ಸುಳ್ಯ: ಕೆ.ವಿ.ಜಿ. ಸಮೂಹ ಶಿಕ್ಷಣ ಸಂಸ್ಥೆಗಳು, ಸುಳ್ಯ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಸುಳ್ಯ, ನ್ಯಾಷನಲ್ ಇಂಟಿಗ್ರೇಟೆಡ್ ಅಸೋಸಿಯೇಷನ್ ಸುಳ್ಯ, ಇಂಡಿಯನ್ ಡೆಂಟಲ್ ಅಸೋಸಿಯೇಶನ್ ಸುಳ್ಯ, ರೋಟರಿ ಕ್ಲಬ್ ಸುಳ್ಯ, ಲಯನ್ಸ್ ಕ್ಲಬ್ ಸುಳ್ಯ,ವಕೀಲರ ಸಂಘ ಸುಳ್ಯ, ಜೇಸಿಐ ಸುಳ್ಯ ಸಿಟಿ, ಯುವಜನ ಸಂಯುಕ್ತ ಮಂಡಳಿ ಸುಳ್ಯ, ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಸೇವಾ ಭಾರತಿ ಹೆಲ್ಫ್ ಲೈನ್ ಟ್ರಸ್ಟ್ ಸುಳ್ಯ, ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಸುಳ್ಯ ಇವುಗಳ
ಆಶ್ರಯದಲ್ಲಿ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದ ಅಂಗವಾಗಿ ಪರಿವರ್ತನಾ ಸೇವಾ ಟ್ರಸ್ಟ್ ಬೆಂಗಳೂರು ಇದರ ನೇತೃತ್ವದಲ್ಲಿ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ರಥಯಾತ್ರೆ ಹಾಗೂ ಜನಜಾಗೃತಿ ಸಬೇಯು ಶನಿವಾರ ಸುಳ್ಯದಲ್ಲಿ ನಡೆಯಿತು.ಸುಳ್ಯ ಕೆ.ವಿ.ಜಿ. ವೃತ್ತದ ಬಳಿಯಿಂದ ಜಾಗೃತಿ ಜಾಥಾ ಆರಂಭಗೊಂಡು ನೆಹರೂ ಮೆಮೋರಿಯಲ್ ಕಾಲೇಜು ವಠಾರದಲ್ಲಿ ಕಾರ್ಯಕ್ರಮ ನಡೆಯಿತು. ಡ್ರಗ್ಸ್ ಮುಕ್ತ ಭಾರತ, ಡ್ರಗ್ಸ್ ಮುಕ್ತ ಕರ್ನಾಟಕ ಕುರಿತ ಪ್ರತಿಜ್ಞೆ ಸಮಾರಂಭದಲ್ಲಿ ಕೈಗೊಳ್ಳಲಾಯಿತು.
ಜನಜಾಗೃತಿ ಜಾಥಾದಲ್ಲಿ ಭಾಗವಹಿಸಿ ಸುಳ್ಯ ತಹಶೀಲ್ದಾರ್ ಮಂಜುಳ ಮಾತನಾಡಿ “ಡ್ರಗ್ಸ್ ಎನ್ನುವುದು ನಮ್ಮನ್ನೇ ನಾಶ ಮಾಡುತ್ತದೆ. ಆದ್ದರಿಂದ ಅದರಿಂದ ನಾವು ದೂರ ವಿರಲು ಸಂಕಲ್ಪ ಕೈಗೊಳ್ಳಬೇಕು ಜೊತೆಗೆ ಡ್ರಗ್ಸ್ ಮುಕ್ತ ಭಾರತ, ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮೆಲ್ಲರ ಸಂಕಲ್ಪ” ಎಂದು ಹೇಳಿದರು.

ಕೆ.ವಿ.ಜಿ. ಆಯುರ್ವೇದ ಕಾಲೇಜು ಪ್ರಾಂಶುಪಾಲ ಡಾ.ಡಿ.ವಿ.ಲೀಲಾಧರ್ ಡ್ರಗ್ಸ್ ನಿಂದಾಗಿ ಆಗುವ ಹಾನಿಗಳು ಮತ್ತು ಕೆಡುಕುಗಳ ಕುರಿತು ನೆರೆದವರಿಗೆ ವಿವರಿಸಿದರು. ಪರಿವರ್ತನಾ ಸೇವಾ ಟ್ರಸ್ಟ್ ಪಧಾಧಿಕಾರಿ ಸಂದೇಶ್ ಜನಜಾಗೃತಿಯ ಉದ್ದೇಶಗಳನ್ನು ತಿಳಿಸಿದರು. ಎನ್.ಐ.ಎಂ.ಎ. ಅಧ್ಯಕ್ಷ ಡಾ.ಲಕ್ಷ್ಮೀಶ್ ಕೆ.ಎಸ್. ಕಾರ್ಯಕ್ರಮ ನಿರೂಪಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಸಭಾ ವೇದಿಕೆಯಲ್ಲಿ ಪ್ರಮುಖರಾದ ಚಂದ್ರಶೇಖರ ಪೇರಾಲು , ರುಧ್ರಕುಮಾರ್ , ಸಿ ಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಾಣಾಧಿಕಾರಿ ಸುದರ್ಶನ್ ಸೂರ್ತಿಲ,ವಕೀಲ ಜಗದೀಶ್ ಡಿ.ಪಿ ,ಡಾ.ಮನೋಜ್ ಸೇರಿದಂತೆ ಸಭೆಯಲ್ಲಿ ಕೆ.ವಿ.ಜಿ. ವಿದ್ಯಾಸಂಸ್ಥೆಗಳ ಉಪನ್ಯಾಸಕರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.













