*ಪಿ.ಜಿ.ಎಸ್.ಎನ್.ಪ್ರಸಾದ್.
ಮುಂಗಾರು ಆಗಮಿಸಿ 10 ದಿನ ಕಳೆದರೂ ಮುಂಗಾರು ಇನ್ನೂ ಬಲಗೊಂಡಿಲ್ಲ. ಮಳೆಗಾಲದ ವಾತಾವರಣ ಮೂಡಿ ಕುಂಭದ್ರೋಣ ಮಳೆ ಸುರಿಸುತ್ತಿಲ್ಲ.. ಬಿಸಿಲ ತಾಪಕ್ಕೆ, ಉರಿ ಸೆಕೆಗೆ ಶಮನವಾಗುತ್ತಿಲ್ಲ. ಆದರೂ ನಿನ್ನೆ ಮಧ್ಯಾಹ್ನದ ಬಳಿಕ ಗುಡುಗು ಸಿಡಿಲಿನ ಅಬ್ಬರದೊಂದಿಗೆ ವರುಣ ಭರ್ಜರಿ ಇನ್ನಿಂಗ್ಸ್ ಆಡಿದ್ದಾನೆ. ಮಳೆಗಾಲದ ನಿರೀಕ್ಷೆ ಹುಟ್ಟಿಸಿ ಕಾಸರಗೋಡು, ದ.ಕ, ಮಡಿಕೇರಿಯ ಅನೇಕ ಕಡೆ ಭರ್ಜರಿ ಮಳೆ ಸುರಿದಿದೆ. ಮುಂಗಾರು ಸರ್ವತ್ರ ಬಲಗೊಳ್ಳಲು ಇನ್ನೂ ಕೆಲ ದಿನ ಕಾಯಬೇಕು. ಎಲ್ಲೆಡೆ ಕೃಷಿಕರು ಅಡಿಕೆ ತೋಟಗಳಿಗೆ ಔಷಧಿ ಸಿಂಪಡಿಸುವ ಕಾರ್ಯದಲ್ಲಿ ತೊಡಗಿದ್ದು ನಿನ್ನೆ ಮಧ್ಯಾಹ್ನದ ಬಳಿಕ ಔಷಧಿ ಸಿಂಪಡಣೆಗೆ
ಉಂಟಾಗಿತ್ತು. ಕಾಸರಗೋಡಿನ ಕಲ್ಲಕಟ್ಟದಲ್ಲಿ 105 ಮಿ.ಮಿ. ಕುಂಬ್ಳೆ-ಎಡನಾಡು 90, ಬೆಳ್ತಂಗಡಿ ತಾಲೂಕಿನ ಇಳಂತಿಲ-ಕೈಲಾರು 85, ಮಡಿಕೇರಿಯ ಎಂ ಚೆಂಬು 74, ಸುಳ್ಯ ತಾಲೂಕಿನ ಅಯ್ಯನಕಟ್ಟೆ 72 ಮಿ.ಮೀ ನಷ್ಟು ಗರಿಷ್ಟ ಮಳೆಯಾಗಿದೆ. ಉಳಿದಂತೆ
ಬಾಳಿಲ(ಉ) 64, ಬಾಳಿಲ (ದ) 62, ಎಡಮಂಗಲ- ದೇವರಮಜಲು 60, ಬಳ್ಪ 49, ವಾಲ್ತಾಜೆ-ಕಂದ್ರಪ್ಪಾಡಿ 42, ಬಳ್ಪ-ಪಟೋಳಿ 41, ಬೆಳ್ಳಾರೆ-ಕಾವಿನಮೂಲೆ 40, ಹಳೆನೇರಂಕಿ 39, ಕೇನ್ಯ 38, ಪಂಬೆತ್ತಾಡಿ-ನೆಕ್ರಕಜೆ 36, ಕಲ್ಮಡ್ಕ 29, ಮೆಟ್ಟಿನಡ್ಕ 26, ಕೋಡಿಂಬಳ-ತೆಕ್ಕಡ್ಕ 27, ಮುರುಳ್ಯ-ಶೇರ 26, ಚೊಕ್ಕಾಡಿ 23, ಸುಳ್ಯ ನಗರ 22, ಪೆರುವಾಜೆ-ಪೆಲತ್ತಡ್ಕ, ಕರಿಕ್ಕಳ ತಲಾ 21, ಕಡಬ 19, ಮರ್ಕಂಜ-ಮಾಫಲತೋಟ 