ಸುಳ್ಯ: ಸುಳ್ಯ ನಗರ ಪಂಚಾಯತ್ನ 2023-24 ನೇ ಸಾಲಿನ ಬಜೆಟ್ ಫೆ.28ರಂದು ಮಂಡಿಸಲಾಯುತು. 4.18 ಕೋಟಿ ಮಿಗತೆ ಬಜೆಟನ್ನು ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಜ ಮಂಡಿಸಿದ್ದಾರೆ.13.19ಕೋಟಿ ಆದಾಯ ಮತ್ತು 9.01 ಕೋಟಿ ಖರ್ಚು ನಿರೀಕ್ಷಿಸಿಸಲಾಗಿದೆ. ಎಸ್ಎಫ್ಸಿ ವೇತನ ಅನುದಾನ 30 ಲಕ್ಷ, ದಾರಿದೀಪ ವಿದ್ಯುತ್ ಅನುದಾನ 28 ಲಕ್ಷ, ನೀರು ಸರಬರಾಜು ವಿದ್ಯುತ್ ಅನುದಾನ
1.06 ಕೋಟಿ, ಎಸ್.ಎಫ್.ಸಿ ಮುಕ್ತ ನಿಧಿ ಅನುದಾನ 42 ಲಕ್ಷ, 15ನೇ ಹಣಕಾಸು 90 ಲಕ್ಷ, ಎಸ್ಎಫ್ಸಿ ಕುಡಿಯುವ ನೀರಿನ ಅನುದಾನ 10 ಲಕ್ಷ, ಕಟ್ಟಡ ಬಾಡಿಗೆ 26.50 ಲಕ್ಷ, ಘನ ತ್ಯಾಜ್ಯ ನಿರ್ವಹಣಾ ಶುಲ್ಕ 18 ಲಕ್ಷ, ನೀರು ಸರಬರಾಜು ಶುಲ್ಕ 1.24 ಕೋಟಿ, ಮೀನು ಮಾರುಕಟ್ಟೆ ಬಾಡಿಗೆ 22 ಲಕ್ಷ, ಆಸ್ತಿ ತೆರಿಗೆ ಆದಾಯ 1.97 ಕೋಟಿ ಸೇರಿ ವಿವಿಧ ಮೂಲಗಳಿಂದ 7,76,81,050 ಆದಾಯ ನಿರೀಕ್ಷಿಸಲಾಗಿದ್ದು ಆರಂಭಿಕ ಶಿಲ್ಕು 5,42,90,562 ಸೇರಿ ಒಟ್ಟು 13,19,71,612 ಆದಾಯ ನಿರೀಕ್ಷಿಸಲಾಗಿದೆ.

ಸಿಬ್ಬಂದಿ ವೇತನ 86 ಲಕ್ಷ, ದಾರಿ ದೀಪ ವಿದ್ಯುತ್ ವೆಚ್ಚ 28 ಲಕ್ಷ, ನೀರು ಸರಬರಾಜು ವಿದ್ಯುತ್ ವೆಚ್ಚ 1.25 ಕೋಟಿ, 14ನೇ ಹಾಗು 15ನೇ ಹಣಕಾಸು ಅನುದಾನ ಮತ್ತು ಪಂಚಾಯತ್ ನಿಧಿಯಲ್ಲಿ ರಸ್ತೆ, ಚರಂಡಿ ಹಾಗು ಇತರ ಅಭಿವೃದ್ಧಿಗೆ 1.29 ಕೋಟಿ, ಪ್ರಾಕೃತಿಕ ವಿಕೋಪ, ಬರಪರಿಹಾರ ಅನುದಾನದಲ್ಲಿ ನೀರು ಸರಬರಾಜಿಗೆ 10 ಲಕ್ಷ, ಜಾಹಿರಾತು ವೆಚ್ಚ 5 ಲಕ್ಷ, ಕಚೇರಿ, ವಿದ್ಯುತ್ ದೂರವಾಣಿ, ಅಂಚೆ 1.5 ಲಕ್ಷ, ಇತರ ಸಾಮಾನ್ಯ ವೆಚ್ಚ 10 ಲಕ್ಷ, ಕಟ್ಟಡ ನಿರ್ವಹಣೆ ಮತ್ತು ದುರಸ್ತಿ, 12 ಲಕ್ಷ, ವಾಣೀಜ್ಯ ಸಂಕೀರ್ಣ ರಚನೆ 95 ಲಕ್ಷ, ರಸ್ತೆಗಳ ದುರಸ್ತಿ, ನಿರ್ವಹಣೆ 40 