ಅರಂತೋಡು: ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಯವರು ಬಹು ಬೇಡಿಕೆಯ ಅರಂತೋಡು ಏಲಿಮಲೆ ರಸ್ತೆಯನ್ನು ವೀಕ್ಷಿಸಿದರು. ಆರಂತೋಡಿನಿಂದ ಮರ್ಕಂಜದ ಸನಿಹವರೆಗೆ ಸುಮಾರು 8ಕಿ. ಮೀ ರಸ್ತೆ ವೀಕ್ಷಿಸಿದ ಸಚಿವರು ಶೀಘ್ರದಲ್ಲಿ ರಸ್ತೆಯನ್ನು ಸಂಪೂರ್ಣ ಅಗಲೀಕರಣಗೊಳಿಸಲು ಅನುದಾನ ನೀಡುವುದಾಗಿ ಭರವಸೆ ನೀಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್,ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಇಂಜಿನಿಯರ್ಗಳು ಮತ್ತಿತರರು ಉಪಸ್ಥಿತರಿದ್ದರು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post