ಸಂಪಾಜೆ: ಸಂಪಾಜೆ ಗ್ರಾಮದ ಗಡಿಕಲ್ಲು ನೂತನ ಅಂಗನವಾಡಿ ಕೇಂದ್ರದ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಅಂಗನವಾಡಿ ಕಟ್ಟಡದ ಅಡಿಪಾಯ ಗುರುತು ಮಾಡುವ ಕಾರ್ಯಕ್ರಮ
ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ, ಪಂಚಾಯತ್ ಸದಸ್ಯರಾದ ಸುಂದರಿ ಮುಂಡ ಡ್ಕ, ಎಸ್. ಕೆ. ಹನೀಫ್, ವಿಜಯ ಕುಮಾರ್ ಅಲಡ್ಕ ಹಾಗೂ ಇಂಜಿನಿಯರ್, ಗುತ್ತಿಗೆ ದಾರರು, ಊರವರು ಉಪಸ್ಥಿತರಿದ್ದರು, 15ಲಕ್ಷದ 50ಸಾವಿರ ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು 5 ಲಕ್ಷ ರೂಪಾಯಿ ಅನುದಾನ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ. ಎಮ್. ಶಾಹಿದ್ ತೆಕ್ಕಿಲ್ ಮೂಲಕ ವಿಧಾನ ಪರಿಷತ್ ಸದಸ್ಯರಾದ ನಿಸಾರ್ ಅಹಮದ್ ನೀಡಿದ್ದು ಉಳಿದ ಅನುದಾನ ಉದ್ಯೋಗ ಖಾತ್ರಿ ಯೋಜನೆ ಹಾಗೂ ಇತರ ಮೂಲಗಳಿಂದ ಹೊಂದಿಸಿಕೊಂಡು ಕಾಮಗಾರಿ ಅರಂಭಿಸಲಾಗಿದೆ ಎಂದು ಗ್ರಾ.ಪಂ.ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ ತಿಳಿಸಿದ್ದಾರೆ.