ಲಕ್ಷ, ಚರಂಡಿ ದುರಸ್ತಿ ನಿರ್ವಹಣೆಗೆ 20 ಲಕ್ಷ, ದಾರಿ ದೀಪ ದುರಸ್ತಿ, ನಿರ್ವಹಣೆಗೆ 18 ಲಕ್ಷ, ದಾರಿ ದೀಪ ಉಪಕರಣ ಖರೀದಿಗೆ 5 ಲಕ್ಷ, ಸ್ಮಶಾನ ದುರಸ್ತಿ ಮತ್ತು ನಿರ್ವಹಣೆ 2 ಲಕ್ಷ, ಘನತ್ಯಾಜ್ಯ ನಿರ್ವಹಣೆ, ಪೌರ ಕಾರ್ಮಿಕರ ವೇತನ 45.20 ಲಕ್ಷ, ಘನ ತ್ಯಾಜ್ಯ ಇತರ ಸಾಮಾನ್ಯ ವೆಚ್ಚ 3 ಲಕ್ಷ, ಘನತ್ಯಾಜ್ಯ ವಾಹನ ಇಂಧನ 6 ಲಕ್ಷ, ಘನ ತ್ಯಾಜ್ಯ ವಾಹನ ದುರಸ್ತಿ 5 ಲಕ್ಷ, ಘನ ತ್ಯಾಜ್ಯ ವಿಲೇವಾರಿಗೆ 10 ಲಕ್ಷ, ಘನತ್ಯಾಜ್ಯ ಘಟಕ ಉನ್ನತೀಕರಣಕ್ಕೆ 40 ಲಕ್ಷ, ಸಾರಿಗೆ ನಿಯಂತ್ರಣ ಮತ್ತು ರಸ್ತೆ ಸೂಚನಾ ಫಲಕ ಅಳವಡಿಕೆಗೆ 5 ಲಕ್ಷ, ನೀರು ಸರಬರಾಜು ಇತರ ಸಾಮಾನ್ಯ ವೆಚ್ಚ 5 ಲಕ್ಷ, ನೀರು ಸರಬರಾಜು, ದುರಸ್ತಿ, ನಿರ್ವಹಣೆಗೆ 45 ಲಕ್ಷ, ನೀರು ಸರಬರಾಜು ಇಂಧನ ವೆಚ್ಚ 5 ಲಕ್ಷ, ನೀರು ಸರಬರಾಜು ಸಿಬ್ಬಂದಿ ಹೊರಗುತ್ತಿಗೆ ವೆಚ್ಚ 12 ಲಕ್ಷ, ಒಳಚರಂಡಿ ದುರಸ್ತಿ, ನಿರ್ವಹಣೆಗೆ 2 ಲಕ್ಷ, ಉದ್ಯಾನವನ ದುರಸ್ತಿ, ನಿರ್ವಹಣೆಗೆ 4 ಲಕ್ಷ, ಕಚೇರಿ ಉಪಕರಣ,ಪೀಠೋಪಕರಣ 7.5 ಲಕ್ಷ, ಸರಕಾರಕ್ಕೆ ಪಾವತಿಸಬೇಕಾದ ಉಪಕರಗಳಿಗೆ 38.29 ಲಕ್ಷ, ಪ.ಜಾ.ಪ.ಪಂ.ಅಭಿವೃದ್ಧಿ ನಿಧಿ 19.60 ಲಕ್ಷ, ಬಡ ಜನರ ಅಭಿವೃದ್ಧಿ ನಿಧಿ 2.88 ಲಕ್ಷ, ವಿಶೇಷ ಚೇತನ ಅಭಿವೃದ್ಧಿ ನಿಧಿ 1.99 ಲಕ್ಷ ರೂಗಳನ್ನು ಮೀಸಲಿರಿಸಲಾಗಿದ್ದು ಒಟ್ಟು 9,01,07, 814 ರೂ ಖರ್ಚು ನಿರೀಕ್ಷಿಸಲಾಗಿದೆ. 4,18,63,798 ರೂ ಉಳಿಕೆ ನಿರೀಕ್ಷಿಸುವ ಆಯವ್ಯಯವನ್ನು ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಮಂಡಿಸಿದ್ದಾರೆ.
ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಮುಖ್ಯಾಧಿಕಾರಿ ಸುಧಾಕರ ಎಂ.ಎಚ್, ಆಡಳಿತ, ವಿರೋಧ ಪಕ್ಷದ ಸದಸ್ಯರು ಭಾಗವಹಿಸಿದ್ದರು.