18, ದೊಡ್ಡತೋಟ 17, ನಡುಗಲ್ಲು 13, ಸುಬ್ರಹ್ಮಣ್ಯ 11, ಕೊಲ್ಲಮೊಗ್ರ 09, ಕಲ್ಲಾಜೆ 05, ಪುತ್ತೂರು-ಸರ್ವೆ 32, ಪಾಣಾಜೆ-ಗಿಳಿಯಾಲು 15, ಬಲ್ನಾಡು 14, ಕೊಳ್ತಿಗೆ-ಎಕ್ಕಡ್ಕ 05, ಕಾರ್ಕಳ-ಬಜಗೋಳಿ 36, ಬಂಟ್ವಾಳ-ಕೆಲಿಂಜ 29, ಮಂಚಿ-ಕಜೆ 39, ಕೈರಂಗಳ 36, ಬೆಳ್ತಂಗಡಿ ನಗರ 18, ಅಡೆಂಜ-ಉರುವಾಲು 56, ಕಂಪದಕೋಡಿ 49, ಇರಾ (ಉಳ್ಳಾಲ) 38 ಮಿ.ಮೀ.ನಷ್ಟು ಮಳೆ ಇಂದು ಬೆಳಗ್ಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ದಾಖಲಾಗಿದೆ. ಇಂದು ಕೂಡಾ ಅರುಣ-ವರುಣರ ಜತೆಗೆ ಮೇಘಗಳ ಕಣ್ಣಾಮುಚ್ಚಾಲೆ ಆಟ ಇರಲಿದೆ.
ಹವಾಮಾನ ಮುನ್ಸೂಚನೆ ಏನು..?
ಮುಂದಿನ 4 ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ.ಭಾರೀ ಸಂಚಲನವನ್ನುಂಟು ಮಾಡಿದ್ದ ಬಿಪೋರ್ಜಾಯ್ ಚಂಡಮಾರುತ ಸದ್ಯ ತನ್ನ ಉಗ್ರರೂಪವನ್ನು ನಿಧಾನವಾಗಿ ಕಡಿಮೆ ಮಾಡುತ್ತಿದೆ. ಗುಜರಾತ್ನಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದ್ದ ಚಂಡಮಾರುತ ಸದ್ಯ ಪಾಕಿಸ್ತಾನದತ್ತ ಸಾಗುತ್ತಿದೆ.
ಚಂಡಮಾರುತ ಗುಜರಾತ್ನಲ್ಲಿ ಭಾರೀ ಅನಾಹುತ ಸೃಷ್ಟಿಸಿದ್ದು, ಸುಮಾರು 940 ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ನೂರಾರು ಮರಗಳು ಧರೆಗುರುಳಿವೆ. ಜಖೌ ಬಂದರಿನ ಬಳಿ ಭೂಕುಸಿತ ಉಂಟು ಮಾಡಿದೆ. ಚಂಡಮಾರುತವು ಗಂಟೆಗೆ 108 ಕಿಮೀ ವೇಗದಲ್ಲಿ ಸಾಗುತಿದೆ. ಚಂಡಮಾರುತದ ಬೀಸಿದ ನಂತರ ಬಲವಾದ ಗಾಳಿಯೊಂದಿಗೆ ಭಾರೀ ಮಳೆಯೂ ಆಗಿದೆ.