ಸುಳ್ಯ: 2023-24 ನೇ ಸಾಲಿನ ಅನುಗ್ರಹ ಯೋಜನೆ ಅಡಿಯಲ್ಲಿ ವಿಮೆಗೆ ಒಳಪಡದ ಜಾನುವಾರುಗಳು ಮರಣ ಹೊಂದಿದಲ್ಲಿ ಪಶುಪಾಲನೆ ಇಲಾಖೆಯಿಂದ ಪಾವತಿಯಾಗುವ ಪರಿಹಾರ ರೂ 10000 ಮೊತ್ತವನನ್ನು ವಿತರಣೆ ಮಾಡಲಾಯಿತು. ಶಾಸಕಿ ಭಾಗೀರಥಿ ಮುರುಳ್ಯ ಅವರು
ಫಲಾನುಭವಿಗಳಿಗೆ ಸುಳ್ಯ ತಾಲೂಕು ಪಂಚಾಯತ್ ಶಾಸಕರ ಕಛೇರಿಯಲ್ಲಿ ಪರಿಹಾರ ವಿತರಿಸಿದರು.ಸುಳ್ಯ ತಾಲೂಕಿನಲ್ಲಿ ಒಟ್ಟು 5 ಈ ರೀತಿಯ ಪ್ರಕರಣಗಳು ದಾಖಲಾಗಿವೆ ಈಗಾಗಲೇ 4 ಜನರಿಗೆ ಪರಿಹಾರ ವಿತರಣೆ ಆಗಿದೆ. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಸುಳ್ಯ ತಾಲೂಕು ಪಶು ಪಾಲನೆ ಮತ್ತು ವೈದ್ಯಕೀಯ ಇಲಾಖೆಯ ಮುಖ್ಯ ವೈದ್ಯಾಧಿಕಾರಿ ಡಾ.ನಿತಿನ್ ಪ್ರಭು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.







