ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ ಬಿಜೆಪಿಯು 9 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರು ಕೊಯಂಬತ್ತೂರಿನಿಂದ, ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿಗೆ ಮರು ಸೇರ್ಪಡೆಯಾಗಿದ್ದ
ತಮಿಳಿಸೈ ಸೌಂದರರಾಜನ್ ಅವರು ಚೆನ್ನೈ ದಕ್ಷಿಣದಿಂದ ಸ್ಪರ್ಧಿಸಲಿದ್ದಾರೆ. ನೀಲಗಿರಿಯಿಂದ ಕೇಂದ್ರ ಸಚಿವ ಎಲ್.ಮುರುಗನ್ ಸ್ಪರ್ಧಿಸಲಿದ್ದಾರೆ.ಕನ್ಯಾಕುಮಾರಿಯಿಂದ ಕೇಂದ್ರದ ಮಾಜಿ ಸಚಿವ ಪೊನ್ ರಾಧಾಕೃಷ್ಣನ್ ಅವರು ಸ್ಪರ್ಧಿಸಲಿದ್ದಾರೆ. ತೂತುಕ್ಕುಡಿಯಿಂದ ನೈನಾರ್ ನಾಗೇಂದ್ರನ್ ಸ್ಪರ್ಧಿಸಲಿದ್ದಾರೆ.
ವೆಲ್ಲೂರಿನಿಂದ ಪುದಿಯ ನೀಧಿ ಕಚ್ಚಿ (ಪಿಎನ್ಕೆ) ಮುಖ್ಯಸ್ಥ ಎಸಿ ಷಣ್ಮುಗಂ ಮತ್ತು ತಮಿಳುನಾಡಿನ ಪೆರಂಬಲೂರು ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಟಿಆರ್ ಪರಿವೇಂದರ್, ಕೃಷ್ಣಗಿರಿಯಿಂದ ಪಿ.ನರಸಿಂಹಂ, ಚೆನ್ನೈ ಸೆಂಟ್ರಲ್ನಿಂದ ವಿನೋಜ್ ಪಿ.ಸೆಲ್ವಂ ಅವರಿಗೆ ಟಿಕೆಟ್ ನೀಡಲಾಗಿದೆ









