ದಮಾಮ್: ಅರಂತೋಡು ಜಮಾಅತ್ ಸೌದಿ ಸಮಿತಿಯ ವಾರ್ಷಿಕ ಮಹಾ ಸಭೆಯ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಗೂನಡ್ಕ ರವರ ಅಧ್ಯಕ್ಷತೆಯಲ್ಲಿ ಸೌಧಿ ಅರೇಬಿಯಾದ ದಮಾಮ್ ನಲ್ಲಿರುವ ಅಬ್ದುಲ್ ಅಝೀಝ್ ಗೂನಡ್ಕ ಅವರ ನಿವಾಸದಲ್ಲಿ ನಡೆಯಿತು. ಅಝರ್ ಅಝ್ಹರಿ ದುವಾ ನೆರೆವೇರಿಸಿದರು. ಪ್ರಧಾನ ಕಾರ್ಯದರ್ಶಿ ಇಸಾಕ್ ಅರಂತೋಡು ಸ್ವಾಗತಿಸಿ ಲೆಕ್ಕ ಪತ್ರಗಳನ್ನು ಮಂಡಿಸಿದರು. ಗೌರವಾಧ್ಯಕ್ಷ ಮೊಹಮ್ಮದ್ ಕಮಲ್ ಮಾತನಾಡಿ ನಮ್ಮ ಸಮಿತಿಯ ವತಿಯಿಂದ
ಜಮಾಅತ್ ನಲ್ಲಿರುವ ಅರ್ಹ ಬಡವರಿಗೋಸ್ಕರ ಪಂಚ ಯೋಜನೆಯನ್ನು ಸಿದ್ಧಪಡಿಸಿ ಕಾರ್ಯರೂಪಕ್ಕೆ ತರಲಾಗುವುದು ಎಂದರು.

ಅಧ್ಯಕ್ಷ ಅಬ್ದುಲ್ ಅಝೀಝ್ ಗೂನಡ್ಕ
ನೂತನ ಸಮಿತಿ: ಸಭೆಯಲ್ಲಿ ನೂತನ ಸಾಲಿಗೆ ಪಧಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಮೊಹಮ್ಮದ್ ಕಮಾಲ್ ಪಾರೆಕ್ಕಲ್, ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಗೂನಡ್ಕ , ಪ್ರಧಾನ ಕಾರ್ಯದರ್ಶಿಯಾಗಿ ಇಸಾಕ್ ಅರಂತೋಡು, ಕೋಶಾಧಿಕಾರಿಯಾಗಿ ಹಬೀಬ್ ಗುಂಡಿ, ವರ್ಕಿಂಗ್ ಕಾರ್ಯದರ್ಶಿಯಾಗಿ ಜಾವೇದ್ ಪೆಲ್ತಡ್ಕ, ನಿರ್ದೇಶಕರಾಗಿ ಸಾಲಿ ಅರಂತೋಡು, ರವೂಫ್ ಕೊಡಂಕೇರಿ ಹಾಗು ಗೌರವ ಸಲಹೆಗಾರರಾಗಿ ಅಝರ್ ಅಝ್ ಹರಿ ಉಸ್ತಾದ್ ಇವರುಗಳು ಪುನರಾಯ್ಕೆಗೊಂಡರು.

ಪ್ರಧಾನ ಕಾರ್ಯದರ್ಶಿ ಇಸಾಕ್ ಅರಂತೋಡು,
ಸಮೀತಿಯ ವರ್ಕಿಂಗ್ ಸೆಕ್ರೆಟರಿ ಜಾವೆದ್ ಪೆಲ್ತಡ್ಕ , ಖಜಾಂಜಿ ಹಬೀಬ್ ಗುಂಡಿ, ನಿರ್ದೇಶಕ ರಾದ, ಸಾಲಿ ಆರಂತೋಡು ಕಾರ್ಯಕ್ರಮದಲ್ಲಿ ಭಾಗವಸಿ ಸಲಹೆ ಸೂಚನೆ ಗಳನ್ಶು ನೀಡಿದರು.
