ಸುಳ್ಯ:ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕಮಿಟಿ ‘ಬಿ’ ಸುಳ್ಯ ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆಗಳು ಒಟ್ಟು ಸೇರಿ ಗಣಪತಿ ಹವನ, ಆಯುಧ ಪೂಜೆ ಮತ್ತು ಶಾರದಾ ಪೂಜೆ ಕೆವಿಜಿ ಐಪಿಎಸ್ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.ಪ್ರಾತಃ ಕಾಲ 4 ಗಂಟೆಗೆ ಎಒಎಲ್ಇ ಸುಳ್ಯ ಕಮಿಟಿ ‘ಬಿ’ ಇದರ ಆಡಳಿಯ ಕಚೇರಿಯಲ್ಲಿ ಗಣಪತಿ ಹವನ ನಡೆಯಿತು. ಬಳಿಕ ಕೆವಿಜಿ ಹೆಚ್.ಟಿ. ಪವರ್ ಹೌಸ್ ನಲ್ಲಿ ಗಣಪತಿ ಹವಣ ನಡೆಯಿತು. ಬೆಳಿಗ್ಗೆ 8 ಗಂಟೆಯಿಂದ
ಕಮಿಟಿ ಬಿಯ ವಿದ್ಯಾಸಂಸ್ಥೆಗಳಲ್ಲಿ ಆಯುಧ ಪೂಜೆ ನಡೆಯಿತು. 11 ಗಂಟೆಯಿಂದ ಭಜನಾ ಸಂಕೀರ್ತನೆ, 12 ಗಂಟೆಯಿಂದ ಕೆವಿಜಿ ಐಪಿಎಸ್ ಸಭಾಂಗಣದಲ್ಲಿ ಪುರೋಹಿತ ನಾಗರಾಜ್ ಭಟ್ ಅವರ ನೇತೃ ಶಾರದಾ ಪೂಜೆ ಮತ್ತು ಮಹಾಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಎಒಎಲ್ಇ ಕಮಿಟಿ ಬಿ ಇದರ ಅಧ್ಯಕ್ಷ ಡಾ. ರೇಣುಕಾ ಪ್ರಸಾದ್ ಕೆ.ವಿ, ಕಾರ್ಯದರ್ಶಿ ಡಾ. ಜ್ಯೋತಿ ಆರ್. ಪ್ರಸಾದ್, ನಿರ್ದೇಶಕ ಮೌರ್ಯ ಆರ್.ಪ್ರಸಾದ್, ಕೆವಿಜಿ ಕಮಿಟಿ ಬಿ ಇದರ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಉಜ್ವಲ್ ಯು.ಜೆ, ಆಯುಧ ಪೂಜಾ ಸಮಿತಿಯ ಅಧ್ಯಕ್ಷ ಶ್ರೀಧರ್ ಎಂ.ಕೆ., ಕಾರ್ಯದರ್ಶಿ ವಸಂತ ಕಿರಿಭಾಗ, ಕೆವಿಜಿ ಪಾಲಿಟೆಕ್ನಿಕ್ ನ ಉಪ ಪ್ರಾಂಶುಪಾಲ ಅಣ್ಣಯ್ಯ. ಕೆ, ಕೆವಿಜಿ ಐಟಿಐ ಯ ಪ್ರಾಂಶುಪಾಲ ಚಿದಾನಂದ ಗೌಡ ಬಾಳಿಲ, ಐಟಿಐ ಕಾಲೇಜಿನ ಉಪ ಪ್ರಾಂಶುಪಾಲ ದಿನೇಶ್ ಮಡ್ತಿಲ, ಅಮರ ಜ್ಯೋತಿ ಪಿಯು ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋಧಾ ರಾಮಚಂದ್ರ, ಕೆವಿಜಿ ಡೆಂಟಲ್ ಕಾಲೇಜಿನ ಆಡಳಿತ ಪರಿಷತ್ ಸದಸ್ಯ ಡಾ. ಮನೋಜ್ ಕುಮಾರ್ ಅಡ್ಡಂತಡ್ಕ, ಕೆವಿಜಿ ಡೆಂಟಲ್ ಕಾಲೇಜಿನ ಆಡಳಿತಾಧಿಕಾರಿ ಮಾಧವ ಬಿ.ಟಿ., ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಅಧೀಕ್ಷಕ ಶಿವರಾಮ ಕೇರ್ಪಳ, ಕೆವಿಜಿ ಸಮುದಾಯ ಭವನಗಳ ಮೇಲ್ವಿಚಾರಕ ಭವಾನಿಶಂಕರ ಅಡ್ತಲೆ, ಎಒಎಲ್ಇ ‘ಬಿ’ ಕಮಿಟಿಯ ಕಚೇರಿ ಆಡಳಿತಾಧಿಕಾರಿ ಪ್ರಸನ್ನ ಕಲ್ಲಾಜೆ, ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಆಡಳಿತಾಧಿಕಾರಿ ನಾಗೇಶ್ ಕೊಚ್ಚಿ, ಮಾಧ್ಯಮ ಮೇಲ್ವಿಚಾರಕ ಕಮಲಾಕ್ಷ ನಂಗಾರು, ಪ್ರಮುಖರಾದ ನಿತ್ಯಾನಂದ ಮುಂಡೋಡಿ, ಎನ್.ಎ.ರಾಮಚಂದ್ರ, ಎಸ್.ಎನ್.ಮನ್ಮಥ, ಸಂತೋಷ್ ಜಾಕೆ, ಪಿ.ಎಸ್.ಗಂಗಾಧರ್, ದಯಾನಂದ ಕುರುಂಜಿ, ದೀಪಕ್ ಕುತ್ತಮೊಟ್ಟೆ, ಮೊದಲಾದವರು ಇದ್ದರು.