
ಅರಂತೋಡು: ಅರಂತೋಡು ಸಂಪಾಜೆ, ಉಬರಡ್ಕ, ಅಲೆಟ್ಟಿ, ಮರ್ಕಂಜ 5 ಗ್ರಾಮಗಳ ಗ್ರಾಮೀಣ ಕ್ರೀಡಾಕೂಟ ಆರಂತೋಡು ಹೈಸ್ಕೂಲ್ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮವನ್ನು 26 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ಕೆ.ಆರ್ ಗಂಗಾಧರ ದೀಪ ಬೆಳಗಿಸಿ ಉದ್ಘಾಟಿಸಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಎನ್.ಭವಾನಿಶಂಕರ ಪ್ರಸ್ತಾವಿಕವಾಗಿ ಮಾತನಾಡಿದರು. ಆರಂತೋಡು ಪಂಚಾಯತ್ ಅಧ್ಯಕ್ಷೆ ಹರಿಣಿ ದೇರಾಜೆ
ಅಧ್ಯಕ್ಷತೆ ವಹಿಸಿದ್ದರು ಕಾರ್ಯಕ್ರಮದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ, ಸಜ್ಜನ ಪ್ರತಿಷ್ಠಾನಾದ ಅಧ್ಯಕ್ಷ ಉಮ್ಮರ್ ಬೀಜದಕಟ್ಟೆ, ಮರ್ಕಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಪವಿತ್ರಾ ಗುಂಡಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಸೂಫಿ ಪೆರಾಜೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ್, ಯುವಜನ ಮತ್ತು ಕ್ರೀಡಾ ಇಲಾಖೆಯ ದೇವರಾಜ್ ಮತ್ಲಾಜೆ, ನಿವೃತ ದೈಹಿಕ ಶಿಕ್ಷಕರಾದ ಎ.ಸಿ. ವಸಂತ, ಆರಂತೋಡು ನೆಹರೂ ಸ್ಮಾರಕ ಶಾಲಾ ಪ್ರಾಂಶುಪಾಲ ರಮೇಶ್, ಆರಂತೋಡು ಗ್ರಾಮ ಪಂಚಾಯತ್ ಸದಸ್ಯರಾದ ಶಿವಾನಂದ ಕುಕ್ಕುಂಬಳ, ರವಿಪೂಜಾರಿ, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಪಿ. ಕೆ. ಅಬೂಸಾಲಿ. ಗೂನಡ್ಕ, ಎಸ್. ಕೆ. ಹನೀಫ್ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಿಬ್ಬಂದಿ ವರ್ಗ, ತೀರ್ಪುಗಾರರು.5 ಪಂಚಾಯತ್ ವ್ಯಾಪ್ತಿಯ ಸದಸ್ಯರು, ಕ್ರೀಡಾಪಟುಗಳು ಹಾಜರಿದ್ದರು. ಆರಂತೋಡು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.