ಬೆಂಗಳೂರು: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ನಿರ್ಮಿಸಿ ಅರೆಭಾಷೆ ಅಕಾಡೆಮಿ ಸದಸ್ಯ,ರಂಗನಿರ್ದೇಶಕ ಲೋಕೇಶ್ ಊರುಬೈಲು ರಚನೆ ಮತ್ತು ನಿರ್ದೇಶನ ಮಾಡಿದ ‘ಅಪ್ಪ’ಅರೆಭಾಷೆ ನಾಟಕದ ಎರಡನೇ ಪ್ರದರ್ಶನ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಿತು. ಅರೆಭಾಷೆ ಅಕಾಡೆಮಿಯ
ಗೌರವ ಪ್ರಶಸ್ತಿ ಪ್ರದಾನ ಸಮಾರಂಭದ ಪ್ರಯುಕ್ತ ಅಪ್ಪ ನಾಟಕ ಪ್ರದರ್ಶನಗೊಂಡಿತು. ಕಿಕ್ಕಿರಿದ ಪ್ರೇಕ್ಷಕರು ನಾಟಕ ನೋಡಿ ತಲೆದೂಗಿದರು. ಪ್ರಮುಖರು ಸೇರಿದಂತೆ ನೆರೆದ ಸುಮಾರು ಒಂದು ಸಾವಿರದ ಇನ್ನೂರಕ್ಕೂ ಅಧಿಕ ಮಂದಿ ನಾಟಕ ವೀಕ್ಷಿಸಿ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಸೇರಿದಂತೆ ಪ್ರಮುಖರು ನಾಟಕ ವೀಕ್ಷಿಸಿದರು. ನಾಟಕದ ಮೊದಲ ರಂಗ ಪ್ರದರ್ಶನ ಸುಳ್ಯದ ನೆಹರೂ ಸ್ಮಾರಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದಿತ್ತು. ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಮತ್ತು ಕೊಡಗಿನ ವಿವಿಧ ಭಾಗಗಳಲ್ಲಿ ನಾಟಕ ಪ್ರದರ್ಶನ ನಡೆಯಲಿದೆ ಎಂದು ನಾಟಕದ ನಿರ್ದೇಶಕ ಲೋಕೇಶ್ ಊರುಬೈಲು ತಿಳಿಸಿದ್ದಾರೆ.












