ಸುಳ್ಯ: ಸುಳ್ಯದ ವರ್ತಕರ ಭವನದಲ್ಲಿ ಕಾರ್ಯಚರಿಸುತ್ತಿದ್ದ ಅಂಜಲಿ ಮೊಂಟೆಸ್ಸರಿ ಸ್ಕೂಲ್ ಆಯುರ್ವೇದ ಕಾಲೇಜು ಮುಂಭಾಗವಿರುವ ಅಡ್ಕಾರ್ ಆರ್ಕೆಡ್ ಗೆ ಸ್ಥಳಾಂತರಗೊಡು ಶುಭಾರಂಭಗೊಂಡ ಹಿನ್ನಲೆಯಲ್ಲಿ
ಅಕಾಡೆಮಿಯ ಆಫ್ ಲಿಬರಲ್ ಎಜುಕೇಶನ್ನ ಅಧ್ಯಕ್ಷ ಡಾ. ಕೆ.ವಿ.ಚಿದಾನಂದ, ಸವಣೂರು ವಿದ್ಯಾ ಸಂಸ್ಥೆಯ ಸ್ಥಾಪಕರಾದ ಸೀತಾರಾಮ ರೈ ಭೇಟಿ ನೀಡಿ ಶುಭ ಹಾರೈಸಿದರು. ಶಾಲಾ ನಿರ್ದೇಶಕಿ ಗೀತಾಂಜಲಿ ಟಿ.ಜಿ.ಅವರನ್ನು ಸನ್ಮಾನಸಿ ಅಭಿನಂಸಿದರು. ಕೆವಿಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿ, ಅಗ್ರೋ ಸಂಸ್ಥೆಯ ಮಾಲಕ ರಾಮಚಂದ್ರ ಪಿ., ಉದ್ಯಮಿ ಪ್ರಭಾಕರನ್ ನಾಯರ್, ಕಟ್ಟಡ ಮಾಲಕ ದಿನೇಶ್ ಅಡ್ಕಾರ್ ಉಪಸ್ಥಿತರಿದ್ದರು.