೋಡಿ, ಪುರುಷೋತ್ತಮ ಬೊಡ್ಡನಕೊಚ್ಚಿ ವೇದಿಕೆಯಲ್ಲಿ ಉಪಸ್ತಿತರಿದ್ದರು. ಕಾರ್ಯಕ್ರಮದಲ್ಲಿ
ಗೌಡ ಗ್ರಾಮ ಸಮಿತಿ ನೂತನ ಅಧ್ಯಕ್ಷ ವೆಂಕಟರಮಣ ಕೊಯಿಂಗಾಜೆ , ಕಾರ್ಯದರ್ಶಿ ಚರಣಕುಮಾರ್ ಮಾವಜಿ ಕೋಶಾಧಿಕಾರಿ ಮೋಹನ್ ಇಳಂದಿಲ ಮಹಿಳಾ ಘಟಕ ಅಧ್ಯಕ್ಷೆ ಹಕ್ಷಿತಾ, ಕಾರ್ಯದರ್ಶಿ ರೂಪ ಕೋಶಾಧಿಕಾರಿ ವಿದ್ಯಾಶ್ರೀ ತರುಣ ಘಟಕದ ಪದಾಧಿಕಾರಿಗಳಾದ ಗಣೇಶ್ ಪಾಲಾರ್, ಜ್ನಾನೇಶ್ ಸದಸ್ಯರಾದ ಭೋಜಪ್ಪ ಪಾಲಾರ್ , ಮೋನಪ್ಪ ಗೌಡ ಇಳಂದಿಲ, ಗೋಪಾಲಕ್ರಷ್ಣ ಮಾವಜಿ, ಹೂವಪ್ಪ ಗೌಡ ಕಟ್ಟಕೋಡಿ , ಮೋನಪ್ಪ ಗೌಡ ಮಕ್ಕಟ್ಟಿ, ರವಿಪ್ರಸಾದ್ ಇಳಂದಿಳ , ಮಧುಳಿಕಾ ಮಕ್ಕಟ್ಟಿ, ಧರ್ಮಾವತಿ ಪಾಲಾರ್ ಮೂಲೆ ಮತ್ತು ಸದಸ್ಯರು ಉಪಸ್ಥಿತರಿದ್ದರು.