ಸುಳ್ಯ:V4 ನ್ಯೂಸ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಎಂಬಿ ಫೌಂಡೇಶನ್ನ ಸಹಯೋಗದಲ್ಲಿ ‘ಅರೆಭಾಷೆ ಕಾಮಿಡಿ’ ರಿಯಾಲಿಟಿ ಶೋ ನಡೆಯಲಿದೆ. ರಿಯಾಲಿಟಿ ಶೋಗೆ ತಂಡಗಳ ಆಯ್ಕೆಗೆ ಫೆ.16ರಂದು ಸುಳ್ಯದ ಲಯನ್ಸ್ ಸಭಾಭವನದಲ್ಲಿ ಆಡಿಷನ್ ನಡೆಯಲಿದೆ. ಪ್ರತಿಭಾವಂತ ಕಲಾವಿದರು ಹಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.ಕಾಮಿಡಿ ಆಡಿಷನ್ ವೀಕ್ಷಣೆ ಮಾಡಲು ಸಾರ್ವಜನಿಕರಿಗೂ ಅವಕಾಶ ಇದೆ ಎಂದು ಸಂಘಟಕರು ತಿಳಿಸಿದ್ದಾರೆ. ಈಗಾಗಲೇ
ಸಿಪಿಎಲ್- ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್-4 ತುಳು ಕಾಮಿಡಿ ರಿಯಾಲಿಟಿ ಶೋ ಯಶಸ್ವಿಯಾಗಿ ನಡೆದು ಜನಮೆಚ್ಚುಗೆಯನ್ನು ಪಡೆದಿದೆ.
ಇದೇ ಮಾದರಿಯಲ್ಲಿ ಅರೆಭಾಷೆ ಕಾಮಿಡಿ(ಹಾಸ್ಯ) ರಿಯಾಲಿಟಿ ಶೋವನ್ನು ನಡೆಸಲು ನಿರ್ಧರಿಸಲಾಗಿದೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ನಟನೆಯ ಸಾಮರ್ಥ್ಯಗಳನ್ನು ಅರೆಭಾಷೆ ಕಲಾವಿದರಿಗೆ ಪರಿಚಯ ಮಾಡುವುದು. ಜೊತೆಗೆ ಅರೆಭಾಷೆಯನ್ನು ಅಕಾಡೆಮಿಯ ಮೂಲಕ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಮತ್ತು ಶಾಲಾ, ಕಾಲೇಜುಗಳಲ್ಲಿ ರಂಗಭೂಮಿ ಚಟುವಟಿಕೆಯ ಮೂಲಕ ಪರಿಚಯಿಸುವುದು ಉದ್ದೇಶ. ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಆಯ್ದ 5 ಅರೆಭಾಷೆ ಕಾಮಿಡಿಯ ತಂಡವನ್ನು ಆಯ್ಕೆ ಮಾಡಿ ಒಂದು ಪರಿಸರದಲ್ಲಿ ಒಟ್ಟು 25 ಕಲಾವಿದರನ್ನು ಆಯ್ಕೆಮಾಡಿ ವೇದಿಕೆಯಲ್ಲಿ ನಟಿಸಲು ಗರಿಷ್ಠ 5 ಮಂದಿ ಕಲಾವಿದರು ಹಾಗೂ ಸಂಗೀತ, ರಂಗಪರಿಕರ, ರಂಗಸಜ್ಜಿಕೆ, ಹಿಮ್ಮೇಳಗಳಿಗೆ ಉಳಿದ ಅರೆಭಾಷಿಗರನ್ನು ತರಬೇತಿಗೊಳಿಸುವುದು. ಹಿರಿಯ
