ಅಂಜನಾದ್ರೊ: ಜಾಲ್ಸೂರು ಗ್ರಾಮದ ಅಡ್ಕಾರಿನ ಅಂಜನಾದ್ರಿ ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರದ ಕಾಲಾವಧಿ ಜಾತ್ರಾಮಹೋತ್ಸ ವವು ಫೆ.26ರಿಂದ 28ರವರೆಗೆ ಜರುಗಲಿದ್ದು, ಫೆ.19ರಂದು ಮಹೂರ್ತದ ಗೊನೆ ಮುಹೂರ್ತ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಬ್ರಹ್ಮಶ್ರೀ ವೇದಮೂರ್ತಿ ಪುರೋಹಿತ ನಾಗರಾಜ ಭಟ್, ಆಡಳಿತ ಸಮಿತಿ ಅಧ್ಯಕ್ಷ ಶಿವರಾಮ ರೈ ಕುರಿಯ, ಕೋಶಾಧಿಕಾರಿ ಜಯಂತ ಗೌಡ ಅಡ್ಕಾರು, ಆಡಳಿತ ಸಮಿತಿ ಪದಾಧಿಕಾರಿಗಳಾದ ಸೀತಾರಾಮ ಗೌಡ ಆಲಂಕಲ್ಯ, ಕೃಷ್ಣ ಕುಮಾರ್ ಅಡ್ಕಾರು, ನಾರಾಯಣ ಕಜೆಗದ್ದೆ ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
previous post