ಸುಳ್ಯ:V4 ನ್ಯೂಸ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಎಂಬಿ ಫೌಂಡೇಶನ್ನ ಸಹಯೋಗದಲ್ಲಿ ಸುಳ್ಯ ಲಯನ್ಸ್ ಕ್ಲಬ್ನಲ್ಲಿ ನಡೆದ ‘ಅರೆಭಾಷೆ ಕಾಮಿಡಿ’ ರಿಯಾಲಿಟಿ ಶೋ ಆಡಿಷನ್ನಲ್ಲಿ 6 ತಂಡಗಳು ಮತ್ತು ಭಾಗವಹಿಸಿದ ಇತರ ತಂಡಗಳ ನಾಲ್ಕು ಮಂದಿ ವೈಯಕ್ತಿಕ ನೆಲೆಯಲ್ಲಿ ಆಯ್ಕೆಯಾಗಿದ್ದಾರೆ. ಒಟ್ಟು 10 ತಂಡಗಳು ಆಡಿಷನ್ನಲ್ಲಿ ಭಾಗವಹಿಸಿದ್ದವು. ಇದರಲ್ಲಿ
ತಂಡ ವಿಭಾಗದಲ್ಲಿ ವಿಕಾಸ್ ನೇತೃತ್ವದ ಕೆಎಸ್ಎಸ್ ಕಾಲೇಜು ಸುಬ್ರಹ್ಮಣ್ಯ ‘ಎ’ ತಂಡ, ಕೆ.ಟಿ.ಭಾಗೇಶ್ ನೇತೃತ್ವದ ನಗೆ ಸಣಪ್ಪ ಕಲಾವಿದರು ಕೊಯಿಕುಳಿ, ಗಣೇಶ್ ಮಾವಂಜಿ ಮತ್ತು ತಂಡ, ಭವಾನಿಶಂಕರ ಅಡ್ತಲೆ ನೇತೃತ್ವದ ಸುಳ್ಯ ಬಾಯ್ಸ್ ತಂಡ, ಜಯಪ್ರಕಾಶ್ ಪೆರುಮುಂಡ ನೇತೃತ್ವದ ಆದರ್ಶ ಕಲ್ಲಪಳ್ಳಿ, ಕಾವ್ಯ ವೇಣುಗೋಪಾಲ್ ನೇತೃತ್ವದ ಬಂದಡ್ಕ ತಂಡ ಆಯ್ಕೆಯಾಗಿದೆ.ವೈಯಕ್ತಿಕ ವಿಭಾಗದಲ್ಲಿ ಡಾ. ಎನ್.ಎ. ಜ್ಞಾನೇಶ್, ಚಂದ್ರಾವತಿ ಬಡ್ಡಡ್ಕ, ಲೋಕೇಶ್ ಪಿರನಮನೆ
ಮತ್ತು ಕುಸುಮಾಕರ ಅಂಬೆಕಲ್ಲು ಆಯ್ಕೆಯಾಗಿದ್ದಾರೆ.
ಈ ತಂಡಗಳು ಮತ್ತು ಕಲಾವಿದರು ರಿಯಾಲಿಟಿ ಶೋದ ಮುಂದಿನ ಹಂತದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ಆಯ್ಕೆಯಾದ ತಂಡಗಳಿಗೆ ಮತ್ತು ಕಲಾವಿದರಿಗೆ ತರಬೇತಿ ನೀಡಿ ರಿಯಾಲಿಟಿ ಶೋದಲ್ಲಿ ಪ್ರದರ್ಶನ ನೀಡಲು ಅವಕಾಶ ನೀಡಲಾಗುವುದು ಎಂದು ಅರೆಭಾಷೆ ಕಾಮಿಡಿ ರಿಯಾಲಿಟಿ ಶೋದ ಸಂಘಟಕರಾದ ವಿ4 ನ್ಯೂಸ್ ಚಾನೆಲ್ನ ಪ್ರಕಟಣೆ ತಿಳಿಸಿದೆ.