ಮಂಗಳೂರು:ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ವಿ4 ನ್ಯೂಸ್ ಹಾಗೂ ಎಂಬಿ. ಫೌಂಡೇಶನ್ ಸಹಯೋಗದಲ್ಲಿ ನಡೆಯುವ ಅರೆಭಾಷೆ ಕಾಮಿಡಿ ರಿಯಾಲಿಟಿ ಶೋಗೆ ಆಯ್ಕೆಯಾದ ತಂಡದವರಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.ಅರೆಭಾಷೆ ಕಾಮಿಡಿ ರಿಯಾಲಿಟಿ ಶೋಗೆ ತಂಡಗಳ ಆಯ್ಕೆ ಪ್ರಕ್ರಿಯೆ ಈಗಾಗಲೇ ನಡೆದಿದೆ. ಆಯ್ಕೆಯಾದ ತಂಡಗಳಿಗೆ ಮಂಗಳೂರಿನ
ಮಣ್ಣಗುಡ್ಡದಲ್ಲಿರುವ ವಿ4 ನ್ಯೂಸ್ ಚಾನೆಲ್ನ. ಸ್ಟುಡಿಯೋದಲ್ಲಿ ತರಬೇತಿ ಕಾರ್ಯಾಗಾರ ನಡೆಯಿತು.ತರಬೇತಿ ಕಾರ್ಯಾಗಾರವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರನಾಥ ಗಟ್ಟಿ ಕಾಪಿಕಾಡ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್,ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು

ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಲೋಕೇಶ್ ಊರುಬೈಲು,ಲತಾ ಕುತ್ಪಾಜೆ,
ಅರೆಭಾಷೆ ಕಲಾವಿದರ ಒಕ್ಕೂಟದ ಅಧ್ಯಕ್ಷ ಭವಾನಿಶಂಕರ ಅಡ್ತಲೆ ಮಾತನಾಡಿದರು. ಈ ಸಂದರ್ಭದಲ್ಲಿ ನಟ ಮೈಮ್ ರಾಮ್ದಾಸ್, ಸಂಗೀತ ಸಂಯೋಜಕ ಗಣೇಶ್ ಕೊಡಕ್ಕಲ್, ವಿ4 ನ್ಯೂಸ್ನ ಪ್ರಾದೇಶಿಕ ಸುದ್ದಿ ಸಂಪಾದಕರಾದ ಪುಷ್ಪರಾಜ್ ಶೆಟ್ಟಿ, ಮಾರ್ಕೆಟಿಂಗ್ ಮ್ಯಾನೇಜರ್ ಪ್ರೀತೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ವಿ4 ನ್ಯೂಸ್ನ ಆಡಳಿತ ನಿರ್ದೇಶಕರಾದ ಲಕ್ಷ್ಮಣ್ ಕುಂದರ್ ಧನ್ಯವಾದ ಸಮರ್ಪಿಸಿದರು.ನಂತರ ನಟ ಮೈಮ್ ರಾಮ್ದಾಸ್ ಅವರು ನಟನೆಯ ಬಗ್ಗೆ ಹಾಗೂ ಮ್ಯೂಸಿಕ್ ಆರ್ಟಿಸ್ಟ್ ಗಣೇಶ್ ಕೊಡಕ್ಕಲ್ ಸಂಗೀತ ಸಂಯೋಜನೆಯ ಬಗ್ಗೆ ತರಬೇತಿ ನೀಡಿದರು. ವಿ4 ನ್ಯೂಸ್ನ ಆಡಳಿತ ನಿರ್ದೇಶಕರಾದ ಲಕ್ಷ್ಮಣ್ ಕುಂದರ್ ಅವರು ಅರೆಭಾಷೆ ಕಾಮಿಡಿ ರಿಯಾಲಿಟಿ ಶೋದ ನಿಯಮಾವಳಿಗಳನ್ನು ವಿವರಿಸಿದರು.