ಸುಳ್ಯ: ಸುಳ್ಯ ನಗರದ ಬೆಟ್ಟಂಪಾಡಿ ಆಶ್ರಯ ಕಾಲೋನಿ ಪರಿಸರದಲ್ಲಿ ನಗರ ಪಂಚಾಯತ್ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಅಂಗನವಾಡಿ ಕಟ್ಟಡದ ಗುದ್ದಲಿ ಪೂಜೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಿದರು. ನಗರ ಪಂಚಾಯತ್ನ 15 ಲಕ್ಷ ರೂ ಅನುದಾನದಲ್ಲಿ ಬೆಟ್ಟಂಪಾಡಿಯಲ್ಲಿ ಅಂಗನವಾಡಿ ಕಟ್ಟಡವು
ನಿರ್ಮಾಣವಾಗಲಿದೆ. ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಭಾಗೀರಥಿ ಮುರುಳ್ಯ ಕಟ್ಟಡ ಕಾಮಗಾರಿಯ ಶೀಘ್ರ ಪೂರ್ಣಗೊಂಡು ವಿದ್ಯಾರ್ಥಿಗಳ ಉಪಯೋಗಕ್ಕೆ ಲಭ್ಯವಾಗಲೆಂದು ಆಶಿಸಿದರು. ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ವಂದಿಸಿದರು. ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯರಾದ ನಾರಾಯಣ,ಬುದ್ಧ ನಾಯ್ಕ್, ಸುಧಾಕರ್, ರಿಯಾಜ್ ಕಟ್ಟೆಕಾರ್, ಶೀಲಾವತಿ ಕುರುಂಜಿ, ಶಶಿಕಲಾ ನೀರಬಿದಿರೆ, ಪ್ರವಿತಾ ಪ್ರಶಾಂತ್, ಶಿಲ್ಪಾ ಸುದೇವ್, ಸ್ಥಳೀಯರಾದ ಆನಂದ ಬೆಟ್ಟಂಪಾಡಿ, ಚಂದ್ರಬೆಟ್ಟಂಪಾಡಿ, ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿ ಮತ್ತು ಊರವರು ಉಪಸ್ಥಿತರಿದ್ದರು.