ಕಲಾವಿದರುಗಳು ಆಯ್ಕೆಗಾರರಿಗೆ ತರಬೇತಿ ನೀಡುತ್ತಾರೆ. ಆಯ್ದ ಆಯ್ಕೆಗಾರರಿಗೆ ಅವರು ತೆರಳಿ ನಿರ್ದೇಶನ ನೀಡಲಿದ್ದಾರೆ. ಆಯ್ಕೆಗಾರರಿಗೆ ಉಚಿತ ಸಮಯವನ್ನು ಆಯ್ಕೆಮಾಡಿ ಸರಿಸುಮಾರು 15 ದಿನಗಳ ಕಾಲ ಒಂದು ಪರಿಪಕ್ವ ಪ್ರದರ್ಶನಕ್ಕೆ ಸಿದ್ಧತೆ ನಡೆಯಲಿದೆ. ತರಬೇತುಗೊಂಡ ತಂಡಗಳು ನಿಗದಿ ಪಡಿಸಿದ ದಿನಾಂಕದಂದು ತಮ್ಮ ಅರೆಭಾಷೆ ಕಾಮಿಡಿ(ಹಾಸ್ಯ) ಎಬಿಸಿ ಸಾರ್ವಜನಿಕವಾಗಿ ಪ್ರದರ್ಶಿಸುವರು. ಎಬಿಸಿ ಅರೆಭಾಷೆ ಕಾಮಿಡಿ (ಹಾಸ್ಯ) ಚಾನೆಲ್ನಲ್ಲಿ ನಂತರ ಪ್ರಸಾರಗೊಳ್ಳುವುದು. ಅರೆಭಾಷೆ ಕಾಮಿಡಿ(ಹಾಸ್ಯ) ತರಬೇತಿ ಕಾರ್ಯಾಗಾರ ಮತ್ತು ಭಾಷೆ ಕಲಿಕೆಗೆ ಇನ್ನಷ್ಟು ಪೂರಕ ವಾತಾವರಣ ಸೃಷ್ಟಿಸಬಲ್ಲುದು.
ಅರೆಭಾಷೆ ಕಾಮಿಡಿ (ಹಾಸ್ಯ)ಚಟುವಟಿಕೆಗೆ ಅವಕಾಶವನ್ನು ಒದಗಿಸುವ ಈ ಕಾರ್ಯಾಗಾರ ಮುಂದಿನ ದಿನಗಳಲ್ಲಿ ಅರೆಭಾಷೆ ಕಾಮಿಡಿ(ಹಾಸ್ಯ) ಕಲಾವಿದರು ಎಲ್ಲಾ ರಂಗಗಳಲ್ಲಿಯೂ ರಂಗಭೂಮಿ ಚಟುವಟಿಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗಲಿದೆ.ಅರೆಭಾಷೆ ಕಾಮಿಡಿ(ಹಾಸ್ಯ), ಎಬಿಸಿಗೆ ಸ್ಕ್ರಿಪ್ಟ್ ರೈಟರ್ ಆಗಿ ಸಾಹಿತಿ, ನಾಟಕ ರಚನೆಕಾರ, ಸಂಭಾಷಣೆಗಾರ, ಚಿತ್ರಕಥೆ, ಬರಹಗಾರ, ನಟ, ಹಾಗೂ ಕಾಂತಾರ ಸಿನಿಮಾ ಖ್ಯಾತಿಯ ಮತ್ತು ವಕೀಲರಾಗಿಯೂ ಸೇವೆ ಸಲ್ಲಿಸುತ್ತಿರುವ ಶಶಿರಾಜ್ ಕಾವೂರು ಅವರು ತರಬೇತಿ ನೀಡಲಿದ್ದಾರೆ. ನಟ, ಸಂಗೀತಗಾರ, ಚಲನಚಿತ್ರ ನಟ ಕಾಂತಾರ ಸಿನಿಮಾ ಖ್ಯಾತಿಯ ಮೈಮ್ ರಾಮ್ ದಾಸ್ ಮತ್ತು ಮಿಮಿಕ್ರಿ ಆರ್ಟಿಸ್ಟ್, ಚಲನಚಿತ್ರ ನಟ ವಿಸ್ಮಯ್ ವಿನಾಯಕ್ ಅವರು ತರಬೇತಿ ನೀಡಲಿದ್ದಾರೆ ಎಂದು ಸಂಘಟಕರು ತಿಳಿಸಿದರು.