ಪನಜಿ:ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈಗೋವಾದಲ್ಲಿ ನಡೆದ ಐರನ್ಮ್ಯಾನ್ 70.3ನಲ್ಲಿ ಭಾಗಿಯಾಗಿ ಸ್ಪರ್ಧೆ ಪೂರ್ಣಗೊಳಿಸಿದ್ದಾರೆ. ಸ್ಪರ್ಧೆಯು, 1.9 ಕಿ.ಮೀ ಈಜು, 90 ಕಿ.ಮೀ ಸೈಕ್ಲಿಂಗ್, ಮತ್ತು 21.1 ಕಿ.ಮೀ ಓಟ ಒಳಗೊಂಡಿತ್ತು.ಮೊದಲ ಬಾರಿ ಸ್ಪರ್ಧೆಯಲ್ಲಿ

ಭಾಗಿಯಾಗಿದ್ದ ಅಣ್ಣಾಮಲೈ ಅವರು 8 ಗಂಟೆ 13 ನಿಮಿಷಗಳಲ್ಲಿ ಸ್ಪರ್ಧೆಯ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಅವರು ಎರಡನೇ ಬಾರಿ ಭಾಗಿಯಾಗಿ ಸ್ಪರ್ಧೆ ಪೂರ್ಣಗೊಳಿಸಿದ್ದಾರೆ.ತೇಜಸ್ವಿ ಸೂರ್ಯ ಅವರು 7 ಗಂಟೆ 49 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದಾರೆ.ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಬರೆದುಕೊಂಡಿರುವ ತೇಜಸ್ವಿ ಸೂರ್ಯ ಅವರು ಅಣ್ಣಾಮಲೈ ಜತೆಗಿನ ಫೋಟೊಗಳನ್ನೂ ಹಂಚಿಕೊಂಡಿದ್ದಾರೆ.












