ಸುಳ್ಯ: ಬ್ರಿಟೀಷರ ಖಜಾನೆಯಾಗಿದ್ದ ಪ್ರದೇಶ, ಅಮರ ಸುಳ್ಯ ದಂಗೆಯ ಸಂದರ್ಭದಲ್ಲಿ ಹೋರಾಟಗಾರರು ವಶಪಡಿಸಿಕೊಂಡ ಐತಿಹಾಸಿಕ ಸ್ಥಳ ಬೆಳ್ಳಾರೆಯ ಬಂಗ್ಲೆಗುಡ್ಡೆಗೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಜು.13ರಂದು ಭೇಟಿ ನೀಡಿ ವೀಕ್ಷಿಸಿ ಪರಿಶೀಲನೆ ನಡೆಸಿದರು. ಚಾರಿತ್ರಿಕ ಹಿನ್ನಲೆಯುಳ್ಳ ಈ ಸ್ಥಳಕ್ಕೆ
0.93 ಎಕ್ರೆ ಸ್ಥಳವಿದ್ದು ಎರಡು ಚಾರಿತ್ರಿಕ ಕಟ್ಟಡಗಳನ್ನು ಹೊಂದಿರುತ್ತದೆ.ಈ ಸ್ಥಳಕ್ಕೆ ಆವರಣವಿಲ್ಲದೆ ಪೂರ್ತಿ ಪೊದೆಗಳಿಂದ ಕೂಡಿದ್ದು ಸ್ವಚ್ಛತೆ ದೂರವಾಗಿದೆ ಕಾಡು, ಪೊದೆಗಳನ್ನು ಸ್ವಚ್ಛ ಮಾಡಿ ಸಂರಕ್ಷಣೆ ಮಾಡಲು ಕ್ರಮ ಕೈಗೊಳ್ಳಲು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಇದರಲ್ಲಿರುವ ಒಂದು ಕಟ್ಟಡವನ್ನು ದುರಸ್ತಿಗೊಳಿಸಲು ಸರ್ಕಾರದಿಂದ ರೂ.10 ಲಕ್ಷ ಅನುದಾನವು ಬಿಡುಗಡೆಗೊಂಡಿರುತ್ತದೆ. ಈ ಹಣದಿಂದ ಪ್ರಾರಂಭಗೊಂಡ ದುರಸ್ತಿ ಕಾರ್ಯಗಳು ಸ್ಥಗಿತಗೊಂಡಿದದ್ದು ಯಾಕೆ ಎಂದು ಸಂಬಂಧಪಟ್ಟ ಇಂಜಿನಿಯರ್ಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದ

ಅವರು ಕಾಮಗಾರಿಯನ್ನು ಶೀಘ್ರ ಪೂರ್ತಿಗೊಳಿಸಲು ಸೂಚಿಸಿದರು. ಇಲ್ಲಿಯ ಚರಿತ್ರೆಯನ್ನು ಉಳಿಸುವ ಮತ್ತು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಸದಾನಂದ ಮಾವಜಿ ತಿಳಿಸಿದರು.
ಈ ಸಂದರ್ಭದಲ್ಲಿ ‘ಅಮರ ಸುಳ್ಯ ಸಮರ ಸಮಿತಿಯ ತಾಲೂಕು ಅಧ್ಯಕ್ಷರಾದ ಚಂದ್ರ ಕೋಲ್ಚಾರ್ ಜೊತೆಯಲ್ಲಿದ್ದು ಮಾಹಿತಿ ನೀಡಿದರು. ಮುಂಬರುವ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಇಲ್ಲಿ ಧ್ವಜಾರೋಹಣ ನಡೆಸಬೇಕು, ಈ ಹಿನ್ನಲೆಯಲ್ಲಿ
ಸ್ಥಳೀಯ ಜನಪ್ರತಿನಿಧಿಗಳ ಸಂಘ ಸಂಸ್ಥೆಗಳ, ಮತ್ತು ಈ ಭಾಗದ ಪ್ರಮುಖರ ಸಭೆ ಕರೆದು ಚರ್ಚಿಸಲಾಗುವ ನಿರ್ಧಾರ ಕೈಗೊಳ್ಳಲಾಗುವುದು.ಈ ಚಾರಿತ್ರಿಕ ತಾಣವನ್ನು ಉಳಿಸುವ ಮತ್ತು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗುವುದು ಎಂದು ಅಮರ ಸುಳ್ಯ ಸಮರ ಸಮಿತಿ ತಾಲೂಕು ಅಧ್ಯಕ್ಷ ಚಂದ್ರಾ ಕೋಲ್ಚಾರ್ ತಿಳಿಸಿದರು.
ಈ ಸಂಧರ್ಭದಲ್ಲಿ ಪ್ರಮುಖರಾದ ಕೂಸಪ್ಪ ಗೌಡ ಮುಗುಪ್ಪು, ಮಾಧವ ತಡಗಜೆ, ರವೀಂದ್ರ ಮರಕ್ಕಡ, ಆನಂದ ಬೆಳ್ಳಾರೆ ,ಜಯರಾಮ ಉಮಿಕ್ಕಳ, ವಕೀಲರಾದ ಮಹಾಬಲ ಗೌಡ, ಮೋನಪ್ಪ ತಂಬ್ಬಿನಮಕ್ಕಿ ,ತಿಮ್ಮಪ್ಪ ಗೌಡ ಕಾಯರ ,ಪ್ರೇಮಚಂದ್ರ ಬೆಳ್ಳಾರೆ ಮತ್ತಿತರರು ಉಪಸ್ಥಿತರಿದ್ದರು.





