*ಪಿ.ಜಿ.ಎಸ್.ಎನ್.ಪ್ರಸಾದ್.
ನಿನ್ನೆ ಕರಾವಳಿ ಭಾಗದಲ್ಲಿ ಮುಂಗಾರು ಚುರುಕುಗೊಂಡು ‘ಮಳೆನಾಡಿನ ಮಳೆ ಹಾಡಿನ ದಿನ’ ವಾಗಿತ್ತು. ಗರಿಷ್ಟ ಮಳೆ ಮಂಚಿ- ಕಜೆ 163, ಕುಂಬ್ಳೆ-ಎಡನಾಡು 133, ಬಂಟ್ವಾಳ-ಕೆಲಿಂಜ 118, ಕಾಸರಗೋಡು-ಕಲ್ಲಕಟ್ಟ 117, ಕೈರಂಗಳ 114, ಸಿದ್ಧಕಟ್ಟೆ 112 ಹಾಗೂ ಇರಾ-ಉಳ್ಳಾಲ 107 ನಷ್ಟು ಭರ್ಜರಿ ಮಳೆ ಸುರಿದಿದೆ. ಪಾಣಾಜೆ 99, ಮಿತ್ತೂರು 98, ಬಂಗಾರಡ್ಕ, ಮುಂಡೂರು ತಲಾ 80, ಬೆಳ್ತಂಗಡಿ-
(ಚರ್ಚ್ ರಸ್ತೆ) 73, ಮೆಟ್ಟಿನಡ್ಕ, ಬೆಳ್ತಂಗಡಿ ತಲಾ 77, ಸುಬ್ರಹ್ಮಣ್ಯ (1), ಸರ್ವೆ ತಲಾ 72, ಕಲ್ಲಾಜೆ 70, ಬಲ್ನಾಡು 68, ಇಳಂತಿಲ ಕೈಲಾರು 64, ಹಳೆನೇರಂಕಿ, ಶಾಂತಿಗೋಡು, ಕಂಪದಕೋಡಿ, ಅಡೆಂಜ-ಉರುವಾಲು ತಲಾ 58, ಸುಬ್ರಹ್ಮಣ್ಯ (2) 52, ಬಾಳಿಲ (ಉ) 51 ಮಿ.ಮೀ.ನಷ್ಟು ಉತ್ತಮ ಮಳೆಯಾಗಿದೆ. ಸುಳ್ಯ, ಕಡಬ ತಾಲೂಕಿನ ಎಲ್ಲೆಡೆ ನಿನ್ನೆ ಮಧ್ಯಾಹ್ನದ ಬಳಿಕ ಸರಾಸರಿ 44 ಮಿ.ಮೀ.ನಷ್ಟು ಉತ್ತಮ ಮಳೆಯಾಗಿದೆ. ಬಜಗೋಳಿ 48, ಮುಂಡಾಜೆ 42, ಮಡಿಕೇರಿಯ ಎಂ ಚೆಂಬು 30 ಮಿ.ಮೀ.ಮಳೆ ದಾಖಲಾಗಿದೆ. ಅಚ್ಚರಿಯ ಸಂಗತಿ ಅಂದರೆ ಊರಿಡೀ ಉತ್ತಮ ಮಳೆ ಸುರಿದರೂ ಕಟ್ಟ-ಕೊಲ್ಲಮೊಗ್ರದಲ್ಲಿ ಮಳೆ ದಾಖಲಾದದ್ದು ಕೇವಲ 10 ಮಿ.ಮೀ.ಮಾತ್ರ ! ಇದಕ್ಕೆ ಏನನ್ನೋಣ..! ಮೋಡದ ವಾತಾವರಣದೊಂದಿಗೆ ಮಳೆಯ ವಾತಾವರಣ ಈ ದಿನವೂ ಇರುವ ಸಾಧ್ಯತೆ ಇದೆ.
ಎಲ್ಲೋ ಅಲರ್ಟ್ ಘೋಷಣೆ:
ದ.ಕ.ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಧಾರಾಕಾರ ಮಳೆಯಾಗಿತ್ತು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆಯು ಜೂ.28ರಂದು ‘ಎಲ್ಲೋ ಅಲರ್ಟ್’ ಘೋಷಿಸಿದೆ.
ಮಂಗಳವಾರ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣದೊಂದಿಗೆ ಉತ್ತಮ ಮಳೆಯಾಗಿವೆ. ಮಂಗಳೂರು ಅಲ್ಲದೆ ಗ್ರಾಮೀಣ ಭಾಗದಲ್ಲಿ ಮಳೆಯಾಗಿದೆ.