ದೆಹಲಿ: ಕೇಂದ್ರ ಸರ್ಕಾರ ಅಡಿಕೆ ಆಮದು ಸುಂಕ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಹೊರ ದೇಶದಿಂದ ಕಡಿಮೆ ಬೆಲೆಗೆ ಅಡಿಕೆ ಆಮದಾಗುತ್ತಿರುವುದರಿಂದ ದೇಶದ ಅಡಿಕೆ ಬೆಲೆ ಕುಸಿತವಾಗಲು ಕಾರಣವಾಗುತಿದೆ. ಇದೀಗ ಕೇಂದ್ರ ಸರ್ಕಾರವು ಆಮದಾಗುವ ಅಡಿಕೆ ಬೆಳೆಯ ಆಮದು ದರವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ.ಅಡಿಕೆಯ ಕನಿಷ್ಠ ಆಮದು ಸುಂಕವನ್ನು ಪ್ರತಿ ಕೆಜಿಗೆ 251 ರೂ ಇದ್ದದು,100 ರೂಪಾಯಿ ಹೆಚ್ಚಿಸಿ 351ಕ್ಕೆ ಹೆಚ್ಚಿಸಿದೆ. ಇನ್ನು ಮುಂದೆ ಯಾವುದೇ ದೇಶದಿಂದ ಅಡಿಕೆ ಆಮದು ಮಾಡಿದರೂ ಕೆಜಿಗೆ 351 ರೂಪಾಯಿಗಿಂತ ಹೆಚ್ಚಿನ ಆಮದು ಸುಂಕ ಪಾವತಿಸವೇಕಾಗುತ್ತದೆ.
ವಿದೇಶಿ ಅಡಿಕೆಗಳ ಮೇಲಿನ ಕನಿಷ್ಠ ಆಮದು ದರ 351 ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ವರದಿಯಾಗಿದೆ. ಇದರಿಂದ ದೇಶದ ಅಡಿಕೆ ದರ ಹೆಚ್ಚಳವಾಗುವ ನಿರೀಕ್ಷೆ ಇದೆ
