ಸುಳ್ಯ: ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿ ಬೆಂಗಳೂರಿನ ವಿಶ್ವ ಕನ್ನಡ ಸಂಸ್ಥೆಯವರು ಕೊಡ ಮಾಡುವ ಶಿವಶರಣೆ ನೀಲಾಂಬಿಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಇವರ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಮಾರ್ಚ್ 29ರಂದು ಬೆಂಗಳೂರಿನ
ಬಗಲಕುಂಟೆ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ನಡೆಯುವ ವಿಶ್ವ ಕನ್ನಡ ರಾಜ್ಯ ಮಟ್ಟದ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಇದೇ ದಿನ ನಡೆಯುವ ರಾಜ್ಯ ಮಟ್ಟದ ಮಹಿಳಾ ಕವಿಗೋಷ್ಠಿಗೂ ಡಾ. ಅನುರಾಧಾ ಕುರುಂಜಿಯನರು ಆಯ್ಕೆಯಾಗಿದ್ದು ಕವನ ವಾಚನ ಮಾಡಲಿದ್ದಾರೆ. ಕುರುಂಜಿ ಪದ್ಮಯ್ಯ ಗೌಡ -ಸೀತಮ್ಮ ದಂಪತಿಗಳ ಪುತ್ರಿ, ಚಂದ್ರಶೇಖರ ಬಿಳಿನೆಲೆಯವರ ಪತ್ನಿ.







