ಸುಳ್ಯ: ಸುಳ್ಯ ನಗರದಲ್ಲಿ ಅಮೃತ್ 2 ಯೋಜನೆಯ ಪೈಪ್ ಲೈನ್ ಅಳವಡಿಸದ ಕಡೆಗಳಲ್ಲಿ ಕೂಡಲೇ ಅಳವಡಿಸಲು ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ನಗರ ಪಂಚಾಯತ್ ಮುಖ್ಯಾಧಿಕಾರಿ ಬಸವರಾಜ್ ಹಾಗೂ ನ.ಪಂ. ಆಡಳಿತಾಧಿಕಾರಿ, ತಹಶೀಲ್ದಾರ್ ಎಂ.ಮಂಜುಳ ಅವರಿಗೆ ಮನವಿ ಸಲ್ಲಿಸಲಾಯಿತು. ನಗರದ ಅಟಲ್ ನಗರದಿಂದ ಸೂರ್ತಿಲ ರಸ್ತೆ ತನಕ,ಕಾಯರ್ತೋಡಿ ದೇವಸ್ಥಾನ ಬಳಿ ಹಳೆ ಸಂಪರ್ಕ ಇರುವ
5 ಮನೆಗಳು,ರಂಗ ಮನೆ ಆಸುಪಾಸು, ಭಾರತ್ ಆಗ್ರೋ, ಆದಿಶಕ್ತಿ ಬಳಿ 5 ಮನೆ, ಪರಿವಾರಕಾನ ಪೈಪ್ ಲೈನ್ ಕೆಲಸ ಆಗಿಲ್ಲ, ಕಾಯರ್ತೋಡಿಯ ಸೂರ್ತಿಲ ಬಳಿ ಕೆಲವು ಮನೆ ಬಾಕಿ ಇದೆ.
ಬೋರುಗುಡ್ಡೆಯ ಕೆಲವು ಮನೆಗಳಿಗೆ ಸಂಪರ್ಕ ಬಾಕಿಯಿದೆ, ಬೂಡು ಭಾಗದಲ್ಲಿ, ಕುಕ್ಕಾಜೆ ಕಾನದಿಂದ ಹೊಸಗದ್ದೆ ರಸ್ತೆ ತನಕ ಪೈಪ್ ಲೈನ್ ಆಗಿಲ್ಲ. ಪೈಚಾರಿನಿಂದ ಸೋಣಂಗೇರಿ ತನಕ ಸೇರಿ ನಗರದ ವಿವಿಧ ಕಡೆ ಅಳವಡಿಕೆ ಆಗಿಲ್ಲ ಇದನ್ನು ಕೂಡಲೇ ಸಂಪರ್ಕ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ
ಕುಸುಮಾಧರ ಎ.ಟಿ, ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್.ಎಂ, ಪ್ರಮುಖರಾದ ನವೀನ ಕುದ್ಪಾಜೆ, ರಮೇಶ್ ಇರಂತಮಜಲು, ಜಗನ್ನಾಥ ಜಯನಗರ, ಪ್ರಶಾಂತ್ ಕಾಯರ್ತೋಡಿ, ದೀಪಕ್ ಕಾಯರ್ತೋಡಿ, ಬಾಲಕೃಷ್ಣ ಮೂಡತ್ತಾಯ, ದಾಮೋದರ ಮಣಿಯಾಣಿ, ಸೌಮ್ಯ ಇರಂತಮಜಲು ಉಪಸ್ಥಿತರಿದ್ದರು.