ಸೌದಿ ಕಮೀಟಿಯ ಅಧ್ಯಕ್ಷರಾದ ಅಝೀಝ್ ಗೂನಡ್ಕ ಮಾತನಾಡಿ ಸದ್ರಿ ಸಂಸ್ಥೆ ಕಳೆದ 12 ವರ್ಷದಲ್ಲಿ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾತ್ರ ಸಂಸ್ಥೆಯ ಸಹಕಾರದಿಂದ ಕಾರ್ಯರೂಪಕ್ಕೆ ತರುವಲ್ಲಿ ಯಶಸ್ಸನ್ನು ಕಂಡಿದೆ. ಜಮಾಯತಿನಿಂದ ಕಳಿಹಿಸಿ ಕೊಡುವ ಎಲ್ಲಾ ಅರ್ಜಿಗಳನ್ನುಅತ್ಯಂತ ಪ್ರೀತಿಯಿಂದ ಸ್ವೀಗರಿಸಿ ನಮ್ಮಿಂದಾಗುವ ಸಹಕಾರವನ್ನು ನೀಡುತ್ತ ಬಂದಿದ್ದೇವೆ ಎಂದರು.ಸೌದಿ ಕಮಿಟಿಯ ಪ್ರಮುಖ ಯೋಜನೆಗಳಲ್ಲೊಂದ್ದಾದ ವಿಧವಾ ವೇತನ ಸ್ಕೀಮ್ ಎರಡು ವರ್ಷಗಳ ಹಿಂದೆ ಆರಂಭಿಸಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ಕಾರ್ಯಕ್ರಮದಲ್ಲಿ ಇತ್ತೀಚಿಗೆ ಊರಿಂದ ಉದ್ಯೋಗ ನಿಮಿತ್ತ ತಲುಪಿದ ರವೂಫ್ ಸಣ್ಣಮನೆಯವರನ್ನು ಸ್ವಾಗತಿಸಿ ಸಮಿತಿಯ ನಿರ್ದೇಶಕರಾಗಿ ನೇಮಿಸಲಾಯಿತು.
ಪಂಚ ಯೋಜನೆಗಳು:
5 ಪ್ರಧಾನ ಯೋಜನೇಗಳನ್ನು ಕೂಡಲೇ ಕಾರ್ಯರೂಪಕ್ಕೆ ತರಲು ಸಭೆಯಲ್ಲಿ ತೀರ್ಮಾನಿಸಲಾಯಿತು.ಜಮಾಯತ್ ಕಮೀಟಿ ಸಿಫಾರಸ್ಸು ಮಾಡುವ ಊರಿನ ಎರಡು ಬಡ ರೋಗಿಯ ಮಾಸಿಕ ಔಷಧಿ ಖರ್ಚುನ್ನು ಬರಿಸುವುದು. ಒಂದು ಬಡ ಅರ್ಹ ರೋಗಿಗೆ ವೀಲ್ ಚೇರ್ ನೀಡುವುದು. ಒಂದು ಬಡ ಕುಟುಂಬಕ್ಕೆ ಶೌಚಾಲಯ ನಿರ್ಮಿಸಲು ಧನ ಸಹಾಯ ಮಾಡುವುಹುದು. ಈಗಾಗಲೇ ಕೊಡುತ್ತಿರುವ ವಿಧವಾ ವೇತನವನ್ನು ಮುಂದಿನ ಅವದಿವರೆಗೆ ವಿಸ್ತರಿಸುವುದು.ರಂಝಾನ್ ತಿಂಗಳಿನಲ್ಲಿ ಹತ್ತು ಅರ್ಹ ಬಡ ಕುಟ್ಟುಬಕ್ಕೆ ತಲಾ ನೀಡುಹುವುದು ಎಂದು ಅಧ್ಯಕ್ಷರಾದ ಅಝೀಝ್ ಗೂನಡ್ಕ ತಿಳಿಸಿದ್ದಾರೆ.





