ಹೈದರಾಬಾದ್: ಹೈದರಾಬಾದ್ನಲ್ಲಿ ಚಿತ್ರವೊಂದರ ಚಿತ್ರೀಕರಣದಲ್ಲಿದ್ದ ಬಾಲಿವುಡ್ನ ಬಿಗ್ಬಿ ಅಮಿತಾಭ್ ಬಚ್ಚನ್ ಶೂಟಿಂಗ್ ವೇಳೆ ಬಿದ್ದು ಗಾಯಗೊಂಡಿದ್ದಾರೆ. ಈ ಬಗ್ಗೆ ಬ್ಲಾಗ್ನಲ್ಲಿ ಬರೆದುಕೊಂಡಿರುವ
ಅಮಿತಾಬ್ ಬಚ್ಚನ್, ‘ಹೈದರಾಬಾದ್ನಲ್ಲಿ ಪ್ರಾಜೆಕ್ಟ್ ‘ಕೆ’ ಚಿತ್ರೀಕರಣದಲ್ಲಿ, ಆಕ್ಷನ್ ದೃಶ್ಯ ಚಿತ್ರಿಸುವ ಸಮಯದಲ್ಲಿ, ನನಗೆ ಗಾಯವಾಗಿದೆ. ಪಕ್ಕೆಲುಬಿಗೆ ಏಟಾಗಿದೆ ಹೈದರಾಬಾದ್ನ ಎಐಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿರುವೆ. ಚೇತರಿಕೆಗೆ ಕೆಲ ದಿನಗಳು ಬೇಕು. ವಿಶ್ರಾಂತಿ ಅಗತ್ಯವಿದೆ’ ಎಂದು ಬರೆದುಕೊಂಡಿದ್ದಾರೆ.
ಚಿತ್ರೀಕರಣವು ಹೈದರಾಬಾದ್ ಬಳಿ ನಡೆಯುತ್ತಿತ್ತು, ಸದ್ಯ ಮುಂಬೈನ ನಿವಾಸದಲ್ಲಿ ಅಮಿತಾಭ್ ವಿಶ್ರಾಂತಿ ಪಡೆಯುತ್ತಿದ್ದಾರೆ.