ಸುಳ್ಯ:ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರರ ಜೀವನ ಕುರಿತು ಲೇಖಕ ಅರವಿಂದ ಚೊಕ್ಕಾಡಿಯವರು ಬರೆದಿರುವ ಪುಸ್ತಕ ‘ಕೊಳಲ ಕೈ ಹಿಡಿದು’ ಬಿಡುಗಡೆ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕವಿ ಲಕ್ಷ್ಮೀಶ ತೋಳ್ಪಾಡಿಯವರಿಗೆ ಸನ್ಮಾನ ಕಾರ್ಯಕ್ರಮ ಜ.14 ರಂದು 2.30ಕ್ಕೆ ಕೇರ್ಪಳ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆಯಲಿದೆ ಎಂದು ತರುಣ ಸಮಾಜದ ಅಧ್ಯಕ್ಷ ಎಂ.ಬಿ.ಸದಾಶಿವ ತಿಳಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಮಾತ್ನಡಿದ ಅವರು
ತರುಣ ಸಮಾಜ ಸುಳ್ಯದ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ಬಾಲಾವಲಿಕರ್ ರಾಜಾಪುರಿ ಸಾರಸ್ವತ ಸಮಾಜದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ.ಮಾಜಿ ಶಾಶಕ ವೈ.ಎಸ್.ವಿ.ದತ್ತ ಸನ್ಮಾನ ನೆರವೇರಿಸುವರು. ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಪುಸ್ತಕ ಬಿಡುಗಡೆ ಮಾಡುವರು. ಡಾ.ವೀಣಾ ತೋಳ್ಪಾಡಿಯವರ ಕುರಿತು ಅಭಿನಂದನಾ ಭಾಷಣ ಮಾಡುತ್ತಾರೆ. ಡಾ.ದೀಪಾ ಫಡ್ಕೆ ಕೃತಿ ಪರಿಚಯ ಮಾಡುವರು. ಕೊಳಲ ಕೈ ಹಿಡಿದು ಕೃತಿಯ ಲೇಖಕ ಅರವಿಂದ ಚೊಕ್ಕಾಡಿ ಪ್ರಾಸ್ತಾವಿಕ ಮಾತುಗಳನ್ನಾಡುವರು. ತರುಣ ಸಮಾಜದ ಅಧ್ಯಕ್ಷ ಎಂ.ಬಿ.ಸದಾಶಿವರು ಸಭಾಧ್ಯಕ್ಷತೆ ವಹಿಸಲಿರುವರು ಎಂದು ಅವರು ವಿವರಿಸಿದರು.
ಸುದ್ದಿಗೊಷ್ಟಿಯಲ್ಲಿ ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು , ಬಾಲಾವಲಿಕರ್ ರಾಜಾಪುರಿ ಸಾರಸ್ವತ ಸಮಾಜದ ಕೋಶಾಧಿಕಾರಿ ದೇವದಾಸ ಪ್ರಭು, ಯುವ ಘಟಕದ ಅಧ್ಯಕ್ಷ ಕೆ.ಸಂದೀಪ್ ನಾಯಕ್ ಉಪಸ್ಥಿತರಿದ್ದರು.