ಗೂನಡ್ಕ:ಗೂನಡ್ಕದಲ್ಲಿ ಸೆ.24ರಂದು ಕಂಟೈನರ್ ಸ್ಕೂಟಿ ಅಪಘಾತದಲ್ಲಿ ತೀವ್ರ ಗಾಯಗೊಂಡ ಕಾಸರಗೋಡು ಮೂಲದ ಯುವಕನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕೊಂಡೊಯ್ಯಲು ತಾಲೂಕು ಅಂಬುಲನ್ಸ್ ಚಾಲಕ ಮಾಲಕರ
ಸಂಘದ ಸದಸ್ಯರು ಉಚಿತ ಸೇವೆ ನೀಡಿದ್ದಾರೆ. ಪ್ರಥಮ ಚಿಕಿತ್ಸೆಗಾಗಿ ಸುಳ್ಯದ ಆಸ್ಪತ್ರೆಗೆ AIKMCC ಸುಳ್ಯದ ಅಂಬುಲನ್ಸ್ನಲ್ಲಿ ತಾಜುದ್ದೀನ್ ಟರ್ಲಿ ಉಚಿತ ಸೇವೆ ನೀಡಿದರು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಕೆಎಂಸಿ ಆಸ್ಪತ್ರೆಗೆ ಸುಳ್ಯ ಲೈಫ್ ಕೇರ್ ಅಂಬುಲನ್ಸ್ ಸುಳ್ಯದ ರಫೀಕ್ ಕೆ.ಎಂ. ಉಚಿತ ಸೇವೆ ನೀಡಿದರು. ತಂಡ ಸೇವೆ ಪ್ರಶಂಸೆಗೆ ಪಾತ್ರವಾಗಿದೆ.









