ಸುಳ್ಯ: ಅಂಜಲಿ ಮೋಂಟೆಸ್ಸೋರಿ ಶಾಲೆಯಲ್ಲಿ ಪೋಷಕರ ಪುನಶ್ಚೇತನ ಕಾರ್ಯಾಗಾರ ನಡೆಯಿತು. ಪೋಷಕರಾದ ಸುಶಾನ್ ಕೆ.ಎಸ್. ಹಾಗೂ ಶಿಲ್ಪಾ ಗಣೇಶ್ ಅವರನ್ನು ಪೋಷಕರ ಪ್ರತಿನಿಧಿಯಾಗಿ ಆಯ್ಕೆ
ಮಾಡಲಾಯಿತು. ಸಂಸ್ಥೆಯ ಅಧ್ಯಕ್ಷ ಶುಭಕರ ಬೊಳುಗಲ್ಲು ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಸಂಚಾಲಕಿ ಗೀತಾಂಜಲಿ ಟಿ.ಜಿ ಮೋಂಟೆಸ್ಸೋರಿ ಶಿಕ್ಷಣ ಪದ್ದತಿಯ ಬಗ್ಗೆ ಮಾಹಿತಿ ನೀಡಿದರು ಹಾಗೂ ಪದ್ಧತಿಯಲ್ಲಿ ಅಳವಡಿಸಲಾಗುವ ಚಟುವಟಿಕೆಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಪೋಷಕರಾದ ಚೇತನ್ ಬಿ, ಶಿಕ್ಷಕಿ ಲಕ್ಷ್ಮಿ ಶೆಟ್ಟಿ ಹಾಗೂ ಪೋಷಕರು ಉಪಸ್ಥಿತರಿದ್ದರು.