ಸುಳ್ಯ: ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಇಂದು ನಡೆಯುತ್ತಿದ್ದು ಅಧ್ಯಕ್ಷರ ಆಯ್ಕೆ ಕುತೂಹಲ ಮೂಡಿಸಿದೆ. ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಸದಸ್ಯರಾದ ಶಿವಾನಂದ ಕುಕ್ಕುಂಬಳ ಹಾಗೂ ಕೇಶವ ಅಡ್ತಲೆ ನಾಮಪತ್ರ ಸಲ್ಲಿಸಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿದ್ದು ಬಿಜೆಪಿ ಬೆಂಬಲಿತರಿಗೆ ಬಹುಮತ ಇರುವ ಅರಂತೋಡಿನಲ್ಲಿ
ಶಿವಾನಂದ ಕುಕ್ಕುಂಬಳ
ಕೇಶವ ಅಡ್ತಲೆ
ಪಕ್ಷದ ಕಡೆಯಿಂದ ಅಧ್ಯಕ್ಷತೆ ಅಭ್ಯರ್ಥಿ ಇನ್ನೂ ಅಂತಿಮ ಆಗಿಲ್ಲ. ಈ ಬಗ್ಗೆ ಮಾತುಕತೆ ಮುಂದುವರಿದಿದೆ ಎಂದು ತಿಳಿದು ಬಂದಿದೆ. ಇವರಲ್ಲಿ ಒಬ್ಬರು ಹಿಂಪಡೆಯುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ಹೇಳಲಾಗುತ್ತಿದ್ದರೂ ಅಂತಿಮ ನಿರ್ಧಾರ ಪ್ರಕಟಗೊಂಡಿಲ್ಲ. ಯಾರು ಅಧ್ಯಕ್ಷ ಅಭ್ಯರ್ಥಿಯಾಗುತ್ತಾರೆ, ಸ್ಪರ್ಧೆ ನಡೆಯುತ್ತದಾ ಎಂಬ ಕುತೂಹಲ ಮೂಡಿದೆ.
ಹಿಂದುಳಿದ ವರ್ಗ ಎ ಮಹಿಳೆ ವಿಭಾಗಕ್ಕೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಭವಾನಿ ಚಿಟ್ಟನ್ನೂರು ನಾಮಪತ್ರ ಸಲ್ಲಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಶಿವಾನಂದ ಕುಕ್ಕುಂಬಳ ಅವರ ನಾಮಪತ್ರಕ್ಕೆ ಸದಸ್ಯ ಗಂಗಾಧರ ಬನ ಸೂಚಿಸಿದರು.ಇನ್ನೊರ್ವ ಅಧ್ಯಕ್ಷ ಅಭ್ಯರ್ಥಿ ಕೇಶವ ಅಡ್ತಲೆ ನಾಮಪತ್ರಕ್ಕೆ ವೆಂಕಟರಮಣ ಪೆತ್ತಾಜೆ ಸೂಚಕರಾಗಿದ್ದರು.
ಉಪಾಧ್ಯಕ್ಷತೆಗೆ ಭವಾನಿ ನಾಮಪತ್ರಕ್ಕೆ ಮಾಲಿನಿ ಉಳುವಾರು ಸೂಚಕರಾಗಿದ್ದರು. ಶಿಕ್ಷಣ ಇಲಾಖೆಯ ಸೂಫಿ ಪೆರಾಜೆ ಚುನಾವಣಾಧಿಕಾರಿಯಾಗಿದ್ದಾರೆ ಪಿಡಿಓ ಜಯಪ್ರಕಾಶ್ ಸಹಾಯಕ ಚುನಾವಣಾಧಿಕಾರಿಯಾಗಿದ್ದಾರೆ