ಸುಳ್ಯ:ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನಡೆಯುವ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಮಾ.15ರಿಂದ ಆರಂಭಗೊಂಡಿದೆ. ಶನಿವಾರ ಮತ್ತು ಭಾನುವಾರ ವಿವಿಧ ದೈವಗಳು ಭಕ್ತರ ಹರಸಿದವು.ಶನಿವಾರ ರಾತ್ರಿ ರಿಂದ ಶ್ರೀ ವಿಷ್ಣುಮೂರ್ತಿ ಸಪರಿವಾರ ದೈವಗಳಿಗೆ ಕೂಡುವುದು. ರಾತ್ರಿ ಶ್ರೀ ಕೊರ್ತಿಯಮ್ಮನ ಕೋಲಗಳು,ಶ್ರೀ ಪೊಟ್ಟನ್ ದೈವದ ಕೋಲ ನಡೆಯಿತು. ಮಾ.16ರಂದು
ಆದಿತ್ಯವಾರ ಶ್ರೀ ವಿಷ್ಣುಮೂರ್ತಿ ದೈವ,ಶ್ರೀ ಚಾಮುಂಡಿಯಮ್ಮ ದೈವಗಳು ಭಕ್ತರ ಹರಸಿದವು. ನೂರಾರು ಮಂದಿ ಭಕ್ತರು ಆಗಮಿಸಿ ದೈವಗಳಿಂದ ಪ್ರಸಾದ ಸ್ವೀಕರಿಸಿ, ಅನ್ನ ಪ್ರಸಾದ ಸ್ವೀಕರಿಸಿದರು. ಬಳಿಕ ಶ್ರೀ ಗುಳಿಗ ದೈವ ನಡೆಯಿತು. ಸಂಜೆ 6ರಿಂದ ಕೈವೀದ್ ನಂತರ

ಶ್ರೀ ವಯನಾಟ್ ಕುಲವನ್ ಹಾಗೂ ಸಪರಿವಾರ ದೈವಗಳಿಗೆ ಕೂಡುವುದು. ಮಾ.17ರಂದು ಸೋಮವಾರ ಅಪರಾಹ್ನ 2 ರಿಂದ ಶ್ರೀ ಕಾರ್ನವನ್ ದೈವದ ವೆಳ್ಳಾಟಂ ಅಪರಾಹ್ನ 4 ರಿಂದ ಶ್ರೀಕೋರಚ್ಚನ್ ದೈವದ ವೆಳ್ಳಾಟಂ, ಸಂಜೆ 7ರಿಂದ ಶ್ರೀಕಂಡನಾರ್ ಕೇಳನ್ ದೈವದ ವೆಳ್ಳಾಟಂ,ರಾತ್ರಿ 11ರಿಂದ ನಂತರ ಬಪ್ಪಿಡಲ್, ಶ್ರೀ ವಿಷ್ಣುಮೂರ್ತಿದೈವಕ್ಕೆ ಕೂಡುವುದು. ರಾತ್ರಿ 12 ರಿಂದ ಶ್ರೀವಯನಾಟ್ ಕುಲವನ್ ದೈವದ ವೆಳ್ಳಾಟಂ
ಮಾ.18 ಮಂಗಳವಾರ ಪೂರ್ವಾಹ್ನ 9ರಿಂದ ಶ್ರೀ ಕಾರ್ನವನ್ ದೈವ 11ರಿಂದ ಶ್ರೀ ಕೋರಚ್ಚನ್ ದೈವ, ಮಧ್ಯಾಹ್ನ 1.00 ರಿಂದ ಶ್ರೀ ಕಂಡನಾರ್ ಕೇಳನ್ ದೈವ ಸಂಜೆ ಗಂಟೆ 4ರಿಂದ ಶ್ರೀ ವಯನಾಟ್ ಕುಲವನ್ ದೈವ ಸೂಟೆ ಸಮರ್ಪಣೆ. ಸಂಜೆ 5 ರಿಂದ ಶ್ರೀ ವಿಷ್ಣುಮೂರ್ತಿ ದೈವ ರಾತ್ರಿ 1ರಿಂದ ಮರ ಪಿಳರ್ಕಲ್ ನಂತರ ಕೈವೀದ್ ನಡೆಯಲಿದೆ.