ಕಡಬ: ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತ ಎಚ್ಚರಿಕೆಯಿಂದ ನಮ್ಮ ಮತಗಳನ್ನು ಆಸಕ್ತಿಯಿಂದ ಚಲಾಯಿಸಬೇಕು. ದೇಶದ ಅಭಿವೃದ್ದಿಯ ಹಿತದೃಷ್ಟಿಯಿಂದ ಬಿಜೆಪಿಗೆ ಮತ ನೀಡಿ ದೇಶದಲ್ಲಿ ಬಿಜೆಪಿ ಚುಕ್ಕಾಣಿಹಿಡಯುವಂತೆ ಮಾಡಬೇಕು ಜೊತೆಗೆ ದ.ಕ ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟರನ್ನು ದೇಶದಲ್ಲಿ ಗಮನ ಸಳೆಯುವ ಮಟ್ಟಕ್ಕೆ ಅತೀ ಹೆಚ್ಚಿನ ಮತಗಳಿಂದ ಗೆಲ್ಲಿಸಿಕೊಡುವ ಹೊಣೆಗಾರಿಕೆ ಎಲ್ಲಾ
ಕಾರ್ಯಕರ್ತರ ಮೇಲಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ. ಅವರು ಮಂಗಳವಾರ ದ.ಕ ಲೋಕಸಭಾ ಕೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಪರವಾಗಿ ಕಡಬದಲ್ಲಿ ನಡೆದ ರೋಡ್ ಶೋ ಬಳಿಕ ಕಾರ್ಯಕರ್ತರನ್ನು ಉದ್ದೇಶೆಸಿ ಮಾತನಾಡಿದರು. ಬಿಜೆಪಿ ಅಭಿವೃದ್ದಿಯ ದೃಷ್ಟಿಕೋನದಿಂದ ಚುನಾವಣೆ ಎದುರಿಸುತಿದೆ. ಹಾಗಾಗಿ ದೇಶದ ಮತದಾರರು ಬಿಜೆಪಿ ಪರವಾಗಿ ಇದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರು ಮತದಾನ ಮಾಡವಲ್ಲಿ ಗಮನಹರಿಸಬೇಕು. ಈ ಎಲ್ಲಾ ಮತಗಳು ಬಿಜೆಪಿ ಪರವಾಗುವಲ್ಲಿ ಬಿಜೆಪಿ ಕಾರ್ಯಕರ್ತರ ಹೊಣೆಗಾರಿಗೆಯಿದೆ ಎಂದು ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಮಾತನಾಡಿ ,ಎರಡು ಅವಧಿಯಲ್ಲಿ ನರೇಂದ್ರ ಮೋದಿ ಸರ್ಕಾರ ಮಾಡಿದ ಸಾಧನೆಯನ್ನು ಇಮ್ಮಡಿಗೊಳಿಸಲು ಮತ್ತೊಮ್ಮೆ ದೇಶದಲ್ಲಿ ಬಿಜೆಪಿ ಸರ್ಕಾರ ರಚಿಸಬೇಕಾಗಿದೆ. ಹಾಗಗಿ ನರೇಂದ್ರ ಮೋದಿಯ ಕೈ ಬಲಪಡಿಸಲು ನನಗೆ ಮತ ನೀಡಿ ಎಂದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್ ಅಂಗಾರ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ಚುನಾವಣಾ ನಿರ್ವಹಣಾ ಜಿಲ್ಲಾ ಸಂಚಾಲಕ ನಿತಿನ್ ಕುಮಾರ್ , ಮಂಡಲ ಸಂಚಾಲಕ ಹರೀಶ್ ಕಂಜಿಪಿಲಿ, ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಮುಖಂಡರಾದ ರವೀಂದ್ರ , ಕೃಷ್ಣ ಶೆಟ್ಟಿ ಕಡಬ, ರಾಕೇಶ್ ರೈ ಕೆಡೆಂಜಿ ಕಡಬ ಮೊದಲಾದವರು ಇದ್ದರು. ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಸ್ವಾಗತಿಸಿ , ವಂದಿಸಿದರು. ಗಿರೀಶ್ ನಿರೂಪಿಸಿದರು. ಕಡಬ ಎಪಿಎಂಸಿ ಪ್ರಾಂಗಣ ಸಮೀಪದ ಗಣೇಶ್ ಬಿಂಲ್ಡಿಗ್ ಬಳಿಯಿಂದ ಆರಂಭವಾದ ರೋಡ್ ಶೋ ಪೇಟೆಯಲ್ಲಿ ಸಂಚರಿಸಿ ಮುಖ್ಯ ಪೇಟೆಯಲ್ಲಿ ಸಮಾಪನಗೊಂಡಿತ್ತು.